ಮಂಗಳವಾರ, ಜೂನ್ 15, 2021
27 °C

ಇಸ್ಪೀಟ್ ಜೂಜಾಟ: 14 ಮಂದಿ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಇಲ್ಲಿನ ಬಾಕ್ಸೈಟ್ ರಸ್ತೆಯ ರಾಜೀವ್‌ಗಾಂಧಿ ನಗರ ಸಾರ್ವಜನಿಕ ಜಾಗದಲ್ಲಿ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ ಆರೋಪದ ಮೇಲೆ 14 ಮಂದಿಯನ್ನು ಎಪಿಎಂಸಿ ಠಾಣೆ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ಸಮೀಪ ಪಠಾಣ, ನರಸಿಂಗ ರಜಪೂತ, ಬಾಳು ಬಿರಾಜೆ, ವಿಕ್ಕಿ ಕೇಸರಕರ, ಮತೀನ ಶೇಖನೂರ, ಅತೀಬ ಅತ್ತಾರ, ಮತೀಬ ಸವದತ್ತಿಕರ, ಸಾಕೀಬ ತಂಬಾಬೋಲೆ, ವಿಜಯ ದೇಮನ್ನಾಚೆ, ವಿನಾಯಕ ಬೆನ್ನಾಳಕರ, ಟಿಂಕು ದೊಡ್ಡಮನಿ, ದಿನೇಶ ಪಾಟೀಲ, ಸಿದ್ಧಾಂತ ಪಾಟೀಲ ಹಾಗೂ ವಾಸೀಮ ಖಾನಾಪುರೆ ಬಂಧಿತರು. ಅವರಿಂದ ₹ 1.57 ಲಕ್ಷ, 2 ಮೊಬೈಲ್ ಫೋನ್‌, ಮೂರು ದ್ವಿಚಕ್ರವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ಇನ್‌ಸ್ಪೆಕ್ಟರ್‌ ಜಾವೇದ ಮುಶಾಪುರಿ ನೇತೃತ್ವದಲ್ಲಿ ಸಿಬ್ಬಂದಿ ಕಾರ್ಯಾಚರಣೆ ನಡೆಸಿ, ಆರೋಪಿಗಳನ್ನು ಬಂಧಿಸಿದ್ದಾರೆ. ಅವರ ವಿರುದ್ಧ ಎ‍ಪಿಎಂಸಿ ಠಾಣೆಯಲ್ಲಿ ಐಪಿಸಿ ಹಾಗೂ ಕರ್ನಾಟಕ ಸಾಂಕ್ರಾಮಿಕ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು