ತಂದೆಯ ಪರ ಮತಯಾಚಿಸಿದ ಗಣೇಶ ಹುಕ್ಕೇರಿ

ಗುರುವಾರ , ಏಪ್ರಿಲ್ 25, 2019
31 °C

ತಂದೆಯ ಪರ ಮತಯಾಚಿಸಿದ ಗಣೇಶ ಹುಕ್ಕೇರಿ

Published:
Updated:
Prajavani

ಅಥಣಿ: ‘ಕಾಂಗ್ರೆಸ್‌ ಬಡವರ ಪಕ್ಷವಾಗಿದೆ. ಬಡವರ ಉದ್ಧಾರಕ್ಕಾಗಿ ಪಕ್ಷದ ಅಭ್ಯರ್ಥಿ ಪ್ರಕಾಶ ಹುಕ್ಕೇರಿ ಅವರಿಗೆ ಮತ ನೀಡಿ’ ಎಂದು  ಶಾಸಕ ಗಣೇಶ ಹುಕ್ಕೇರಿ ಕೋರಿದರು.

ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿದಿರುವ ತಮ್ಮ ತಂದೆ, ಪ್ರಕಾಶ ಹುಕ್ಕೇರಿ ಪರವಾಗಿ ಐಗಳಿ ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯ ಅಡ್ಡಹಳ್ಳಿ, ಕೊಹಳ್ಳಿ , ಯಕ್ಕಂಚಿ ಮುಂತಾದ ಹಳ್ಳಿಗಳಲ್ಲಿ ಶನಿವಾರ ಅವರು ಮತಯಾಚಿಸಿದರು.

‘₹ 1,000 ಕೋಟಿ ಅನುದಾನ ತಂದು ಹಲವು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಅದರಲ್ಲಿ ಅಥಣಿಗೆ ಕೂಡ ಸಾಕಷ್ಟು ಅನುದಾನ ಕೊಟ್ಟಿದ್ದಾರೆ. ಇನ್ನೂ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಅವರು ಬದ್ಧರಾಗಿದ್ದಾರೆ. ಇನ್ನೊಮ್ಮೆ ಅವರಿಗೆ ಅವಕಾಶ ನೀಡಿ’ ಎಂದು ಕೋರಿದರು.

ಶಾಸಕ ಮಹೇಶ ಕುಮಠಳ್ಳಿ ಮಾತನಾಡಿ, ‘ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹಾಗೂ ಜಾರಕಿಹೋಳಿ ಸಹೋದರರ ಸಹಕಾರದಿಂದ ಹಲವು ಕಾಮಗಾರಿಗಳು ಅಥಣಿಯಲ್ಲಿ ನಡೆದಿವೆ. ಕೆರೆ ತುಂಬುವ ಯೋಜನೆಗೆ ಪ್ರಕಾಶ ಹುಕ್ಕೇರಿ ಸಾಕಷ್ಟು ಅನುದಾನ ಒದಗಿಸಿದ್ದಾರೆ’ ಎಂದರು.

ಮಾಜಿ ಶಾಸಕ ಶಹಜಹಾನ ಡೊಂಗರಗಾವ, ಶ್ಯಾಮ ಪೂಜಾರಿ, ಸತ್ಯಪ್ಪಾ ಬಾಗೆನ್ನವರ, ಅಪ್ಪಾಸಾಬ ಅಲಿಬಾದಿ, ಬಸವರಾಜ ಬುಟಾಳಿ, ದರೆಪ್ಪಾ ಠಕ್ಕಣವರ, ಸುನೀಲ ಸಂಕ, ನಿಂಗಪ್ಪಾ ನಂದೇಶ್ವರ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !