ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬನ್ನಂಜೆ ರಾಜಾ ಸೇರಿ 8 ಮಂದಿಗೆ ಜೀವಾವಧಿ ಶಿಕ್ಷೆ

Last Updated 4 ಏಪ್ರಿಲ್ 2022, 8:38 IST
ಅಕ್ಷರ ಗಾತ್ರ

ಬೆಳಗಾವಿ: ಉತ್ತರಕನ್ನಡ ಜಿಲ್ಲೆ ಅಂಕೋಲಾದ ಉದ್ಯಮಿ, ಸಹಕಾರಿ ಧುರೀಣ ಆರ್.ಎನ್. ನಾಯಕ ಕೊಲೆ ಪ್ರಕರಣದಲ್ಲಿ ಭೂಗತ ಪಾತಕಿ ಬನ್ನಂಜೆ ರಾಜಾ ಸೇರಿದಂತೆ 8 ಮಂದಿಗೆ ಜೀವಾವಧಿ ಶಿಕ್ಷೆ, ಮತ್ತೊಬ್ಬಗೆ 5 ವರ್ಷ ಕಾರಾಗೃಹ ಶಿಕ್ಷೆ ವಿಧಿಸಿ ಇಲ್ಲಿನ ‘ಕೋಕಾ’ (ಕರ್ನಾಟಕ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ) ನ್ಯಾಯಾಲಯ ಸೋಮವಾರ ತೀರ್ಪು ನೀಡಿದೆ.

ರಾಜ್ಯದ ಮೊದಲ ‘ಕೋಕಾ’ ಪ್ರಕರಣ ಇದಾಗಿದೆ. ಬನ್ನಂಜೆ ರಾಜಾ, ನಾಯಕ ಅವರ ಬಳಿ ₹ 3 ಕೋಟಿ ಹಫ್ತಾ ಕೇಳಿದ್ದ. ಕೊಡದಿದ್ದಕ್ಕೆ ನಡೆದಿರುವ ಕೊಲೆ ಇದಾಗಿದೆ.

ಪ್ರಧಾನ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಧೀಶ ಸಿ.ಎಂ. ಜೋಶಿ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದರು.

ಉತ್ತರಪ್ರದೇಶ ಮೂಲದ ಜಗದೀಶ್ ಪಟೇಲ್, ವಿಜಯಪುರದ ಅಂಭಾಜಿ ಬಂಡುಗಾರ, ಉಡುಪಿ ಜಿಲ್ಲೆ ಕಾರ್ಕಳದ ಮಂಜುನಾಥ ಯಾನೆ ಗಣೇಶ ಲಕ್ಷ್ಮಣ ಭಜಂತ್ರಿ, ಹಾಸನದ ಮಹೇಶ ಅಚ್ಚಂಗಿ, ಕೇರಳದ ಸಂತೋಷ್‌ ಎಂ.ಬಿ. (ಸುಳ್ಯ ಸಂತೋಷ್), ಉಡುಪಿ ಮೂಲದ ಬನ್ನಂಜೆ ರಾಜಾ, ಬೆಂಗಳೂರಿನ ಜಗದೀಶ್ ಚಂದ್ರರಾಜ ಅರಸ್, ಉತ್ತರಪ್ರದೇಶದ ಅಂಕಿತ್‌ಕುಮ…

ಬನ್ನಂಜೆ ರಾಜಾ ಸೇರಿದಂತೆ ಅಪರಾಧಿಗಳಿಗೆ ಕೋಕಾ ನ್ಯಾಯಾಲಯದಿಂದ ಮರಣದಂಡನೆ ಶಿಕ್ಷೆ ವಿಧಿಸಬೇಕಿತ್ತು. ಆದರೆ, ಜೀವಾವಧಿ ಶಿಕ್ಷೆಯಷ್ಟೆ ಆಗಿದೆ. ಇದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗುವುದು ಎಂದುವಿಶೇಷ ಸರ್ಕಾರಿ ಅಭಿಯೋಜಕಕೆ.ಜಿ‌. ಪುರಾಣಿಕಮಠ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT