ಗುರುವಾರ , ಆಗಸ್ಟ್ 11, 2022
20 °C
7 ಮಂದಿಗೆ ಗಂಭೀರ ಗಾಯ, 26 ಜನರ ವಿರುದ್ಧ ದೂರು

ಅಂಕಲಗಿ: 2 ಗುಂಪುಗಳ ನಡುವೆ ಮಾರಾಮಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗೋಕಾಕ: ತಾಲ್ಲೂಕಿನ ಅಂಕಲಗಿ ಗ್ರಾಮದಲ್ಲಿ ಎರಡು ಕುಟುಂಬಗಳ ನಡುವೆ ಮಾರಾಮಾರಿ ನಡೆದಿದೆ.

ಸೋಮವಾರ ಸಂಜೆ ನಡೆದಿರುವ ಘಟನೆಯ ಕೆಲ ವಿಡಿಯೊ ಹಾಗೂ ಫೋಟೊ ಸಾಮಾಜಿಕ ಮಾಧ್ಯಮದಲ್ಲಿ ಗುರುವಾರ ವೈರಲ್ ಆದ ನಂತರ ಬೆಳಕಿಗೆ ಬಂದಿದೆ. ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ ಗಲಾಟೆಯಾಗಿದೆ ಎಂದು ತಿಳಿದುಬಂದಿದೆ.

‘ಒಂದು ಕುಟುಂಬದ ಕೆಲವರು ಇನ್ನೊಂದು ಕುಟುಂಬದ ಬಾಲಕನ ಮೇಲೆ ಗಂಭೀರವಾಗಿ ಹಲ್ಲೆ ಮಾಡಿದ್ದರು. ಈ ವಿಷಯವಾಗಿ ಎರಡೂ ಕುಟುಂಬಗಳ ನಡುವೆ ಗಲಾಟೆ ನಡೆದಿದೆ. ಮಾರಕಾಸ್ತ್ರಗಳಿಂದ ಪರಸ್ಪರ ಹಲ್ಲೆ ನಡೆಸಿದ್ದಾರೆ. ಖಾರದ ಪುಡಿ ತೂರಿ ಕೊಲೆಗೆ ಯತ್ನಿಸಿದ್ದಾರೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಗಾಯಗೊಂಡವರನ್ನು ಅದೇ ಗ್ರಾಮದ ಸಂಜು ಅಣ್ಣುಗುರುಜಿ ಚಿಕ್ಕೂಗೋಳ (45), ಅಕ್ಷಯ ಅಲಿಯಾಸ್ ಲಕ್ಷ್ಮಣ ಮಲ್ಲೇಶಿ ಚಿಕ್ಕೂಗೋಳ (19), ಆಕಾಶ ಸಂಜು ಚಿಕ್ಕೂಗೋಳ (17), ಗಾಯತ್ರಿ ಸಂಜು ಚಿಕ್ಕೂಗೋಳ (39), ಅಕ್ಷತಾ ಮಲ್ಲೇಶಿ ಚಿಕ್ಕೂಗೋಳ (17), ರೇಣುಕಾ ಮಲ್ಲೇಶಿ ಚಿಕ್ಕೂಗೋಳ (30), ಪ್ರೀತಿ ಸಂಜು ಚಿಕ್ಕೂಗೋಳ (14) ಎಂದು ಗುರುತಿಸಲಾಗಿದೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಂಕಲಗಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ರಾಜು ಬಸವಣ್ಣೆಪ್ಪ ತಳವಾರ, ಶಿವಾನಂದ ತಳವಾರ, ಶಂಕರ ತಳವಾರ, ರಾಕೇಶ ತಳವಾರ, ಶ್ರೀಧರ ತಳವಾರ, ಅಣ್ಣಪ್ಪ ತಳವಾರ, ರಾಜೇಶ್ವರಿ ತಳವಾರ, ಭೋರಪ್ಪ ಅಣ್ಣಪ್ಪ ತಳವಾರ, ಭೋರಪ್ಪ ಸದಪ್ಪ ತಳವಾರ, ರಾಜು ಪಾಟೀಲ, ಸಾಗರ ಪಾಟೀಲ, ಸಿದ್ದಪ್ಪ ಪಾಟೀಲ, ಲಗಮಕ್ಕ ಜಂಗಳಿ, ಸಂತೋಷ ಜಂಗಳಿ, ಲಕ್ಷ್ಮಿ ಮರೆಪ್ಪನವರ, ಈರಪ್ಪ ಮರೆಪ್ಪನವರ, ಪ್ರಕಾಶ ಗುತ್ತಿ, ಮಂಜುಳಾ ತಳವಾರ, ರೇಣುಕಾ ತಳವಾರ, ರಾಘವೇಂದ್ರ ನೇಸರಗಿ, ಆನಂದ ಜಿರಲಿ, ಮಲ್ಲಿಕಾರ್ಜುನ ಪಟ್ಟಣಶೆಟ್ಟಿ, ಬಾಳವ್ವ ತಳವಾರ, ಬಸವರಾಜ ನೇಸರಗಿ, ರಮೇಶ ಕುಡಜೋಗಿ ಹಾಗೂ ಸುರೇಶ ಕುಡಜೋಗಿ ಎನ್ನುವವರ ವಿರುದ್ಧ ದೂರು ದಾಖಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ರಾಜು ತಳವಾರ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಆಪ್ತ ಎಂದು ತಿಳಿದುಬಂದಿದೆ. ಈ ಕುಟುಂಬಗಳು ಬಿಜೆಪಿ ಹಾಗೂ ಕಾಂಗ್ರೆಸ್ ಜೊತೆ ಗುರುತಿಸಿಕೊಂಡಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು