ಬೆಳಗಾವಿ: ತಾಲ್ಲೂಕಿನ ಸಾಂಬ್ರಾ, ಮೋದಗಾ ಗ್ರಾಮಗಳಲ್ಲಿ ಪ್ರಸಕ್ತ ಹಂಗಾಮಿನಲ್ಲಿ ತಡವಾಗಿಯಾದರೂ ಆಲೆಮನೆ ಆರಂಭಗೊಂಡಿವೆ. ಇಲ್ಲಿ ತಯಾರಿಸುತ್ತಿರುವ ಬೆಲ್ಲಕ್ಕೆ ಮಾರುಕಟ್ಟೆಯಲ್ಲಿ ಬೇಡಿಕೆಯೂ ಹೆಚ್ಚಿದೆ. ಉತ್ತಮ ದರವೂ ಸಿಕ್ಕಿದೆ. ಆದರೆ, ಬೆಲ್ಲ ಸಿದ್ಧಪಡಿಸಲು ಕಾರ್ಮಿಕರೇ ಸಿಗುತ್ತಿಲ್ಲ. ಹಾಗಾಗಿ ಆಲೆಮನೆಗಳ ಮಾಲೀಕರು ಪರದಾಡುವಂತಾಗಿದೆ.

ಕಳೆದ ವರ್ಷ ಬೆಳಗಾವಿಯಲ್ಲಿ ಕ್ವಿಂಟಲ್ ಬೆಲ್ಲ ₹3,500ರಿಂದ ₹4 ಸಾವಿರದವರೆಗೆ ದರವಿತ್ತು. ಈ ಬಾರಿ ₹4,200ರಿಂದ ₹4,500ರವರೆಗೆ ದರವಿದೆ. ಗುಣಮಟ್ಟದ ಬೆಲ್ಲ ಇನ್ನೂ ಹೆಚ್ಚಿನ ದರಕ್ಕೂ ಮಾರುತ್ತಿದೆ.

ಈ ಹಿಂದೆ ಆಲೆಮನೆಗಳಲ್ಲಿ ದಿನಕ್ಕೆ 5 ಕೊಪ್ಪರಿಗೆ ಬೆಲ್ಲ ತಯಾರಿಸಲಾಗುತ್ತಿತ್ತು. ನಸುಕಿನ ಜಾವ 5ಕ್ಕೆ ಆಲೆಮನೆಗಳಲ್ಲಿ ಒಲೆ ಹೊತ್ತಿದರೆ, ಇಳಿಹೊತ್ತಿನವರೆಗೂ ಬೆಲ್ಲದ ಘಮ ಹರಡುತ್ತಿತ್ತು. ಪ್ರತಿ ಆಲೆಮನೆಯಲ್ಲಿ ಕನಿಷ್ಠ 16 ಕಾರ್ಮಿಕರು ಹಗಲಿಡೀ ದುಡಿಯುತ್ತಿದ್ದರು. ಆದರೆ, ಕಾರ್ಮಿಕರ ಅಭಾವದಿಂದಾಗಿ ಈಗ ಪ್ರತಿ ಆಲೆಮನೆಯಲ್ಲಿ 3ರಿಂದ 4 ಕೊಪ್ಪರಿಗೆ ಬೆಲ್ಲವನ್ನಷ್ಟೇ ತಯಾರಿಸಲಾಗುತ್ತಿದೆ. ಕೆಲವೊಮ್ಮೆ ಎರಡೇ ಕೊಪ್ಪರಿಗೆ ಸಿದ್ಧವಾಗುತ್ತಿದೆ.

‘ಒಂದು ಕೊಪ್ಪರಿಗೆಯಲ್ಲಿ ಒಂದೂವರೆ ಕ್ವಿಂಟಲ್ ಬೆಲ್ಲ ತಯಾರಿಸುತ್ತೇವೆ. ದಿನಕ್ಕೆ 5 ಕೊಪ್ಪರಿಗೆ ಬೆಲ್ಲ ಸಿದ್ಧವಾದರೆ, ಕಾರ್ಮಿಕರಿಗೆ ವೇತನದ ರೂಪದಲ್ಲಿ 6 ಕೆ.ಜಿ ಬೆಲ್ಲ ಕೊಡಲಾಗುತ್ತದೆ. ಈಗ ಕೆ.ಜಿಗೆ ₹45 ದರವಿದ್ದು, ₹270 ಸಿಗುತ್ತದೆ. ಆದರೆ, ಗ್ರಾಮದಲ್ಲಿ ಬೇರೆ ಕೆಲಸಕ್ಕೆ ಹೋದರೆ ಅವರಿಗೆ ದಿನಕ್ಕೆ ₹300ರಿಂದ ₹400 ಕೂಲಿ ಸಿಗುತ್ತಿದೆ. ಹಾಗಾಗಿ ಆಲೆಮನೆಗೆ ಹೆಚ್ಚಿನವರು ಬರುತ್ತಿಲ್ಲ’ ಎಂದು ಸಾಂಬ್ರಾದ ಆಲೆಮನೆ ಮಾಲೀಕ ಪ್ರಭಾಕರ ಯಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಾರ್ಮಿಕರ ಕೊರತೆ ಉಂಟಾಗಿರುವುದು ಕುಟುಂಬದವರೆಲ್ಲರೂ ಕೆಲಸ ಮಾಡಿ, ಹೇಗೋ ಆಲೆಮನೆ ನಡೆಸುತ್ತಿದ್ದೇವೆ. ಹಿಂದಿನ ವರ್ಷದ ಹಂಗಾಮುಗಳಲ್ಲಿ ಸರಾಸರಿ 3 ತಿಂಗಳವರೆಗೆ ಆಲೆಮನೆ ನಡೆಯುತ್ತಿದ್ದವು. ಈಗ ಒಂದೆರಡು ತಿಂಗಳು ನಡೆಸುವುದು ಕಷ್ಟವಾಗಿದೆ. ಈ ಹಿಂದೆ ಸಾಂಬ್ರಾದಲ್ಲಿ 18 ಆಲೆಮನೆ ಬೆಲ್ಲ ತಯಾರಿಸುತ್ತಿದ್ದವು. ಪ್ರಸ್ತುತ ನಾಲ್ಕೇ ಚಾಲ್ತಿಯಲ್ಲಿವೆ’ ಎಂದರು.

‘ಇಡೀ ದಿನ ದುಡಿದರೂ ₹300 ವೇತನ ಸಿಗುವುದಿಲ್ಲ. ಎರಡ್ಮೂರು ಕೊಪ್ಪರಿಗೆ ಬೆಲ್ಲವಷ್ಟೇ ತಯಾರಾದರೆ, ₹200 ಖಾತ್ರಿಯೂ ಇಲ್ಲ. ಇಂದಿನ ದುಬಾರಿ ಯುಗದಲ್ಲಿ ಅಷ್ಟೊಂದು ಹಣದಲ್ಲಿ ಬದುಕಲು ಸಾಧ್ಯವೇ. ಹಾಗಾಗಿ ಕಾರ್ಮಿಕರು ಇತ್ತ ಸುಳಿಯುತ್ತಿಲ್ಲ’ ಎಂದು ಕಾರ್ಮಿಕರು ಹೇಳುತ್ತಾರೆ.

ಕಳೆದ ವರ್ಷ ಭೀಕರ ಬರದ ಹಿನ್ನೆಲೆಯಲ್ಲಿ ಕಬ್ಬಿನ ಇಳುವರಿ ಕುಸಿದಿತ್ತು. ಈ ವರ್ಷ ಮುಂಗಾರು ಕೈಹಿಡಿದಿದ್ದರಿಂದ ಉತ್ತಮ ಫಸಲು ಬಂದಿದೆ. ಇಲ್ಲಿ ಸಿದ್ಧಪಡಿಸಲಾಗುವ ಬೆಲ್ಲವನ್ನು ಬೆಳಗಾವಿಯಲ್ಲಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಕೆಲವರು ಸ್ಥಳಕ್ಕೇ ಬಂದು ಖರೀದಿ ಮಾಡುತ್ತಿದ್ದಾರೆ.

ನಮಗೆ ಬೆಲ್ಲ ತಯಾರಿಕೆಗಿಂತ ಆಲೆಮನೆಗೆ ಕಾರ್ಮಿಕರನ್ನು ಕರೆತರುವುದೇ ಈಗ ಸವಾಲಾಗಿ ಪರಿಣಮಿಸಿದೆ
ಜ್ಯೋತಿಬಾ ಜೋಯಿ ಆಲೆಮನೆ ಮಾಲೀಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.