ಕಬ್ಬೂರ: ‘ಗ್ರಾಮೀಣ ಭಾಗದಲ್ಲಿ ಶಿಕ್ಷಣ ಕ್ರಾಂತಿ ಮಾಡಿರುವ ಮಹೇಶ ಬೆಲ್ಲದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೂ ಅರ್ಹರು. ಸರ್ಕಾರ ಅವರ ಸೇವೆ ಗುರುತಿಸಲಿ’ ಎಂದು ಉದ್ಯಮಿ ಶಿವಾನಂದ ಮಹಾಶೆಟ್ಟಿ ಹೇಳಿದರು.

ಇಲ್ಲಿನ ಓಂ ಸೆಂಟ್ರಲ್ ಪಬ್ಲಿಕ್ ಶಾಲೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಹೇಶ ಬೆಲ್ಲದ ಜೀವನ ಆಧಾರಿತವಾಗಿ ಶಿಕ್ಷಕ ಮಹೇಶ ಗೊಜಗೊಜಿ ರಚಿಸಿದ ‘ಕೌಸ್ತುಭ’ ಕೃತಿ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ಸಾಹಿತಿ ಎಸ್.ವೈ.ಹಂಜಿ, ‘ಕಷ್ಟದಲ್ಲೇ ಬೆಳೆದ ಮಹೇಶ ಬೆಲ್ಲದ ಅವರು, ಗ್ರಾಮೀಣ ಭಾಗದ ಮಕ್ಕಳಿಗೂ ಪ್ರತಿಷ್ಠಿತ ಶಾಲೆಗಳ ಮಾದರಿಯಲ್ಲಿ ಶಿಕ್ಷಣ ಒದಗಿಸುತ್ತಿದ್ದಾರೆ. ಅವರ ಯಶೋಗಾಥೆ ಸಾರುವ ಈ ಕೃತಿಯನ್ನು ಯುವಜನರು ಓದಿ, ಬದುಕಿನಲ್ಲಿ ಉತ್ಸಾಹದಿಂದ ಮುನ್ನಡೆಯಬೇಕು’ ಎಂದು ಕರೆಕೊಟ್ಟರು.

ಮಹೇಶ ಗೊಜಗೊಜಿ ಮಾತನಾಡಿದರು. ನಿಡಸೋಸಿಯ ಸಿದ್ಧಸಂಸ್ಥಾನ ಮಠದ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ, ಬೆಲ್ಲದ ಬಾಗೇವಾಡಿಯ ಶಿವಾನಂದ ಸ್ವಾಮೀಜಿ, ಕಬ್ಬೂರಿನ ರೇವಣಸಿದ್ಧ ಶಿವಾಚಾರ್ಯ ಸ್ವಾಮೀಜಿ, ಚಿಕ್ಕೋಡಿಯ ಸಂಪಾದನಾ ಸ್ವಾಮೀಜಿ, ವೇದಮೂರ್ತಿ ಶಂಕರಯ್ಯ ಮಠದ ಆಶೀರ್ವಚನ ನೀಡಿದರು.

ಸಾಹಿತಿ ಬಸವರಾಜ ಜಗಜಂಪಿ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯ ಮಹೇಂದ್ರ ಕೆ.ಆರ್. ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಂಕೇಶ್ವರದ ಹಿರಾ ಶುಗರ್ಸ್ ಕಾರ್ಖಾನೆ ನಿರ್ದೇಶಕ ಸುರೇಶ ಬೆಲ್ಲದ, ರಮೇಶ ಬೆಲ್ಲದ, ಶ್ರೀಪಾದ ಕುಂಬಾರ, ಪ್ರಕಾಶ ಬೆಲ್ಲದ, ಜಿ.ಬಿ.ಸಂಗಟೆ, ಎಸ್.ಐ.ಹೊನ್ನಳ್ಳಿ, ಬಿ.ಎಂ.ಅಮ್ಮಣಗಿ, ಎಸ್.ಆರ್.ಡೊಂಗರೆ, ಎಸ್.ಬಿ.ಮುನ್ನೋಳ್ಳಿ ಇದ್ದರು. ರಾಜು ಮಹಿಪತಿ ಸ್ವಾಗತಿಸಿದರು. ಸಿದ್ದು ಮೂರ್ಚಿಟ್ಟಿ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.