ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಂಚ ಪಡೆದ ಇಬ್ಬರು ಜವಾನರಿಗೆ 7 ವರ್ಷ ಜೈಲು ಶಿಕ್ಷೆ, ದಂಡ

Last Updated 25 ಸೆಪ್ಟೆಂಬರ್ 2019, 14:35 IST
ಅಕ್ಷರ ಗಾತ್ರ

ಬೆಳಗಾವಿ: ಸಬ್ಸಿಡಿ ಯೋಜನೆಯಡಿ ಕಾರು ಖರೀದಿಸಲು ಮಂಜೂರಾತಿ ದೊರಕಿಸಿಕೊಡುವುದಾಗಿ ಲಂಚ ಪಡೆದಿದ್ದ ಪ್ರವಾಸೋದ್ಯಮ ಇಲಾಖೆಯ ಜವಾನರಾದ ಎಂ.ಪಿ. ದೇವರಾಜ ಮತ್ತು ಮಲ್ಲಿಕಾರ್ಜುನ ದುಂಡಪ್ಪ ಹೆಗಡಿಹಾಳ ಅವರಿಗೆ 4ನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್‌ ನ್ಯಾಯಾಲಯವು ತಲಾ 7 ವರ್ಷ ಜೈಲು ಶಿಕ್ಷೆ ಹಾಗೂ ₹ 17 ಸಾವಿರ ದಂಡ ವಿಧಿಸಿದೆ.

ಇಲಾಖೆಯ ಸಬ್ಸಿಡಿ ಯೋಜನೆಯಡಿ ಕಾರು ಖರೀದಿಸಲು ಮಂಜೂರಾತಿ ದೊರಕಿಸಿಕೊಡಲು 2014ರ ಜುಲೈ 25ರಂದು ಶಿವಾಜಿ ನಿಂಗಪ್ಪ ವನ್ನೂರ ಅವರಿಂದ ₹ 15 ಸಾವಿರ ಲಂಚ ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಇವರು ಸಿಕ್ಕಿಬಿದ್ದಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಶಶಿಧರ ಶೆಟ್ಟಿ ಅವರು, 7 ವರ್ಷ ಜೈಲು ಶಿಕ್ಷೆ ಹಾಗೂ ₹ 17 ಸಾವಿರ ದಂಡ ವಿಧಿಸಿ ಆದೇಶ ನೀಡಿದರು.

ಪ್ರಕರಣದ ತನಿಖೆಯನ್ನು ಲೋಕಾಯುಕ್ತ ಠಾಣೆಯ ಅಂದಿನ ಡಿವೈಎಸ್ಪಿ ಜೆ.ಎಂ. ಕರುಣಾಕರಶೆಟ್ಟಿ ಕೈಗೊಂಡಿದ್ದರು. ಸರ್ಕಾರದ ಪರ ಪ್ರವೀಣ ಅಗಸಗಿ ವಾದ ಮಂಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT