ಮೂಡಲಗಿ: ಕಾರ್ತಿಕ ಮಾಸದಲ್ಲಿ ಪ್ರಾರಂಭಗೊಂಡು ಮಾರ್ಗಶಿರ ಮಾಸದಲ್ಲಿ ಕೊನೆಗೊಳ್ಳುವ ತಾಲ್ಲೂಕಿನ ಕಲ್ಲೋಳಿಯ ಹನುಮಂತ ದೇವರ ಕಾರ್ತಿಕೋತ್ಸವ ಹಾಗೂ ಜಾತ್ರೆಯು ಡಿ. 6ರಿಂದ 13ರ ವರೆಗೆ ಜರುಗಲಿದೆ.

ಇದರಿಂದ ಕಲ್ಲೋಳಿ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಮನೆಗಳೆಲ್ಲ ಸುಣ್ಣ, ಬಣ್ಣಗಳಿಂದ ಅಲಂಕಾರಗೊಂಡಿದ್ದು, ಪಟ್ಟಣದ ಪ್ರಮುಖ ರಸ್ತೆಗಳು ಭಕ್ತರನ್ನು ಸ್ವಾಗತಿಸಲು ತಳಿರು ತೋರಣಗಳ ಸ್ವಾಗತ ಕಮಾನುಗಳು, ಬ್ಯಾನರ್, ಪ್ಲೆಕ್ಸ್ಗಳು ಸಜ್ಜಾಗಿವೆ.

ದೇವರ ಕಲ್ಲೋಳಿ ಎಂದು ಕರೆಯುವ ಕಲ್ಲೋಳಿ ಪಟ್ಟಣ ಕ್ರಿ.ಶ 10ನೇ ಶತಮಾನ ಪೂರ್ವ ಇತಿಹಾಸ ಹೊಂದಿದೆ. ಇಲ್ಲಿ ಪ್ರತಿಷ್ಠಾಪಿಸಿರುವ ಹನುಮಂತ ದೇವರ ಮೂರ್ತಿಯು 16ನೇ ಶತಮಾನದಲ್ಲಿ ಮಹಾರಾಷ್ಟ್ರದ ಶಿವಾಜಿ ಮಹಾರಾಜರ ಆಧ್ಯಾತ್ಮಿಕ ಗುರು ರಾಮದಾಸರ ಸಂಕಲ್ಪದಲ್ಲಿ ಪ್ರತಿಷ್ಠಾಪಿಸಿದ್ದು ಎನ್ನುವ ಐತಿಹ್ಯವಿದೆ.

ಈ ಭಾಗದಲ್ಲಿ ಹನುಮಂತ ದೇವರ ದರ್ಶನವಿಲ್ಲದೇ ಶುಭಕಾರ್ಯಗಳನ್ನು ಮಾಡುವುದಿಲ್ಲ. ಹುಟ್ಟುವ ಮಗುವಿಗೆ ‘ಹನುಮಂತ’ ‘ಮಾರುತಿ’ ಎಂದೇ ನಾಮಕರಣ ಮಾಡುವುದರಿಂದ ಮನೆಗೊಬ್ಬ ಹನುಮಂತ ಹೆಸರಿನವರು ಇದ್ದಾರೆ. ‘ಹನುಮಂತ ದೇವರು ನಂಬಿದ ಭಕ್ತರನ್ನು ಕೈಬಿಡಲಾರ’ ಎನ್ನುವ ಪ್ರತೀತಿ ಭಕ್ತರಲ್ಲಿ ಇದ್ದು, ಭಕ್ತರು ಉರುಳು ಸೇವೆ ಸೇರಿದಂತೆ ಹಲವಾರು ಹರಕೆ ಸೇವೆ ಸಲ್ಲಿಸುವುದು ವಾಡಿಕೆ.

ಡಿ.13ರಂದು ಬೆಳಿಗ್ಗೆಯಿಂದ ಭಕ್ತರು ತಂಡೋಪತಂಡವಾಗಿ ಪಾದಯಾತ್ರೆಯಲ್ಲಿ ದರ್ಶನಕ್ಕೆ ಬರುವುದು ವಾಡಿಕೆ’ ಎಂದು ಆರ್ಚಕ ಸುಭಾಷ ಪೂಜಾರಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

1926ರಲ್ಲಿ ನಗಾರಿಖಾನೆ ಮತ್ತು ದೀಪಸ್ತಂಭ ನಿರ್ಮಾಣಗೊಂಡಿತ್ತು. ದೇವಸ್ಥಾನವು ವಿವಿಧ ಅವಧಿಯಲ್ಲಿ ಜೀರ್ಣೋದ್ಧಾರಗೊಂಡಿದೆ. ಭಕ್ತರಿಗೆ ಉಳಿದುಕೊಳ್ಳಲು ಯಾತ್ರಾ ನಿವಾಸ, ಧಾರ್ಮಿಕ ಕಾರ್ಯಕ್ರಮಗಳಿಗೆ ಸಮುದಾಯ ಭವನ ಇದೆ. ದೇವಸ್ಥಾನದ ದ್ವಾರವು ಈಚೆಗೆ ನವೀಕರಣಗೊಂಡು ಆಕರ್ಷಕವಾಗಿದೆ. ಹನಮಂತನ ಭಕ್ತರಾಗಿದ್ದ ಕಾಟಮುತ್ತಜ್ಜ, ಅಜ್ಜಪ್ಪ ದೇವಸ್ಥಾನಗಳು ಇಲ್ಲಿವೆ. ಮೂರುವರೆ ಅಡಿಯ ಜಿಡ್ಡಿ ಬಾಗಿಲಿನಲ್ಲಿ ಬಾಗಿ ಹೋಗುವುದು ಇಲ್ಲಿನ ವಿಶೇಷ.

ವಿವಿಧ ಧಾರ್ಮಿಕ ಕಾರ್ಯಕ್ರಮ

ಡಿ.7ರಂದು ನಸುಕಿನ 3ಕ್ಕೆ ಹನುಮಂತ ದೇವರ ಪಾಲಕಿ ಪ್ರಾರಂಭಗೊಂಡು ಬೆಳಿಗ್ಗೆ 6ಕ್ಕೆ ಮುಕ್ತಾಯವಾಗುವುದು. ಮಧ್ಯಾಹ್ನ 1ಕ್ಕೆ ಜಂಗಿ ಕುಸ್ತಿಗಳು ಜರುಗುವವು. ಪ್ರತಿ ದಿನ ಅಭಿಷೇಕ ವಿಶೇಷ ಪೂಜೆ ಡಾಗೀನ ವಸ್ತ್ರಾಲಂಕಾರ ಆರತಿ ನೈವದ್ಯಗಳು ಜರುಗುವವು. ಡಿ. 13ರಂದು ಮರುಕಾರ್ತಿಯಾಗಿ ಸಂಜೆ ಹನುಮಂತ ದೇವರ ಮೂರ್ತಿಯ ಪಾಲಕಿ ಉತ್ಸವ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.