ಸೋಮವಾರ, ಏಪ್ರಿಲ್ 12, 2021
26 °C

ಆರೋಗ್ಯ ಚೀಟಿ ವಿತರಣೆಗೆ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಆಯುಷ್ಮಾನ್‌ ಭಾರತ-ಆರೋಗ್ಯ ಕರ್ನಾಟಕ ಕಾರ್ಡ್‌ ವಿತರಣೆ ಕಾರ್ಯಕ್ಕೆ ಶಾಸಕ ಅಭಯ ಪಾಟೀಲ ಚಾಲನೆ ನೀಡಿದರು.

ಖಾಸಬಾಗದ ಬಸವೇಶ್ವರ ವೃತ್ತದ ದೇವಾಂಗ ಮಂಗಲ ಕಾರ್ಯಾಲಯ, ಯಳ್ಳೂರದ ಚಾಂಗಳೇಶ್ವರ ದೇವಸ್ಥಾನದಲ್ಲಿ ತಲಾ ಸಾವಿರ ಮಂದಿಗೆ ಕಾರ್ಡ್‌ ವಿತರಿಸಿದರು.

‘ವರ್ಷದಿಂದ 17 ಕಡೆಗಳಲ್ಲಿ ಕ್ಯಾಂಪ್‌ ನಡೆಸಲಾಗಿದೆ. ಕಂಪ್ಯೂಟರ್, ಇಂಟರ್‌ನೆಟ್, ಪೀಠೋಪಕರಣ, ಸಾರಿಗೆ ವ್ಯವಸ್ಥೆ, ಆಪರೇಟರ್‌ಗಳಿಗೆ ಉಪಾಹಾರ, ಊಟದ ವ್ಯವಸ್ಥೆ ಮೊದಲಾದ ಸೌಲಭ್ಯವನ್ನು ಸ್ವಂತ ಖರ್ಚಿನಲ್ಲಿ ಕಲ್ಪಿಸಿ ನೋಂದಣಿ ಅಭಿಯಾನ ನಡೆಸಲಾಗಿತ್ತು. ಆಯಾ ಭಾಗದ 97ಸಾವಿರಕ್ಕೂ ಹೆಚ್ಚು ಜನರು ಸದ್ಬಳಕೆ ಮಾಡಿಕೊಂಡಿದ್ದರು. ಈಗ ಅವರಿಗೆ ಚೀಟಿಗಳನ್ನು ನೀಡಲಾಗುತ್ತಿದೆ’ ಎಂದು ತಿಳಿಸಿದರು.

‘ನೋಂದಾಯಿಸಿದ ಎಲ್ಲರಿಗೂ ಹಂತ ಹಂತವಾಗಿ ಕಾರ್ಡ್‌ಗಳನ್ನು ವಿತರಿಸಲಾಗುವುದು’ ಎಂದು ಮಾಹಿತಿ ನೀಡಿದರು.

ಬಿಜೆಪಿ ಬೆಳಗಾವಿ ದಕ್ಷಿಣ ಘಟಕದ ಆಧ್ಯಕ್ಷೆ ಗೀತಾ ಸುತಾರ, ನಾರಾಯಣ ಕುಲಗೋಡ ಹಾಗೂ ಯಳ್ಳೂರ ಗ್ರಾಮ ಪಂಚಾಯ್ತಿ ಸದಸ್ಯರು, ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು