ಭಾನುವಾರ, 1 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಲಾಪುರಕ್ಕೆ ಮಳೆರಾಯನ ಆಗಮನ

Published 25 ಜೂನ್ 2023, 14:33 IST
Last Updated 25 ಜೂನ್ 2023, 14:33 IST
ಅಕ್ಷರ ಗಾತ್ರ

ಸೋಲಾಪುರ: ನಗರದಲ್ಲಿ ಮಳೆಗಾಲ ಆರಂಭವಾಗಿ ಸುಮಾರು 22 ದಿನಗಳ ನಿರೀಕ್ಷೆಯ ನಂತರ ಭಾನುವಾರ ಮಳೆರಾಯನ ಆಗಮನವಾಯಿತು.

ಆಷಾಢ ಏಕಾದಶಿ ನಿಮಿತ್ಯವಾಗಿ ಸಂತ ಜ್ಞಾನೇಶ್ವರ ಪಲ್ಲಕ್ಕಿ ಹಾಗೂ ಸಂತ ಶ್ರೇಷ್ಠ ತುಕಾರಾಮ ಮಹಾರಾಜರ ಪಲ್ಲಕ್ಕಿ ನಗರಕ್ಕೆ ಆಗಮಿಸಿದ ನಂತರ ಮಂಗಳವೇಡ ಹಾಗೂ ಅಕಲುಜ ಭಾಗದಲ್ಲಿ ಭಾರಿ ಪ್ರಮಾಣದಲ್ಲಿ ಮಳೆ ಸುರಿದಿದೆ.

ಭಾರಿ ಬಿಸಿಲಿನಿಂದ ಬೇಸತ್ತಿದ್ದ ಮಕ್ಕಳು, ಮಹಿಳೆಯರು ಸೇರಿದಂತೆ ಜನರು ಮಳೆಯಲ್ಲಿ ಕುಣಿದು ಕುಪ್ಪಳಿಸಿ ಆನಂದ ವ್ಯಕ್ತಪಡಿಸಿದರು. 

ಸೋಲಾಪುರ, ಫಂಡರಪುರ, ಮಾಳಸಿರಸ, ಅಕ್ಕಲಕೋಟ, ಮೊಹೋಳ, ಮಂಗಳವೇಡಾ ದಕ್ಷಿಣ ಸೋಲಾಪುರ ತಾಲ್ಲೂಕಿನಲ್ಲಿ ಭಾರಿ ಪ್ರಮಾಣದಲ್ಲಿ ಮಳೆಯಾಗಿದೆ. ಮಹಾರಾಷ್ಟ್ರದ ಮರಾಠವಾಡಾದ ಲಾತೂರ, ನಾಂದೇಡ, ಜಾಲನಾ, ಸಂಭಾಜಿನಗರ ಜಿಲ್ಲೆಯಲ್ಲೂ ಕೆಲವು ಕಡೆ ಮಳೆ ಪ್ರಾರಂಭವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT