ಬುಧವಾರ, ಆಗಸ್ಟ್ 4, 2021
22 °C

‘ಎಲ್ಲರನ್ನೂ ಒಗ್ಗೂಡಿಸುತ್ತಿರುವ ಹುಕ್ಕೇರಿ ಹಿರೇಮಠ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ಹುಕ್ಕೇರಿ ಹಿರೇಮಠವು ಎಲ್ಲ ಸಮುದಾಯ, ಸಂಪ್ರದಾಯ ಮತ್ತು ಸಮಾಜ ಸೇವಕರನ್ನು ಒಗ್ಗೂಡಿಸುವ ಕೇಂದ್ರವಾಗಿ ಹೊರ ಹೊಮ್ಮುತ್ತಿದೆ’ ಎಂದು ವಿಧಾನಪರಿಷತ್‌ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ ಹೇಳಿದರು.

ನಗರದ ಹುಕ್ಕೇರಿ ಹಿರೇಮಠದ ಶಾಖೆಗೆ ಭೇಟಿ ನೀಡಿ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರಿಂದ ಆಶೀರ್ವಾದ ಪಡೆದು ಭಾನುವಾರ ಮಾತನಾಡಿದರು.

‘ಈ ಮಠದಲ್ಲಿ ಜಾತಿ, ಮತ, ಪಂಥಗಳ ಗೊಡವೆಗಳಿಲ್ಲ. ಬಂದವರನ್ನು ಗೌರವಿಸಿ, ಎಲ್ಲರಿಗೂ ಮಾರ್ಗದರ್ಶನ ನೀಡಿ ಪ್ರೀತಿಯಿಂದ ಕಾಣುವ ಅಪರೂಪದ ಕೇಂದ್ರವಾಗಿದೆ’ ಎಂದರು.

‘ಹಲವು ಸಾಮಾಜಿಕ ಕಾರ್ಯಗಳನ್ನು ಮಾಡಿಕೊಂಡು ಬರುತ್ತರುವ ಸ್ವಾಮೀಜಿ ಸರಕಾರಕ್ಕೆ ಸಲಹೆ–ಮಾರ್ಗದರ್ಶನಗಳನ್ನು ನೀಡುತ್ತಾ ಬಂದಿದ್ದಾರೆ. ನೆರೆ ಸಂದರ್ಭದಲ್ಲಿ ಎಲ್ಲ ಸಮುದಾಯದವರಿಗೆ ಆಹಾರ ಪದಾರ್ಥ ನೀಡಿ ಆತ್ಮಸ್ಥೈರ್ಯ ತುಂಬವ ಕೆಲಸ ಮಾಡಿರುವುದು ಅಭಿಮಾನದ ಸಂಗತಿ. ಕೊರೊನಾ ಸಂದರ್ಭದಲ್ಲೂ ಸೇವಾ ಕಾರ್ಯ ಮಾಡಿದ್ದಾರೆ. ಜನರ ಅನಕೂಲಕ್ಕಾಗಿ ಎರಡು ಅಂಬುಲೆನ್ಸ್‌ಗಳನ್ನು ಜಿಲ್ಲಾಡಳಿತಕ್ಕೆ ನೀಡಿದ್ದು ಮಾದರಿಯಾಗಿದೆ’ ಎಂದು ಹೇಳಿದರು.

ಈ ವೇಳೆ ಮಾತನಾಡಿದ ಸ್ವಾಮೀಜಿ, ‘ಮಹಾಂತೇಶ ಅವರು ಸೇವಾ ಕಾರ್ಯಗಳಿಂದ ಜನಮನ ಗೆದ್ದಿದ್ದಾರೆ. ಭಗವಂತ ನೀಡಿದ ಅಧಿಕಾರದ ಅವಕಾಶ ಬಳಸಿಕೊಂಡು ಮತ್ತಷ್ಟು ಜನಪರ ಕಾರ್ಯಗಳನ್ನು ಮಾಡಲಿ’ ಎಂದು ಆಶಿಸಿದರು.

ಸುವಿಚಾರ ಚಿಂತನ ಬಳಗದ ಸದಸ್ಯರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು