ಪ್ರಜಾವಾಣಿ ವಾರ್ತೆ

ಹುಕ್ಕೇರಿ: ಪಟ್ಟಣದಲ್ಲಿ 1928ರಲ್ಲಿ ಸ್ಥಾಪಿವಾಗಿರುವ ಹುಕ್ಕೇರಿ ಅರ್ಬನ್ ಕೋ ಆಪ್ ಬ್ಯಾಂಕವು 2024– 25ನೇ ಸಾಲಿಗೆ ₹80 ಲಕ್ಷ ನಿವ್ವಳ ಲಾಭ ಗಳಿಸಿದ್ದು, 2028ರಲ್ಲಿ ಶತಮಾನೋತ್ಸವ ಆಚರಿಸಿಕೊಳ್ಳಲಿದೆ ಎಂದು ಬ್ಯಾಂಕಿನ ಅಧ್ಯಕ್ಷ ಚಂದ್ರಶೇಖರ್ ಪಾಟೀಲ್ ಹೇಳಿದರು.

ಶುಕ್ರವಾರ ಬ್ಯಾಂಕಿನ ಸಭಾಗ್ರಹದಲ್ಲಿ ನಡೆದ ಪತ್ರಿಗೋಷ್ಠಿಯಲ್ಲಿ ಪ್ರಗತಿ ಪಕ್ಷಿನೋಟದ ಮಾಹಿತಿ ನೀಡಿದ ಅವರು, ’ಬ್ಯಾಂಕು 5215 ಸದಸ್ಯರನ್ನು ಹೊಂದಿ ₹2.41 ಕೋಟಿ ಷೇರು ಬಂಡವಾಳ, ₹9.66 ಕೋಟಿ ಸ್ವಂತ ಬಂಡವಾಳ ಹಾಗೂ ₹38.19 ಕೋಟಿ ಗುಂತಾವಣಿ (ಹೂಡಿಕೆ) ಹೊಂದಿದೆ‘ ಎಂದರು.

ಉಪಾಧ್ಯಕ್ಷ ಪ್ರಭು ಸಾಂಬಾರೆ ಮಾತನಾಡಿ, ‘ಬ್ಯಾಂಕು 108.83 ಕೋಟಿ ದುಡಿಯುವ ಬಂಡವಾಳ, ₹744.61 ಕೋಟಿ ಆರ್ಥಿಕ ವಹಿವಾಟು ನಡೆಸಿ, 0.78 ಎನ್.ಪಿ.ಎ.ಹೊಂದಿದೆ‘ ಎಂದರು.

ಬ್ಯಾಂಕು ನಿರ್ದೇಶಕ ಗುರುಲಿಂಗಪ್ಪ (ಸೋಮು) ಗಂಧ ಮಾತನಾಡಿ, ಈ ವರ್ಷದಲ್ಲಿ ಬ್ಯಾಂಕು ₹94.50 ಕೋಟಿಯಿಂದ ₹100 ಕೋಟಿ ಠೇವು ಸಂಗ್ರಹದ ಗುರಿ ಇದ್ದು, ಜತೆಗೆ ಇನ್ನೂ 4 ಶಾಖೆ ತೆರೆಯಲು ಆಡಳಿತ ಮಂಡಳಿ ನಿರ್ಧರಿಸಿದೆ‘ ಎಂದರು.

ಪ್ರಧಾನ ವ್ಯವಸ್ಥಾಪಕ ಕೆ.ಬಿ.ಬಂಡಾಯಿ ಮಾಹಿತಿ ನೀಡಿ ಸಾಲ ವಸೂಲಾತಿ ಶೇ 96.50 ಆಗಿದ್ದು, ಸದಸ್ಯರಿಗೆ ಲಾಭಾಂಶ ಕುರಿತು ಸ್ವಸಾಧಾರಣ ಸಭೆಯಲ್ಲಿ ನಿರ್ಧರಿಸಲಾಗುವುದು ಎಂದರು.

ನಿರ್ದೇಶಕರಾದ ಶಿವಾನಂದ ನೂಲಿ, ರಾಜಕುಮಾರ ಬಾಗಲಕೋಟ, ಮೌನೇಶ್ ಪೋತದಾರ್ ಇದ್ದರು. ಕಾಡಪ್ಪ ಬಂದಾಯಿ ಸ್ವಾಗತಿಸಿ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.