ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರದ ಶಾಹೂ ನಗರದಲ್ಲಿ ಗುರುವಾರ ನಡೆದ ಜಗದೀಶ ಶೆಟ್ಟರ್ ಪ್ರಚಾರ ಸಭೆಯಲ್ಲಿ ಮಹಿಳೆಯರು ಮೋದಿ ಅವರಿಗೆ ಜೈಕಾರ ಕೂಗಿದರು
ಕುಸ್ತಿ ಪಂದ್ಯ ವಿಕ್ಷೀಸಿದ ಶೆಟ್ಟರ್
ಬೆಳಗಾವಿ ತಾಲ್ಲೂಕಿನ ಯಳ್ಳುರು ಗ್ರಾಮದಲ್ಲಿ ಗುರುವಾರ ನಡೆದ ರಾಷ್ಟ್ರಮಟ್ಟದ ಕುಸ್ತಿ ಪಂದ್ಯಗಳನ್ನು ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್ ವೀಕ್ಷಿಸಿದರು. ಚಾಂಗಳೇಶ್ವರ ದೇವಿ ಮತ್ತು ಕಲ್ಮೇಶ್ವರ ದೇವರ ಜಾತ್ರೆಯಲ್ಲಿ ಪಾಲ್ಗೊಂಡ ಅವರು ಕುಸ್ತಿ ಪಟುಗಳನ್ನು ಹುರುದುಂಬಿಸಿದರು. ಕುಸ್ತಿ ಪಂದ್ಯದಲ್ಲಿ ಕರ್ನಾಟಕ ಹರಿಯಾಣ ಪಂಜಾಬ ದೆಹಲಿ ಮಾಹಾರಾಷ್ಟ್ರ ಸೇರಿದಂತೆ ಅನೇಕ ರಾಜ್ಯದ ಕುಸ್ತಿಪಟುಗಳು ಭಾಗವಹಿಸಿದ್ದು ಶೆಟ್ಟರ್ ಎಲ್ಲರಿಗೂ ಶುಭ ಕೋರಿದರು.