ಬೆಳಗಾವಿ: ಮೂವರು ಪೊಲೀಸರು, ಒಬ್ಬ ಸೈನಿಕ ಹಾಗೂ ಬಳೆ ಮಾರುವ ಮಹಿಳೆಯೂ ಸೇರಿದಂತೆ ಜಿಲ್ಲೆಯ 27 ಜನರಲ್ಲಿ ಶನಿವಾರ ಕೋವಿಡ್–19 ದೃಢಪಟ್ಟಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರಾದವರ ಸಂಖ್ಯೆ 377ಕ್ಕೆ ತಲುಪಿದೆ.

ಬೆಳಗಾವಿ, ಸವದತ್ತಿ, ಖಾನಾಪುರ ಹಾಗೂ ಅಥಣಿ ತಾಲ್ಲೂಕಿನ ಜನರಲ್ಲಿ ಸೋಂಕು ಕಂಡುಬಂದಿದೆ. 3 ವರ್ಷದ ಬಾಲಕಿಯಿಂದ ಹಿಡಿದು 83 ವರ್ಷ ವಯಸ್ಸಿನ ವೃದ್ಧನೂ ಇದರಲ್ಲಿ ಸೇರಿದ್ದಾರೆ. ಬೆಂಗಳೂರು, ಕೇರಳ ಹಾಗೂ ಅಂತರ ಜಿಲ್ಲಾ ಪ್ರವಾಸ ಮಾಡಿದ್ದ ತಲಾ ಒಬ್ಬೊಬ್ಬರಿಗೆ ಸೋಂಕು ಬಂದಿದೆ. ಮಹಾರಾಷ್ಟ್ರದಿಂದ ಬಂದಿರುವ 10 ಜನರಲ್ಲಿ ಕಾಣಿಸಿಕೊಂಡಿದೆ. ಇನ್ನುಳಿದ 8 ಜನರ ಸಂಪರ್ಕದ ಮಾಹಿತಿ ದೊರೆತಿಲ್ಲ.

ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾದ 10 ಜನರು ಬಿಡುಗಡೆಯಾಗಿದ್ದಾರೆ. 65 ರೋಗಿಗಳು ಪ್ರತ್ಯೇಕ ವಾರ್ಡ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 2,971 ಪರೀಕ್ಷಾ ಮಾದರಿಗಳ ವರದಿ ಇನ್ನೂ ಬರಬೇಕಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.