ಚಿಕ್ಕೋಡಿ: ಪಟ್ಟಣದ ವಿವಿಧ ಬಡಾವಣೆ, ಪ್ರಮುಖ ರಸ್ತೆ, ಮಾರುಕಟ್ಟೆ ಪ್ರದೇಶ ಸೇರಿದಂತೆ ಹಲವು ಕಡೆಗೆ ನೂರಾರು ಕಬ್ಬಿಣದ ವಿದ್ಯುತ್ ಕಂಬಗಳು ಹಾಗೂ ವಿದ್ಯುತ್ ಪರಿವರ್ತಕಗಳು ಅಪಾಯಕ್ಕೆ ಆಹ್ವಾನ ನೀಡುವಂತಿವೆ. ಕೂಡಲೇ ಇವುಗಳನ್ನು ಸ್ಥಳಾಂತರಿಸಿ, ಸುರಕ್ಷತಾ ಕ್ರಮ ವಹಿಸಬೇಕು ಎಂಬ ಜನರ ಕೂಗಿಗೆ ಇನ್ನೂ ಸ್ಪಂದನೆ ಸಿಕ್ಕಿಲ್ಲ.

ಪಟ್ಟಣ 40 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹಾಗೂ 23 ವಾರ್ಡ್ಗಳನ್ನು ಹೊಂದಿದೆ. ಆದರೆ, 7 ವಿದ್ಯುತ್ ಪರಿವರ್ತಕ ವ್ಯಾಪ್ತಿಯಲ್ಲಿ 103 ಕಬ್ಬಿಣದ ವಿದ್ಯುತ್ ಕಂಬಗಳಿವೆ. ಜಾರಿ ಗಲ್ಲಿ, ಜೈನ ಪೇಟೆ, ಹೊಸಪೇಟೆ ಗಲ್ಲಿ, ವಾಡಾ ಗಲ್ಲಿ, ಪ್ರಭುವಾಡಿ ಮುಂತಾದ ಬಡಾವಣೆಯಲ್ಲಿ ಕಿರಿದಾದ ರಸ್ತೆಗಳಲ್ಲಿಯೇ ಹೆಚ್ಚಿನ ಸಂಖ್ಯೆಯಲ್ಲಿ ಕಬ್ಬಿಣದ ವಿದ್ಯುತ್ ಕಂಬಗಳು ಇವೆ. ಈ ಪ್ರದೇಶ ವ್ಯಾಪ್ತಿಯಲ್ಲಿಯೇ ಹೆಚ್ಚಿನ ಸಂಖ್ಯೆಯಲ್ಲಿ ದೇವಾಲಯ ಹಾಗೂ ಮಸೀದಿಗಳು ಇರುವುದರಿಂದ ಪ್ರತಿದಿನವೂ ಭಕ್ತರು ಜೀವ ಕೈಯಲ್ಲಿ ಹಿಡಿದು ಓಡಾಡಬೇಕಿದೆ.

ಇಂತಹ ಕಡೆಗೆ ಕಬ್ಬಿಣದ ವಿದ್ಯುತ್ ಕಂಬಗಳ ಬಳಿಯಲ್ಲಿಯೇ ಮಕ್ಕಳು ಆಟವಾಡುವುದು, ಮಹಿಳೆಯರು ಅಂಗಳಕ್ಕೆ ನೀರು ಚಿಮುಕಿಸಿ ರಂಗೋಲಿ ಹಾಕುವುದಕ್ಕೆ ನಿತ್ಯ ಭಯ ಪಡುವಂತಾಗಿದೆ. ಅದರಲ್ಲೂ ಇದೀಗ ಮಳೆಗಾಲವಾಗಿದ್ದರಿಂದ ವಿದ್ಯುತ್ ಪ್ರವಹಿಸುವ ಆತಂಕ ಈ ಬಡಾವಣೆಗಳ ಜನರಲ್ಲಿ ಮನೆ ಮಾಡಿದೆ. ಕಿರಿದಾದ ರಸ್ತೆಗಳಲ್ಲಿಯೇ ವಿದ್ಯುತ್ ಕಂಬ ಅಳವಡಿಸಿದ್ದಲ್ಲದೇ ಕೈಗೆಟುಕುವ ಅಂತರದಲ್ಲಿ ಸರ್ವಿಸ್ ವೈರಗಳು ಇರುವುದರಿಂದ ಮಹಡಿ ಮನೆಯಲ್ಲಿ ವಾಸಿಸುವ ಜನರಲ್ಲಿ ನಿತ್ಯವೂ ಭಯದ ವಾತಾವರಣ ಉಂಟು ಮಾಡಿದೆ.

ರಸ್ತೆ ಮಧ್ಯದಲ್ಲಿಯೇ ವಿದ್ಯುತ್ ಕಂಬ: ದೀಪದ ಬುಡದಲ್ಲಿಯೇ ಕತ್ತಲು ಎಂಬಂತೆ ಪಟ್ಟಣದ ಪುರಸಭೆ ಕಚೇರಿಯ ಎದುರಿನಲ್ಲಿಯೇ ಕಬ್ಬಿಣದ ವಿದ್ಯುತ್ ಕಂಬವೊಂದು ರಸ್ತೆ ಮಧ್ಯದಲ್ಲಿಯೇ ಅಪಾಯಕವಾರಿ ಸ್ಥಿತಿಯಲ್ಲಿ ಹಲವು ದಿನಗಳಿಂದ ಇದ್ದರೂ ಅದನ್ನು ತೆರವು ಮಾಡುವ ಕಾರ್ಯಕ್ಕೆ ಮುಂದಾಗದೇ ಇರುವುದು ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿ. ಸದಾ ಜನರಿಂದ ಗಿಜಿಗುಡುವ ಕೆ.ಸಿ. ರಸ್ತೆಯಲ್ಲಂತೂ ಕಬ್ಬಿಣದ ವಿದ್ಯುತ್ ಕಂಬಗಳಿಗೆ ಫ್ಲೆಕ್ಸ್, ಬ್ಯಾನರ್ ಹಾಕುತ್ತಿದ್ದರೂ ಪುರಸಭೆಯ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಂತಿದೆ.

ಜೋತು ಬಿದ್ದ ತಂತಿಗಳು: ಪಟ್ಟಣದ ಕಿತ್ತೂರ ಚನ್ನಮ್ಮ ರಸ್ತೆಯಲ್ಲಿ ನಿತ್ಯವೂ ಸಹಸ್ರಾರು ಜನರು ಓಡಾಡುತ್ತಾರೆ. ಇಲ್ಲಿರುವ ವಿದ್ಯುತ್ ತಂತಿಗಳು ಜೋತು ಬಿದ್ದು ಅಪಾಯಕ್ಕೆ ಆಹ್ವಾನ ನೀಡುತ್ತಿವೆ. ವಿದ್ಯುತ್ ತಂತಿಗಳಲ್ಲಿ ರಸ್ತೆ ಪಕ್ಕದಲ್ಲಿರುವ ಮರ ಗಿಡಗಳ ಕೊಂಬೆಗಳು ಸೇರಿಕೊಂಡಿವೆ. ಈ ರಸ್ತೆಯ ಮೂಲಕವೇ ಗಣೇಶ ಚತುರ್ಥಿಯಲ್ಲಿ ವಿಜೃಂಭನೆಯ ಮೆರವಣಿಗೆ ಸಾಗುತ್ತದೆ. ಮುಂದಾಗಬಹುದಾದ ಅಪಾಯ ಅರಿತು ಸೂಕ್ತ ಕ್ರಮವನ್ನು ಹೆಸ್ಕಾಂ ಅಧಿಕಾರಿಗಳು ಕೈಗೊಳ್ಳಬೇಕು.

ವಿದ್ಯುತ್ ಪ್ರವಹಿಸುವ ಅಪಾಯ: ಶಿಥಿಲವಾದ ಕಬ್ಬಿಣದ ಕಂಬಗಳಿಂದ ವಿದ್ಯುತ್ ಪ್ರವಹಿಸಿ ಅಪಾಯ ಉಂಟಾಗುವ ಸಾಧ್ಯತೆಯಿಂದಾಗಿಯೇ ಹೊಸದಾಗಿ ತಲೆ ಎತ್ತಿದ ಬಡಾವಣೆಗಳಲ್ಲಿ ಸಿಮೆಂಟಿನ ವಿದ್ಯುತ್ ಕಂಬಗಳನ್ನೇ ಅಳಡಿಸಲಾಗಿದೆ. ಆದರೆ ಹಲವು ವರ್ಷಗಳಷ್ಟು ಹಳೆಯದಾಗಿರುವ ಕಬ್ಬಿಣದ ವಿದ್ಯುತ್ ಕಂಬಗಳಿಂದ ಅಪಾಯ ತಪ್ಪಿಸಬೇಕಿದೆ.

ಪಟ್ಟಣದ ಗುರುವಾರ ಪೇಟೆಯಲ್ಲಿ ರಸ್ತೆ ವಿಸ್ತರಣೆ ಮಾಡುತ್ತಿರುವುದರಿಂದ ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಪ್ರಕಾಶ ಹುಕ್ಕೇರಿ ಹಾಗೂ ಶಾಸಕ ಗಣೇಶ ಹುಕ್ಕೇರಿ ಅವರ ಪ್ರಯತ್ನದಿಂದ ಭೂಗತ ವಿದ್ಯುತ್ ಕೇಬಲ್ ಅವಳಡಿಕೆಗೆ ₹ 83 ಲಕ್ಷ ಅನುದಾನ ಮಂಜೂರಾಗಿದೆ. ಪುರಸಭೆ ಕಚೇರಿಯಿಂದ ಅಂಕಲಿಕೂಟದವರೆಗೆ ಕಬ್ಬಿಣದ 15 ವಿದ್ಯುತ್ ಕಂಬಗಳನ್ನು ತೆರವುಗೊಳಿಸಿ ರಸ್ತೆಯ ಎರಡೂ ಬದಿಯಲ್ಲಿ ಭೂಗತ ವಿದ್ಯುತ್ ತಂತಿಯನ್ನು ಅಳವಡಿಸುವ ಕಾರ್ಯ ಆರಂಭವಾಗಬೇಕಿದೆ. ರಸ್ತೆ ವಿಸ್ತರಣೆ ಚರಂಡಿ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಇದು ಪೂರ್ಣಗೊಂಡ ನಂತರ ಭೂಗತ ವಿದ್ಯುತ್ ತಂತಿ ಅಳವಡಿಸುವ ಕಾಮಗಾರಿ ಆರಂಭಗೊಳ್ಳಲಿದೆ.

ಕೈಗೊಳ್ಳಬೇಕಾದ ಪರಿಹಾರ: ಹಳೆಯ ಕಬ್ಬಿಣದ ಕಂಬಗಳನ್ನು ಆದಷ್ಟು ಬೇಗ ಬದಲಾಯಿಸಿ ಸಿಮೆಂಟ್ ಕಂಬಗಳನ್ನು ಅಳವಡಿಸಬೇಕಿದೆ. ವಿದ್ಯುತ್ ಕಂಬ ಹಾಗೂ ವಿದ್ಯುತ್ ಪರಿವರ್ತಕಗಳ ಸುತ್ತಮುತ್ತಲಿನ ಪ್ರದೇಶವನ್ನು ಸುರಕ್ಷಿತವಾಗಿಡಬೇಕು. ಹೆಸ್ಕಾಂ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಂಬಗಳನ್ನು ನಿರಂತರ ಪರಿಶೀಲಿಸಿ ದುರಸ್ತಿ ಮಾಡಬೇಕು.

ಇವರೇನಂತಾರೆ?

ಪಟ್ಟಣದ ಕೆಲವೊಂದು ಬಡಾವಣೆಗಳಲ್ಲಿ ಕಿರಿದಾದ ರಸ್ತೆಗಳು ಇದ್ದು ಇಂತಹ ಕಡೆಗೆ ಇರುವ ಕಬ್ಬಿಣದ ವಿದ್ಯುತ್ ಕಂಬಗಳಿಂದ ಮಳೆಗಾಲದಲ್ಲಿ ವಿದ್ಯುತ್ ಪ್ರವಹಿಸುವ ಸಾಧ್ಯತೆಗಳು ಹೆಚ್ಚಿವೆ.

–ಶಾಂತಾರಾಮ ಜೋಗಳೆ ಸಾಮಾಜಿಕ ಕಾರ್ಯಕರ್ತ

ಪಟ್ಟಣದ ಹಲವು ಕಡೆಗೆ ವಿದ್ಯುತ್ ಪರಿವರ್ತಕ ಹಾಗೂ ಕಬ್ಬಿಣದ ವಿದ್ಯುತ್ ಕಂಬಗಳು ಅಪಾಯಕ್ಕೆ ಆಹ್ವಾನ ನೀಡುವಂತಿವೆ. ಇವುಗಳನ್ನು ಬದಲಾಯಿಸಿ ಸಿಮೆಂಟ್ ಕಂಬವನ್ನು ಅಳವಡಿಸಬೇಕು.

–ಸೀಮಾ ಮಾಳಿ ಗೃಹಿಣಿ

ಪಟ್ಟಣದ ಕೆ.ಸಿ. ರಸ್ತೆಯಲ್ಲಿ ವಿದ್ಯುತ್ ತಂತಿಗಳು ಜೋತು ಬಿದ್ದಿದ್ದು ಕಬ್ಬಿಣದ ಕಂಬಗಳಿಗೆ ಜಾಹೀರಾತುಗಳನ್ನು ಅಳವಡಿಸಲಾಗಿದೆ. ಇದನ್ನು ಸಂಬಂಧಿಸಿದವರು ತೆರವು ಮಾಡಿ ಅಪಾಯ ತಪ್ಪಿಸಬೇಕು.

–ಸಂಗೀತಾ ಕಿತ್ತೂರೆ, ಸ್ಥಳೀಯ

ಪಟ್ಟಣದ ಗುರುವಾರ ಪೇಟೆಯಲ್ಲಿ ರಸ್ತೆ ವಿಸ್ತರಣೆ ಹಿನ್ನೆಲೆಯಲ್ಲಿ ಭೂಗತ ಕೇಬಲ್ ಅಳವಡಿಕೆ ಕಾಮಗಾರಿಯನ್ನು ಶೀಘ್ರದಲ್ಲಿಯೇ ಕೈಗೆತ್ತಿಕೊಳ್ಳಲಾಗುವುದು. ಅವಶ್ಯಕತೆ ಇದ್ದಲ್ಲಿ ಕಬ್ಬಿಣದ ವಿದ್ಯುತ್ ಕಂಬಗಳನ್ನು ಇನ್ನಿತರೆ ಕಡೆಗೆ ತೆರವು ಮಾಡಲಾಗುವುದು.

–ಮಹಾಂತೇಶ ನಿಡವಣಿ, ಪುರಸಭೆ ಪ್ರಭಾರಿ ಮುಖ್ಯಾಧಿಕಾರಿ

ಇಕ್ಕಟ್ಟಾದ ರಸ್ತೆಯಲ್ಲಿ ಇರುವ ಕಬ್ಬಿಣದ ವಿದ್ಯುತ್ ಕಂಬಗಳನ್ನು ತೆರವುಗೊಳಿಸುವುದು ಕಷ್ಟಸಾಧ್ಯವಿದೆ. ಕೆಲವೊಂದು ಕಡೆಗೆ ಭೂಗತ ವಿದ್ಯುತ್ ಕೇಬಲ್ ಅಳವಡಿಸಲಾಗುತ್ತಿದೆ. ಕೆಲವು ವಿದ್ಯುತ್ ಕಂಬಗಳನ್ನು ತೆರವುಗೊಳಿಸಿ ಸಿಮೆಂಟ್ ಕಂಬ ಅಳವಡಿಸಲಾಗುವುದು.

–ಸಂಜೀವಕುಮಾರ ಸುಖಸಾರೆ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಹೆಸ್ಕಾಂ

ಪಟ್ಟಣದಲ್ಲೇಕೆ ನಿರ್ಲಕ್ಷ್ಯ?

ತಾಲ್ಲೂಕು ವ್ಯಾಪ್ತಿಯ ಗ್ರಾಮೀಣ ಭಾಗದಲ್ಲಿ ಕಬ್ಬಿಣದ ವಿದ್ಯುತ್ ಕಂಬಗಳನ್ನು ಬದಲಾಯಿಸಿ ಸಿಮೆಂಟ್ ಕಂಬಗಳನ್ನು ಅಳವಡಿಸಿ ಹಲವು ವರ್ಷಗಳೇ ಕಳೆದಿವೆ. ಆದರೆ ಚಿಕ್ಕೋಡಿ ಪಟ್ಟಣದಲ್ಲಿ ಮಾತ್ರ ಸಿಮೆಂಟ್ ಕಂಬ ಅಳವಡಿಸುವ ಗೋಜಿಗೆ ಯಾರೂ ಹೋಗಿಲ್ಲ. ಈ ಕುರಿತು ಹೆಸ್ಕಾಂ ಅಧಿಕಾರಿಗಳಿಗೆ ಹಲವು ಭಾರಿ ಮನವಿ ಮಾಡಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ ಎಂಬುದು ಪಟ್ಟಣವಾಸಿಗಳ ದೂರು.

ಅಪಾಯ ಕಟ್ಟಿಟ್ಟ ಬುತ್ತಿ

ಮಳೆಗಾಲದಲ್ಲಿ ಕಬ್ಬಿಣದ ಕಂಬಗಳಿಂದ ವಿದ್ಯುತ್ ಪ್ರವಹಿಸಿ ಹಲವು ಭಾರಿ ಅನೇಕರಿಗೆ ಭಯಾನಕ ಅನುಭವವಾಗಿದೆ. ಕಬ್ಬಿಣದ ಕಂಬಗಳನ್ನು ಬದಲಾಯಿಸಿ ಸಿಮೆಂಟ್ ಕಂಬ ಅಳವಡಿಸಬೇಕೆಂಬ ನಿಯಮವಿದ್ದರೂ ಹಳೆಯ ಕಬ್ಬಿಣದ ಕಂಬಗಳೇ ಹಲವು ಕಡೆಗೆ ಇರುವುದು ಕಂಡು ಬರುತ್ತದೆ. ಹಲವು ಭಾರಿ ಅವಘಡಗಳು ಸಂಭವಿಸಿದರೂ ಸಂಬಂಧಿಸಿದವರು ಎಚ್ಚೆತ್ತುಕೊಂಡಿಲ್ಲ ಎಂದು ಹೆಸ್ಕಾಂ ಹಾಗೂ ಪುರಸಭೆಯ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಕಿಡಿ ಕಾರುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.