ಸೋಮವಾರ, 15 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಗದೀಶ ಶೆಟ್ಟರ್‌ ಹೊರಗಿನವರಲ್ಲ; ರಮೇಶ ಜಾರಕಿಹೊಳಿ

Published 1 ಏಪ್ರಿಲ್ 2024, 15:36 IST
Last Updated 1 ಏಪ್ರಿಲ್ 2024, 15:36 IST
ಅಕ್ಷರ ಗಾತ್ರ

ರಾಮದುರ್ಗ: ಜಗದೀಶ ಶೆಟ್ಟರ್‌ ಹೊರಗಿನವರಲ್ಲ. ಅವರು ಮುಖ್ಯಮಂತ್ರಿಯಾದವರು, ನಮ್ಮ ಏಳ್ಗೆಗಾಗಿ ಶ್ರಮಿಸಿದವರು. ಅವರನ್ನು ನಾವು ಎಂದಿಗೂ ಬೇರೆಯವರು ಎಂದು ಬಿಂಬಿಸಬಾರದು ಎಂದು ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಹೇಳಿದರು.

ತಾಲ್ಲೂಕಿನ ಕಟಕೋಳ ಗ್ರಾಮ ವ್ಯಾಪ್ತಿಯಲ್ಲಿ ಚುನಾವಣಾ ಪ್ರಚಾರ ನಡೆಸಿ, ಚುನಾವಣೆ ವೇಳೆಯಲ್ಲಿ ಕೆಲವರು ಜಾತಿ ವಿಷಬೀಜ ಬಿತ್ತಲು ಹೊರಟಿದ್ದಾರೆ ಎಂದರು.

ನರೇಂದ್ರ ಮೋದಿ ಪ್ರಧಾನಿಯಾದರೆ ಬೆಳಗಾವಿಯಿಂದ ಗೆಲ್ಲುವ ಜಗದೀಶ ಶೆಟ್ಟರ್‌ ಅವರು ಕೇಂದ್ರ ಮಂತ್ರಿಯಾಗುತ್ತಾರೆ. ಅವರಿಂದ ಈ ಭಾಗದ ನೀರಾವರಿ ಯೋಜನೆಗಳನ್ನು ಅಭಿವೃದ್ಧಿ ಪಡಿಸುವ ವಿಷಯಗಳನ್ನು ಪ್ರಸ್ತಾಪಿಸಲಾಗುವುದು ಎಂದರು.

ಗ್ರಾಮ ಪ್ರವೇಶಿಸುತ್ತಿದ್ದಂತೆ ತಾಲ್ಲೂಕಿನ ಬೇರೆ ಬೇರೆ ಭಾಗಗಳಿಂದ ಆಗಮಿಸಿದ್ದ ಹಿರಿಯರ ಅಭಿಪ್ರಾಯ ಸಂಗ್ರಹಿಸಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ. ಕೆ ವಿ ಪಾಟೀಲ, ಪಕ್ಷ ಬಲಪಡಿಸುವ ಕುರಿತು ಮಾಹಿತಿ ನೀಡಿದರು.

ಬಿ.ಎಸ್. ಬೆಳವಣಕಿ, ಐ.ಎಸ್‌. ಹರನಟ್ಟಿ, ದ್ಯಾವಪ್ಪ ಬೆಳವಡಿ, ಸಂಜು ಶೆಟ್ಟಿಸದಾವರ್ತಿ, ಸಿದ್ದಪ್ಪಾ ವಾದಿ, ರಮೇಶ್ ಅಣ್ಣಿಗೇರಿ, ಮೈಲಾರಪ್ಪ, ದುಂಡಪ್ಪ ದೇವರಡ್ಡಿ, ಲಕ್ಷ್ಮಣ ಕನಸಗೇರಿ, ಶ್ರೀಶೈಲ ಮೆಳ್ಳಿಕೇರಿ, ಮುಂತಾದವರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT