ನಿಪ್ಪಾಣಿ (ಬೆಳಗಾವಿ ಜಿಲ್ಲೆ): ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಜೊಲ್ಲೆ ಸಮೂಹದ ವತಿಯಿಂದ ನಡೆದಿರುವ ಕೃಷಿ ಉತ್ಸವದಲ್ಲಿನ ಜಾನುವಾರುಗಳ ಪ್ರದರ್ಶನಕ್ಕೆ 2 ವರ್ಷದ 9 ತಿಂಗಳಿನ 3 ಅಡಿ ಎತ್ತರದ ಅತಿ ಕುಳ್ಳ ‘ರಾಧಾ’ ಎಮ್ಮೆ ಪ್ರದರ್ಶನಕ್ಕೆ ತರಲಾಗಿದೆ. ಈ ಎಮ್ಮೆ ಮಹಾರಾಷ್ಟ್ರದ ಸಾತಾರಾ ಜಿಲ್ಲೆಯದ್ದು.

ಅತಿ ಚಿಕ್ಕ ಹಸು ಮತ್ತು ಒಂದೂವರೆ ಟನ್ ತೂಕದ ‘ಗಜೇಂದ್ರ’ ಕೋಣ, 6 ಕೆ.ಜಿ ತೂಕದ ಹುಂಜ, ₹41 ಲಕ್ಷ ಮೌಲ್ಯದ ಅತಿ ಎತ್ತರದ ‘ಸೋನ್ಯಾ’ ಎಂಬ ಎತ್ತು ಸಹ ಜಾನುವಾರು ಪ್ರದರ್ಶನದಲ್ಲಿವೆ.

250ಕ್ಕೂ ಅಧಿಕ ಮಳಿಗೆಗಳಿಗೆ ಅಪಾರ ಜನರು ಅದರಲ್ಲೂ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಈ ಮಳಿಗೆಗಳಲ್ಲಿ ಟ್ರ್ಯಾಕ್ಟರ್, ಜೆಸಿಬಿ ಮಷಿನ್, ಕೃಷಿಗೆ ಸಂಬಂಧಿಸಿದ ಉಪಕರಣ, ಯಂತ್ರೋಪಕರಣ, ಆಹಾರ ಮಳಿಗೆಗಳಿವೆ. 10 ಎಕರೆ ಪ್ರದೇಶದಲ್ಲಿ ಕೃಷಿ ಉತ್ಸವ ನಡೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.