ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಬಡ್ಡಿ ಆಡುವುದರಿಂದ ಧೈರ್ಯ ವೃದ್ಧಿ’

Last Updated 2 ನವೆಂಬರ್ 2021, 14:57 IST
ಅಕ್ಷರ ಗಾತ್ರ

ಕಕಮರಿ: ‘ಕಬಡ್ಡಿ ಆಟದಿಂದ ಯುವಕರಲ್ಲಿ ಧೈರ್ಯ ಹೆಚ್ಚುತ್ತದೆ’ ಎಂದುಬಿಜೆಪಿ ಯುವ ಮೋರ್ಚಾ ಚಿಕ್ಕೋಡಿ ಜಿಲ್ಲಾ ಘಟಕದ ಅಧ್ಯಕ್ಷ ಚಿದಾನಂದ ಸವದಿ ಹೇಳಿದರು.

ಗ್ರಾಮದ ಹನುಮಾನ ಮಂದಿರದ ಆವರಣದಲ್ಲಿ ಅಮ್ಮಾಜೇಶ್ವರಿ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದಿಂದ ಹಮ್ಮಿಕೊಂಡಿದ್ದ ಹೊನಲು ಬೆಳಕಿನ ಕಬಡ್ಡಿ ಟೂರ್ನಿ ಉದ್ಘಾಟಿಸಿ ಅವರು ಮಾತನಾಡಿದರು.

‘ಯುವಕರು ಮೊಬೈಲ್ ಫೋನ್‌ ಗೀಳಿನಿಂದ ಹೊರಬಂದು, ಗ್ರಾಮೀಣ ಆಟಗಳಲ್ಲಿ ತೊಡಗಿ ದೈಹಿಕ ಹಾಗೂ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಸಾನ್ನಿಧ್ಯ ವಹಿಸಿದ್ದ ಗುರುದೇವಾಶ್ರಮದ ಆತ್ಮಾರಾಮ ಸ್ವಾಮೀಜಿ ಮಾತನಾಡಿದರು.

ಬಬಲಾದಿ ಮಠದ ಅಪ್ಪಯ್ಯ ಮಹಾರುದ್ರಯ್ಯ ಹಿರೇಮಠ ಸಾನ್ನಿಧ್ಯ ವಹಿಸಿದ್ದರು. ಡಾ.ಪ್ರಕಾಶ ಕುಮಠಳ್ಳಿ, ಡಿ.ವೈ.ಎಸ್.ಪಿ. ಎಸ್.ವಿ. ಗಿರೀಶ, ಸಿಪಿಐ ಶಂಕರಗೌಡ ಬಸನಗೌಡ, ಅಪ್ಪುಗೌಡ ಪಾಟೀಲ, ಅಪ್ಪಾಸಾಬ ಈರಗೌಡ, ಮುತ್ತಣ್ಣ ಸಿಂದೂರ, ಶ್ರೀಶೈಲ ಜನಗೌಡ, ಸಿದ್ರಾಮ ಬಿಳ್ಳೂರ, ಡಾ.ರವಿ ಸಂಖ, ಶಿವಾನಂದ ಗುಡ್ಡಾಪೂರ, ಗ್ರಾ.ಪಂ. ಸದಸ್ಯರಾದ ಈರಣ್ಣ ಕನ್ನಾಳ, ಈರಣ್ಣ ಬಸರಗಿ, ರಾಮಪ್ಪ ಭಜಂತ್ರಿ, ಮಲ್ಲಿಕಾರ್ಜುನ ಶೇಡ್ಯಾಳ, ಕಲ್ಲಪ್ಪ ತಂಗಡಿ, ವಸಂತ ಕರಡಿ, ಸಂಗಮೇಶ ಪುಠಾಣಿ, ಬಾಳಪ್ಪ ಒಡೆಯರ, ಈರಣ್ಣ ವಾಲಿ, ಬುಜಪ್ಪ ಸವದತ್ತಿ, ಶ್ರೀಕಾಂತ ಮಾಳಿ, ಸಿದ್ದಪ್ಪ ಬಿಳ್ಳೂರ, ಹಣಮಂತ ಕಾಂಬಳೆ,
ಮಹಾದೇವ ಕಾಂಬಳೆ ಇದ್ದರು.

ಶಿಕ್ಷಕ ಮಹಾಂತೇಶ ಮಠಪತಿ ಸ್ವಾಗತಿಸಿದರು. ಶಿಕ್ಷಕ ಮಲ್ಲಿಕಾರ್ಜುನ ಕರಡಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT