ಗುರುವಾರ , ನವೆಂಬರ್ 26, 2020
21 °C

ಗ್ರಾಮೀಣ ವಿದ್ಯುತ್ ಸಹಕಾರಿ ಸಂಘ:ಕಲಗೌಡ ಅಧ್ಯಕ್ಷ, ವಿಷ್ಣು ಉಪಾಧ್ಯಕ್ಷ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಕ್ಕೇರಿ: ರಾಜ್ಯ ಸಹಕಾರಿ ವಲಯದಲ್ಲಿನ ಏಕೈಕ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಅಧ್ಯಕ್ಷರಾಗಿ ಕಲಗೌಡ ಬಸನಗೌಡ ಪಾಟೀಲ (ಯಲ್ಲಾಪುರ) ಮತ್ತು ಉಪಾಧ್ಯಕ್ಷರಾಗಿ ವಿಷ್ಣು ಭರಮಾ ರೇಡೆಕರ್ (ದಡ್ಡಿ) ಗುರುವಾರ ಅವಿರೋಧವಾಗಿ ಆಯ್ಕೆಯಾದರು. ನಿರ್ದೇಶಕ ಪೃಥ್ವಿ ಕತ್ತಿ ಅಧ್ಯಕ್ಷರಿಗೆ ಸೂಚಕರಾಗಿ ಮತ್ತು ನಿರ್ದೇಶಕ ಜಯಗೌಡ ಪಾಟೀಲ ಉಪಾಧ್ಯಕ್ಷರಿಗೆ ಸೂಚಕರಾದರು.

ಚುನಾವಣೆ ಅಧಿಕಾರಿ ಅಶೋಕ ಗುರಾಣಿ ಅಧಿಕೃತ ಘೋಷಣೆ ಮಾಡಿದರು. ನಂತರ ಅಧ್ಯಕ್ಷ ಕಲಗೌಡ ಮತ್ತು ಉಪಾಧ್ಯಕ್ಷ ವಿಷ್ಟು ಅವರು ಸಂಘದ ಸಂಸ್ಥಾಪಕ ದಿ.ಅಪ್ಪಣಗೌಡರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ನಿರ್ದೇಶಕರಾದ ಪೃಥ್ವಿ ಕತ್ತಿ, ಅಶೋಕ ಚಂದಪ್ಪಗೋಳ, ಸೋಮಲಿಂಗ ಪಟೋಳಿ, ಕುನಾಲ ಪಾಟೀಲ, ಜಯಗೌಡ ಪಾಟೀಲ, ಶಶಿರಾಜ ಪಾಟೀಲ, ಬಸಗೌಡ ಮಗೆಣ್ಣವರ, ರವೀಂದ್ರ ಹಿಡಕಲ್, ಕೆಂಚಪ್ಪ ಬೆಣಚಿನಮರಡಿ, ರವೀಂದ್ರ ಅಸೂದೆ, ಈರಪ್ಪ ಬಂಜಿರಾಮ, ಸಂಗೀತಾ ದಪ್ಪಾಧೂಳಿ, ಶಿವಲೀಲಾ ಮಣಗುತ್ತಿ ಉಪಸ್ಥಿತರಿದ್ದರು.

ಸಂಗಮ ಶುಗರ್ಸ್ ಅಧ್ಯಕ್ಷ ರಾಜೇಂದ್ರ ಪಾಟೀಲ, ನಿರ್ದೇಶಕ ಗುರು ಪಾಟೀಲ, ಪುರಸಭೆ ಸದಸ್ಯರಾದ ರಾಜು ಮುನ್ನೋಳಿ, ರಾಜು ಮೊಮೀನ್ ದಾದಾ, ಮಾಜಿ ಉಪಾಧ್ಯಕ್ಷ ಗುರುರಾಜ ಕುಲಕರ್ಣಿ, ಕಿರಣಸಿಂಗ್ ರಜಪೂತ್ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.