ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಶಿವಸೇನಾ, ಎಂಇಎಸ್ ವಿರುದ್ಧ ಪ್ರತಿಭಟನೆ

ಗಡಿಗೆ ಹೊರಟಿದ್ದವರನ್ನು ತಡೆದ ಪೊಲೀಸರು
Last Updated 22 ಜನವರಿ 2022, 15:04 IST
ಅಕ್ಷರ ಗಾತ್ರ

ಗೋಕಾಕ (ಬೆಳಗಾವಿ ಜಿಲ್ಲೆ): ‘ಶಿವಸೇನಾ ಮತ್ತು ಎಂಇಎಸ್ ಸಂಘಟನೆಗಳ ಪುಂಡಾಟಿಕೆ ಹೆಚ್ಚಾದರೆ ಮಹಾರಾಷ್ಟ್ರ ಗಡಿಯೊಳಗೆ ನುಗ್ಗಿ ಹೊಡೆಯುತ್ತೇವೆ’ ಎಂದು ಕನ್ನಡ ಹೋರಾಟಗಾರ ಬಸವರಾಜ ಖಾನಪ್ಪನವರ ಎಚ್ಚರಿಕೆ ನೀಡಿದರು.

ರಾಜ್ಯದ ಗಡಿ ಕಾಯಲು ಶನಿವಾರ ಹೊರಟಿದ್ದ ವೇಳೆ ವಾಲ್ಮೀಕಿ ವೃತ್ತದಲ್ಲಿ ತಮ್ಮನ್ನು ಪೊಲೀಸರು ತಡೆ ಹಿಡಿದ ಸಂದರ್ಭದಲ್ಲಿ ಅವರು ಮಾತನಾಡಿದರು.

‘ನಾಡದ್ರೋಹಿ ಸಂಘಟನೆಗಳ ಉದ್ಧಟತನಕ್ಕೆ ಕಡಿವಾಣ ಹಾಕಲು ಕನ್ನಡಪರ ಸಂಘಟನೆಗಳು ಕಂಕಣ ಬದ್ಧವಾಗಿವೆ. ಪುಂಡರ ಕಿರಿಕಿರಿಯನ್ನು ಮುಂದೆಯೂ ಸಹಿಸಲು ಸಾಧ್ಯವಿಲ್ಲ. ಎಂಇಎಸ್ ಮತ್ತು ಶಿವಸೇನಾ ಸಂಘಟನೆಯನ್ನು ರಾಜ್ಯದಲ್ಲಿ ನಿಷೇಧಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು’ ಎಂದರು.

ಹೋರಾಟಗಾರ ಕೆಂಪಣ್ಣ ಚೌಕಾಶಿ ಮಾತನಾಡಿದರು.

ಮಾರುತಿ ಚೌಕಾಶಿ, ಬಸವರಾಜ ಪಂಜಾನಟ್ಟಿ, ತಮ್ಮಣ್ಣ ಅರಭಾಂವಿ, ಭೀಮಶಿ ಪೂಜೇರಿ, ಸಿದ್ದಪ್ಪ ತೆಳಗೇರಿ, ಮಹಾನಿಂಗ ಬೋವುರಿ, ಸುನೀಲ ತಗ್ಗಿಮನಿ, ಶಶಿ ಚೌಕಾಶಿ, ದೀಪಕ ಹಂಜಿ, ನಿಜಾಮ ನದಾಫ್, ರಮೇಶ ಕಮತಿ, ಮುಗುಟ ಪೈಲವಾನ, ಮಲ್ಲು ಸಂಪಗಾರ, ಮಹಾದೇವ ಮಕ್ಕಳಗೇರಿ, ಬಸವರಾಜ ಗಾಡಿವಡ್ಡರ, ರಾಮ ಕುಡೆಮ್ಮಿ, ಬಸವರಾಜ ಗಣಾಚಾರಿ, ಯಲ್ಲಾಲಿಂಗ ಕಪ್ಪಲಗುದ್ದಿ, ಜಗದೀಶ ರಾಣಪ್ಪಗೋಳ, ಸತ್ತಾರ ಬೇಪಾರಿ, ಯಲ್ಲಪ್ಪಾ ಧರ್ಮಟ್ಟಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT