ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಸ್‌ವೈ, ಸಿಎಂ ಕುರ್ಚಿ ಸ್ಥಾನಕ್ಕೆ ಕುತ್ತು ತಂದಿದ್ದೇ ಲಕ್ಷ್ಮಣ ಸವದಿ: ರಮೇಶ ವಾಗ್ದಾಳಿ

Published 26 ಏಪ್ರಿಲ್ 2023, 4:18 IST
Last Updated 26 ಏಪ್ರಿಲ್ 2023, 4:18 IST
ಅಕ್ಷರ ಗಾತ್ರ

ಅಥಣಿ: ‘ಯಡಿಯೂರಪ್ಪನವರಿಗೆ ಲಕ್ಷ್ಮಣ ಸವದಿ ಅವರನ್ನು ಉಪಮುಖ್ಯಮಂತ್ರಿ ಮಾಡುವ ಮನಸ್ಸು ಇರಲಿಲ್ಲ, ಪಕ್ಷದ ಹಿರಿಯ ಮುಖಂಡರ ಸಹಾಯದಿಂದ ಈ ಲಕ್ಷ್ಮಣ ಸವದಿ ಉಪಮುಖ್ಯಮಂತ್ರಿಯಾದ. ಯಡಿಯೂರಪ್ಪನವರ ಮುಖ್ಯಮಂತ್ರಿ ಸ್ಥಾನಕ್ಕೆ ಕುತ್ತು ತಂದಿದ್ದು ಈ ಸವದಿ ಮಹಾನುಭಾವನಿಂದಲೇ’ ಎಂದು ರಮೇಶ ಜಾರಕಿಹೊಳಿ ಆರೋಪಿಸಿದರು.

ಅವರು ಅಥಣಿ ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಕಾಂಗ್ರೆಸ್ ಪಕ್ಷವನ್ನು ತೊರೆದ ಮುಖಂಡರನ್ನು ಬಿಜೆಪಿ ಸ್ವಾಗತಿಸಿಕೊಂಡು ಮಾತನಾಡಿದರು.

‘ಬಿಜೆಪಿ ಕೇಂದ್ರ ವರಿಷ್ಠರಿಗೆ ಯಡಿಯೂರಪ್ಪ ಬಗ್ಗೆ ತಪ್ಪು ಕಲ್ಪನೆ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು’ ಎಂದು ಸವದಿ ವಿರುದ್ಧ ಏಕವಚನದಲ್ಲಿಯೇ ಹರಿಹಾಯ್ದರು.

‘ಈ ಚುನಾವಣೆಯಲ್ಲಿ ಸವದಿ ಸೋಲಿಸಿ, ಮಹೇಶ್ ಕುಮಟಳ್ಳಿ ಅವರನ್ನು ಬಹುಮತದಿಂದ ಗೆಲ್ಲಿಸಿ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಖಚಿತ. ರಾಜ್ಯದಲ್ಲಿ ನಾವು ಆಡಳಿತಕ್ಕೆ ಬಂದ ಮರುದಿನವೇ ಬೆಳಗಾವಿ ಜಿಲ್ಲಾ ಮಧ್ಯವರ್ತಿ ಸಹಕಾರಿ ಬ್ಯಾಂಕ್‌ ಅಧ್ಯಕ್ಷ ರಮೇಶ್ ಕತ್ತಿ  ಮುಖಾಂತರ 12 ಜನ ನಿರ್ದೇಶಕರ ರಾಜೀನಾಮೆ ಕೊಡಿಸಿ ಸೂಪರ್ ಸೀಡ್ ಮಾಡಿಸುತ್ತೇನೆ’

ಬ್ಯಾಂಕ್‌ನ ನಿರ್ದೇಶಕ ಸ್ಥಾನಕ್ಕೆ ಲಕ್ಷ್ಮಣ ಸವದಿ ವಿರುದ್ಧ ನಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಗೆಲ್ಲಿಸಿ ಸವದಿ ಅವರನ್ನು ಮನೆಗೆ ಕಳುಹಿಸುತ್ತೇನೆ. ನಂತರ ಕೃಷ್ಣ ಸಹಕಾರಿ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಯನ್ನು ಸೂಪರ್ ಸೀಡ್ ಮಾಡಿ ನೂತನ ಚುನಾವಣೆ ನಡೆಸುತ್ತೇವೆ. ಲಕ್ಷ್ಮಣ ಸವದಿಯನ್ನು ರಾಜಕೀಯ ಜೀವನದಿಂದಲೇ ಮುಗಿಸಿ ಮನೆಗೆ ಕಳಿಸುತ್ತೇವೆ’ ಎಂದು ಖಾರವಾಗಿ ನುಡಿದರು.

ಶಾಸಕ ಮಹೇಶ ಕುಮಟಳ್ಳಿ ಮಾತನಾಡಿ, ‘ನಾನು ಕಾಂಗ್ರೆಸ್ ಪಕ್ಷ ತೊರೆದು 17 ಶಾಸಕರೊಂದಿಗೆ ಬಿಜೆಪಿ ಸೇರ್ಪಡೆಗೊಳ್ಳುವಾಗ ₹50 ಕೋಟಿ ಪಡೆದುಕೊಂಡಿದ್ದೇನೆ ಎಂದು ನನ್ನ ಆತ್ಮೀಯ ಸ್ನೇಹಿತ ಸತ್ಯಪ್ಪ ಬಾಗೇಣ್ಣನವರ ಮುಂದೆ ಲಕ್ಷ್ಮಣ ಸವದಿ ಆರೋಪ ಮಾಡಿದ್ದಾರೆ. ಇದಕ್ಕೆ ಅವರಲ್ಲಿ ಸಾಕ್ಷಿ ಇದ್ದರೆ ಅಥಣಿಯ ಸಿದ್ದೇಶ್ವರ ದೇವಸ್ಥಾನಕ್ಕೆ ಬರಲಿ, ನಾನು ಸಹ ಬರುತ್ತೇನೆ. ಅವರು ಸಾರ್ವಜನಿಕವಾಗಿ ಸಿದ್ದೇಶ್ವರ ಸನ್ನಿಧಿಯಲ್ಲಿ ಆಣೆ ಪ್ರಮಾಣ ಮಾಡಲಿ, ಇಲ್ಲವಾದರೆ ಸಾರ್ವಜನಿಕವಾಗಿ ಕ್ಷಮೆ ಕೇಳಲಿ’ ಎಂದು ಸವದಿ ಅವರಿಗೆ ಸವಾಲು ಎಸೆದರು.
 
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷವನ್ನ ತೊರೆದು ವಿವಿಧ ಮುಖಂಡರು ಬಿಜೆಪಿ ಪಕ್ಷವನ್ನು ಸೇರ್ಪಡೆಗೊಂಡರು. ಈ ವೇಳೆ ಚುನಾವಣಾ ಉಸ್ತುವಾರಿ ವಿಜಯ ಕುಮಾರ ಕಡಗಿನೂರ, ಮುಖಂಡರಾದ ಸಿದ್ದಪ್ಪ ಮುದುಕಣ್ಣವರ, ಅಪ್ಪಾಸಾಬ ಅವತಾಡೆ ,ಎ.ಎ.ಹುದ್ದಾರ ,ಶೀತಲ ಪಾಟೀಲ ,ಗೀರಿಶ ಬುಟಾಳಿ,ಅಣ್ಣಾಸಾಬ ನಾಯಿಕ , ರವಿ ಸಂಕ ,ಸಿದ್ದು ಮಾಳಿ ಪುಟ್ಟು ಹೀರೆಮಠ , ಸದಾಶಿವ ಕೋಂಪಿ , ಪುಟ್ಟು ಹೀರೆಮಠ ಮಲ್ಲಿಕಾರ್ಜುನ ಅಂದಾನಿ , ಸಂತೋಷ ಕಕಮರಿ , ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT