ಶನಿವಾರ, ಜುಲೈ 2, 2022
25 °C

SSLC Result 2022: ಬೆಳಗಾವಿ ಜಿಲ್ಲೆಯಲ್ಲಿ 8,363 ವಿದ್ಯಾರ್ಥಿಗಳು ಅನುತ್ತೀರ್ಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಬೆಳಗಾವಿ ಜಿಲ್ಲೆಯಲ್ಲಿ 8,363 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ. ಬೆಳಗಾವಿ ಶೈಕ್ಷಣಿಕ ಜಿಲ್ಲೆಯಲ್ಲಿ 32,866 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಅವರಲ್ಲಿ 28,857 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. 4,009 ಮಂದಿ ಅನುತೀರ್ಣರಾಗಿದ್ದಾರೆ. ವಲಯವಾರು ಫಲಿತಾಂಶದಲ್ಲಿ ಬೈಲಹೊಂಗಲ ಮೊದಲ ಸ್ಥಾನದಲ್ಲಿದ್ದರೆ, ಬೆಳಗಾವಿ ನಗರ ವಲಯ ಕೊನೆಯ ಸ್ಥಾನದಲ್ಲಿದೆ.

ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ 43,507 ವಿದ್ಯಾ‌ರ್ಥಿಗಳು ಪರೀಕ್ಷೆ ಎದುರಿಸಿದ್ದರು. 39,153 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 4,354 ಮಂದಿ ತೇರ್ಗಡೆಯಾಗಿಲ್ಲ. ವಲಯವಾರು ಫಲಿತಾಂಶದಲ್ಲಿ ಮೂಡಲಗಿ ಪ್ರಥಮ ಹಾಗೂ ಕಾಗವಾಡ ಕೊನೆಯ ಸ್ಥಾನ ಗಳಿಸಿದೆ.

ಫಲಿತಾಂಶ ವಿವರ: ಬೆಳಗಾವಿ ಶೈಕ್ಷಣಿಕ ಜಿಲ್ಲೆ

ವಲಯಹಾಜರಾದವರುಉತ್ತೀರ್ಣಅನುತ್ತೀರ್ಣಶೇಕಡಾವಾರುರ‍್ಯಾಂಕ್
ಬೈಲಹೊಂಗಲ4,1553,92223394.391
ರಾಮದುರ್ಗ4,0033,75624793.832
ಸವದತ್ತಿ5,018 4,57943991.25 3
ಬೆಳಗಾವಿ ಗ್ರಾಮೀಣ5,8155,09751890.774
ಖಾನಾಪುರ3,6573,10055784.775
ಚನ್ನಮ್ಮನ ಕಿತ್ತೂರು1,9621,66130184.666
ಬೆಳಗಾವಿ ನಗರ8,4566,7421,71479.737
ಒಟ್ಟು32,86628,8574,00987.80 

ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ

ವಲಯ ಹಾಜರಾದವರುಉತ್ತೀರ್ಣಅನುತ್ತೀರ್ಣಶೇಕಡಾವಾರುರ‍್ಯಾಂಕ್
ಮೂಡಲಗಿ7,0376,73730095.741
ಗೋಕಾಕ4,5174,27224594.582
ಹುಕ್ಕೇರಿ6,7506,30744393.443
ನಿಪ್ಪಾಣಿ4,3803,92645489.634
ರಾಯಬಾಗ7,2566,39884888.305
ಅಥಣಿ6,4885,62686286.716
ಚಿಕ್ಕೋಡಿ4,790401477683.807
ಕಾಗವಾಡ2,2991,87342681.478
ಒಟ್ಟು43,50739,1534,35489.99 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು