ಖಾನಾಪುರ: ಪಟ್ಟಣದ ಹೊರವಲಯದಲ್ಲಿರುವ ಶೇಡೇಗಾಳಿಯ ತೋಟಗಾರಿಕೆ ಕ್ಷೇತ್ರದಲ್ಲಿ ಉತ್ತಮ ಇಳುವರಿ ನೀಡುವ ಕಲ್ಮಿ ಮಾವು, ದೊಡ್ಡ ತೊಳೆಗಳ ಹಲಸು, ಟೆನ್ನಿಸ್ ಬಾಲ್ ಚಿಕ್ಕು, ವೆಂಗುರ್ಲಾ ಗೋಡಂಬಿ ಸೇರಿದಂತೆ ವಿವಿಧ ತೋಟಗಾರಿಕೆ ಬೆಳೆಗಳ ಕಸಿ ಮಾಡಿದ ಸಸಿಗಳನ್ನು ರೈತರಿಗೆ ರಿಯಾಯಿತಿ ದರದಲ್ಲಿ ವಿತರಿಸಲು ಲಭ್ಯ ಇವೆ ಎಂದು ಶೇಡೇಗಾಳಿ ತೋಟಗಾರಿಕಾ ಕ್ಷೇತ್ರದ ಸಹಾಯಕ ನಿರ್ದೇಶಕ ರಾಜಕುಮಾರ ಟಾಕಳೆ ಮಾಹಿತಿ ತಿಳಿಸಿದ್ದಾರೆ.

ರೈತರು ಇಲ್ಲಿಂದ ಖರೀದಿಸಿ ಕೃಷಿ ಜಮೀನುಗಳಲ್ಲಿ ನೆಟ್ಟು ಬೆಳೆಸುವ ಸಸಿಗಳಿಗೆ ತೋಟಗಾರಿಕೆ ಇಲಾಖೆಯಿಂದ ಮತ್ತು ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಿಂದ ಸಹಾಯ ಧನವನ್ನು ಪಡೆಯಬಹುದಾಗಿದೆ ಎಂದು ಶುಕ್ರವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ಕ್ಷೇತ್ರದಲ್ಲಿ ವಿವಿಧ ಪ್ರಕಾರದ ಮಾವು, ಹಲಸು, ಗೋಡಂಬಿ, ನಿಂಬೆ, ಕರಿಬೇವು, ನುಗ್ಗೆ, ತೆಂಗು, ಮಿರಾಕಲ್ ಫ್ರುಟ್, ಅವಕಾಡೋ, ಅಂಜೀರ್, ಕೋಕಮ್, ವಾಟರ್ ಆಪಲ್, ಲಕ್ಷ್ಮಣ ಫಲ, ರಾಮ ಫಲ, ನೇರಳೆ, ಸೇಬು, ಸಪೋಟಾ (ಚಿಕ್ಕು), ಪ್ಯಾಶನ್ ಫ್ರುಟ್, ಪೇರಲ, ಮೆಣಸು ಸೇರಿದಂತೆ ವಿವಿಧ ಪ್ರಕಾರದ ಹಣ್ಣುಗಳ, ತರಕಾರಿ ಮತ್ತು ಆಹಾರ ಪದಾರ್ಥದ ಸಸಿಗಳನ್ನು ಬೆಳೆಸಲಾಗಿದೆ. ತೋತಾಪುರಿ, ಆಪೂಸ್, ಕೇಶರ್, ಮಲ್ಲಿಕಾ ಸೇರಿದಂತೆ ಮಾವಿನ ವಿವಿಧ ತಳಿಗಳ ಸಸಿಗಳನ್ನು ಸಿದ್ಧಪಡಿಸಲಾಗಿದೆ. ಸಸಿಗಳನ್ನು ಬೆಳೆಸಲು ಅವಶ್ಯವಿರುವ ಎರೆಹುಳು ಗೊಬ್ಬರವನ್ನೂ ಇಲ್ಲಿ ಇಲಾಖೆ ನಿಗದಿಪಡಿಸಿದ ದರದಲ್ಲಿ ಮಾರಾಟಕ್ಕೆ ಇರಿಸಲಾಗಿದೆ’ ಎಂದು ವಿವರಿಸಿದ್ದಾರೆ.

ತೋಟಗಾರಿಕೆ ಬೆಳೆಗಳನ್ನು ಕ್ರಮಬದ್ಧವಾಗಿ ಮತ್ತು ಶಿಸ್ತು ಬದ್ಧವಾಗಿ ಬೆಳೆಯುವುದರಿಂದ ರೈತರು ಆರ್ಥಿಕವಾಗಿ ಸಬಲರಾಗಬಹುದು. ಹೊಲಗಳ ಬದುಗಳಲ್ಲಿ, ವ್ಯವಸಾಯಕ್ಕೆ ಉಪಯುಕ್ತವಲ್ಲದ ಜಮೀನಿನಲ್ಲಿ ಮತ್ತು ಹೊಲಕ್ಕೆ ಹೋಗುವ ರಸ್ತೆ ಪಕ್ಕದಲ್ಲಿ ದೀರ್ಘಾವಧಿಯ ಹಣ್ಣು ಮತ್ತು ತರಕಾರಿಯ ಸಸಿಗಳನ್ನು ನೆಡುವ ಮೂಲಕ ನಿಯಮಿತ ಉತ್ಪನ್ನ ಪಡೆಯಬಹುದಾಗಿದೆ.

ಈ ಭಾಗದ ರೈತರು ಗೋಡಂಬಿ ಸಸಿಗಳನ್ನು ತರಲು ವೆಂಗುರ್ಲಾಗೆ, ತೆಂಗಿನ ಸಸಿಗಳನ್ನು ತರಲು ತಿಪಟೂರಿಗೆ ಹೋಗುತ್ತಿದ್ದಾರೆ. ಅಷ್ಟು ದೂರ ಹೋಗಿ ಸಸಿಗಳನ್ನು ತರುವ ಬದಲು ಸ್ಥಳೀಯವಾಗಿ ಲಭ್ಯವಿರುವ ಇಲಾಖೆಯಿಂದ ಪ್ರಮಾಣಿಕೃತ ಸಸಿಗಳನ್ನು ಖರೀದಿಸಿ ತಮ್ಮ ಜಮೀನುಗಳಲ್ಲಿ ನೆಟ್ಟರೆ ರೈತರಿಗೆ ಆರ್ಥಿಕವಾಗಿ ಅನುಕೂಲ ಆಗಲಿದೆ.

ಶಹರ ಪ್ರದೇಶದ ಜನರು ತಮ್ಮ ಮನೆಗಳ ತಾರಸಿ ಮೇಲೆ ಕೈದೋಟ ನಿರ್ಮಿಸಲು ಅಗತ್ಯ ಸಸಿಗಳನ್ನು ಈ ಕ್ಷೇತ್ರದಿಂದ ಪೂರೈಸಲಾಗುತ್ತದೆ. ಆಸಕ್ತ ರೈತರು ಹಾಗೂ ಸಾರ್ವಜನಿಕರು ಶೇಡೇಗಾಳಿ ತೋಟಗಾರಿಕಾ ಕ್ಷೇತ್ರಕ್ಕೆ ಭೇಟಿ ನೀಡಿ ತಮಗೆ ಅಗತ್ಯವಿರುವ ಸಸಿಗಳನ್ನು ಪಡೆಯಬಹುದು. ಹೆಚ್ಚಿನ ಮಾಹಿತಿಗೆ 8951326925 ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.