ಚನ್ನಮ್ಮನ ಕಿತ್ತೂರು: ಜನ್ಮದಿನದ ಪ್ರಯುಕ್ತ ಸಾರ್ವಜನಿಕ ಸ್ಥಳಗಳಲ್ಲಿ ಗೆಳೆಯರೊಂದಿಗೆ ಖಡ್ಗದಿಂದ ಕೇಕ್ ಕಟ್ ಮಾಡುವವರು ಮತ್ತು ಆಯುಧ ಪ್ರದರ್ಶಿಸಿ ಸಾಮಾಜಿಕ ಜಾಲತಾಣಗಳಲ್ಲಿ ಫೋಟೊ ಹಾಕಿಕೊಳ್ಳುವ ಹವ್ಯಾಸ ಬೆಳೆಸಿಕೊಂಡಿರುವ ಯುವಕರ ಮೈ ಚಳಿ ಬಿಡಿಸಲು ಚನ್ನಮ್ಮನ ಕಿತ್ತೂರು ಪೊಲೀಸರು ಮುಂದಾಗಿದ್ದಾರೆ.

ಸಾರ್ವಜನಿಕ ಸ್ಥಳಗಳಲ್ಲಿ ಈ ರೀತಿ ವರ್ತನೆ ತೋರಿ ಸಾಮಾಜಿಕ ಜಾಲತಾಣದಲ್ಲಿ ಚಿತ್ರಗಳ ಹರಿಬಿಟ್ಟಿದ್ದ ಆರು ಯುವಕರ ವಿರುದ್ಧ ಪೊಲೀಸರು ನಾಲ್ಕು ಪ್ರತ್ಯೇಕ ಪ್ರಕರಣ ದಾಖಲಿಸಿದ್ದಾರೆ.

ಎಂ.ಕೆ.ಹುಬ್ಬಳ್ಳಿಯ ಆನಂದ ಚನಬಸಯ್ಯ ಕಲ್ಮಠ (37), ಜೈದ್ ನೂರಅಹಮ್ಮದ ಸನದಿ (19), ತರಬೇಜ್ ಹನೀಫ್ ಖಾದ್ರಿ (18), ರೆಹನ್ ಮುಸ್ತಾಕಅಹಮ್ಮದ್ ಬಡೇಘರ್ (19), ಕಿತ್ತೂರಿನ ಸಾಗರ ಯಲ್ಲಪ್ಪ ಗುಂಜಿ (22), ಚಿಕ್ಕನಂದಿಹಳ್ಳಿಯ ನಾಗರಾಜ ಫಕ್ಕೀರಪ್ಪ ಮೊಕಾಶಿ (25) ವಿರುದ್ಧ ಯುವ ವ್ಯಕ್ತಿಗಳ ಮನಸ್ಸಿನಲ್ಲಿ ಕಾನೂನು ಬಾಹೀರ ಕೃತ್ಯ ಎಸಗಲು ಪ್ರೇರೇಪಿಸಿದ್ದಕಾಗಿ ಪ್ರಕರಣ ದಾಖಲಿಸಲಾಗಿದೆ ಪೊಲೀಸ್ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.