ಮಂಗಳವಾರ, 5 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಂಟಲಿಗೆ ಸಿಲುಕಿದ ಮೂರ್ತಿ, ಕೆಎಲ್ಇ ವೈದ್ಯರ ಯಶಸ್ವಿ ಶಸ್ತ್ರಚಿಕಿತ್ಸೆ

Last Updated 24 ಜೂನ್ 2022, 20:08 IST
ಅಕ್ಷರ ಗಾತ್ರ

ಬೆಳಗಾವಿ: ಗಂಟಲಿನಲ್ಲಿ ಲೋಹದ ಕೃಷ್ಣನ ಚಿಕ್ಕಮೂರ್ತಿ ಸಿಕ್ಕಿಕೊಂಡು, ಪ್ರಾಣಾಪಾಯಕ್ಕೆ ಸಿಲುಕಿದ್ದ ವ್ಯಕ್ತಿ
ಯೊಬ್ಬರಿಗೆ ಇಲ್ಲಿನ ಕೆಎಲ್‌ಇ ಸಂಸ್ಥೆಯಡಾ.ಪ್ರಭಾಕರ ಕೋರೆ ಆಸ್ಪತ್ರೆಯ ವೈದ್ಯರು ಯಶಸ್ವಿಶಸ್ತ್ರಚಿಕಿತ್ಸೆ ಮಾಡಿದ್ದಾರೆ.

ಈ ಅಪರೂಪದ ಶಸ್ತ್ರಚಿಕಿತ್ಸೆಯಲ್ಲಿ ವ್ಯಕ್ತಿ ಪ್ರಾಣಾಪಾಯದಿಂದ ಪಾರಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ.

45 ವರ್ಷದ ವ್ಯಕ್ತಿಯೊಬ್ಬರು ಪ್ರತಿದಿನ ಕೃಷ್ಣನ ಪೂಜೆ ಮಾಡಿದ ಬಳಿಕ, ಪುಟ್ಟ ಮೂರ್ತಿಯನ್ನು ಕೈಯಲ್ಲಿ ಇಟ್ಟುಕೊಂಡು ತೀರ್ಥ ಸೇವಿಸುವ ರೂಢಿ ಬೆಳೆಸಿಕೊಂಡಿದ್ದರು. ಈಚೆಗೆ ತೀರ್ಥ ಸೇವಿಸುವಾಗ ಅದರ ಜತೆಗೆ 5 ಸೆ.ಮೀ ಉದ್ದದ ಕೃಷ್ಣನ ಮೂರ್ತಿಯೂ ಗಂಟಲಿಗೆ ಇಳಿದಿತ್ತು. ಕೆಲ ದಿನಗಳ ನಂತರ ಗಂಟಲಿನಲ್ಲಿ ಊತ ಉಂಟಾಗಿ, ನೋವು ಕಾಣಿಸಿಕೊಂಡಿತು. ವೈದ್ಯರನ್ನು ಸಂಪರ್ಕಿಸಿ, ಎಕ್ಸ್–ರೇ ತೆಗೆಸಿ ನೋಡಿದಾಗ ಗಂಟಲಲ್ಲಿ ಲೋಹದ ಮೂರ್ತಿ ಸಿಲುಕಿದ್ದು ಕಂಡುಬಂತು.

ಬಳಿಕ ಅವರನ್ನು ಡಾ.ಪ್ರಭಾಕರ ಕೋರೆ ಆಸ್ಪತ್ರೆಯಲ್ಲಿನ ತಜ್ಞವೈದ್ಯರು ಎಂಡೊಸ್ಕೊಪಿ ಮೂಲಕ ಪರಿಶೀಲಿಸಿ ದಾಗ, ಮೂರ್ತಿಯ ಎಡಗಾಲು ವ್ಯಕ್ತಿಯ ಅನ್ನನಾಳದಲ್ಲಿ ಸಿಲುಕಿದ್ದು ಗೊತ್ತಾಯಿತು. ಹೀಗಾಗಿ, ಇದನ್ನು ಹೊರತೆಗೆಯುವುದು ದೊಡ್ಡ ಸವಾಲಾಗಿ ಪರಿಣಮಿಸಿತ್ತು.

ಆಸ್ಪತ್ರೆಯ ಇಎನ್‌ಟಿ ವಿಭಾಗದ ವೈದ್ಯರಾದ ಡಾ.ಪ್ರೀತಿ ಹಜಾರೆ, ಡಾ.ವಿನಿತಾ ಮೆಟಗುಟ್ಟಮಠ, ಅರಿವಳಿಕೆ ತಜ್ಞ ಡಾ.ಚೈತನ್ಯ ಕಾಮತ್‌ ಹಾಗೂ ಶುಶ್ರೂಷಕರ ತಂಡ ಶ್ರಮಪಟ್ಟು ಯಶಸ್ವಿ ಶಸ್ತಚಿಕಿತ್ಸೆ ನೆರವೇರಿಸಿತು. ವೈದ್ಯರು, ಸಿಬ್ಬಂದಿಯ ಈ ಕಾರ್ಯ ಕೌಶಲಕ್ಕೆ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT