ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಎಲ್‌ಎಸ್‌ ಜಿಐಟಿಗೆ ಮತ್ತೊಂದು ಗರಿ

Last Updated 16 ಜುಲೈ 2021, 11:49 IST
ಅಕ್ಷರ ಗಾತ್ರ

ಬೆಳಗಾವಿ: ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್ತು (ಎಐಸಿಟಿಇ) ಮತ್ತು ಸಿಐಐ (ಭಾರತೀಯ ಕೈಗಾರಿಕೆಗಳ ಒಕ್ಕೂಟ) ಜಂಟಿಯಾಗಿ ನಡೆಸಿದ ಸಮೀಕ್ಷೆಯಲ್ಲಿ ನಗರದ ಕೆಎಲ್‌ಎಸ್‌ ಗೋಗಟೆ ತಾಂತ್ರಿಕ ಮಹಾವಿದ್ಯಾಲಯ (ಜಿಐಟಿ) ‘ಪ್ಲಾಟಿನಂ’ ಸ್ಥಾನವನ್ನು ಪಡೆದುಕೊಂಡಿದೆ.

ಎಐಸಿಟಿಇ ಅನುಮೋದಿತ ತಾಂತ್ರಿಕ ಸಂಸ್ಥೆಗಳು ಮತ್ತು ಉದ್ಯಮದ ನಡುವಿನ ಸಹಭಾಗಿತ್ವದ ಪ್ರಸ್ತುತ ಸ್ಥಿತಿಯನ್ನು ನಿರ್ಣಯಿಸಲು ದೇಶದಾದ್ಯಂತ ತಾಂತ್ರಿಕ ಸಂಸ್ಥೆಗಳ ಸಮೀಕ್ಷೆಯನ್ನು ಇತ್ತೀಚೆಗೆ ನಡೆಸಲಾಗಿತ್ತು. ಶೈಕ್ಷಣಿಕ ಪಠ್ಯಕ್ರಮ, ಬೋಧನಾ ವಿಭಾಗ, ಆಡಳಿತ, ಮೂಲಸೌಕರ್ಯ, ನಿಯೋಜನೆಗಳು ಮತ್ತು ಸಂಶೋಧನೆ ಮತ್ತು ಸೇವೆಗಳು, ಯೋಜನೆ ಮತ್ತು ಕೌಶಲ ಅಭಿವೃದ್ಧಿ ಮುಂತಾದ ಮೂಲಭೂತ ಅಂಶಗಳನ್ನು ಆಧರಿಸಿ ಈ ಸಮೀಕ್ಷೆ ನಡೆಸಲಾಗಿತ್ತು.

ಸಮೀಕ್ಷೆಯಲ್ಲಿ 9,500 ಸಂಸ್ಥೆಗಳು ಭಾಗವಹಿಸಿದ್ದವು ಮತ್ತು 4,400 ಅರ್ಹ ಸಂಸ್ಥೆಗಳನ್ನು ಅಂತಿಮ ಪಟ್ಟಿಯಲ್ಲಿ ಹೆಸರಿಸಲಾಗಿತ್ತು. ಈ ಅರ್ಹ ಸಂಸ್ಥೆಗಳನ್ನು ಸಂಪೂರ್ಣ ಸಮೀಕ್ಷೆಗೆ ಒಳಪಡಿಸಲಾಗಿತ್ತು. ಈ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಒಟ್ಟು 262 ಸಂಸ್ಥೆಗಳು ‘ಚಿನ್ನದ ವಿಭಾಗ’ ಮತ್ತು 368 ಸಂಸ್ಥೆಗಳು ‘ಬೆಳ್ಳಿ ವಿಭಾಗ’ದಲ್ಲಿ ಸ್ಥಾನ ಪಡೆದಿವೆ. 184 ಸಂಸ್ಥೆಗಳು ‘ಪ್ಲಾಟಿನಂ’ ವಿಭಾಗದಲ್ಲಿ ಸೇರಿವೆ. ಇದರಲ್ಲಿ ಜಿಐಟಿ ಒಂದಾಗಿದೆ. ಈ ಸಾಧನೆಗಾಗಿ ಕಾಲೇಜಿನ ಇಡೀ ತಂಡವನ್ನು ಕೆಎಲ್ಎಸ್ ಜಿಐಟಿ ಆಡಳಿತ ಮಂಡಳಿ ಅಧ್ಯಕ್ಷ ಎಂ.ಆರ್. ಕುಲಕರ್ಣಿ ಮತ್ತು ಸದಸ್ಯರು ಅಭಿನಂದಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT