ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಸಿಂಚಾಯಿ ಯೋಜನೆ ರೈತರಿಗೆ ಅನುಕೂಲ: ಸಂಸದ ಅಣ್ಣಾಸಾಹೇಬ ಜೊಲ್ಲೆ

Last Updated 9 ಜುಲೈ 2022, 9:15 IST
ಅಕ್ಷರ ಗಾತ್ರ

ಚಿಕ್ಕೋಡಿ (ಬೆಳಗಾವಿ ಜಿಲ್ಲೆ): ಮಳೆ ನೀರು ಹರಿದು ಜಲಾಶಯ ಸೇರುವುದರಿಂದ ನೀರಿನ ಜೊತೆ ಮಣ್ಣು ಕೂಡ ಹೋಗುತ್ತದೆ. ಇದನ್ನು ತಡೆಯಲು ಪ್ರಧಾನಿ ಮೋದಿ ಅವರು 'ಸಮಗ್ರ ಕೃಷಿ ಸಿಂಚಾಯಿ' ಯೋಜನೆ ಜಾರಿ ಮಾಡಿದ್ದಾರೆ. ನೀರು ತಡೆಯುವುದರಿಂದ ರೈತರ ಬಾವಿ, ಬೋರ್ವೆಲ್ ಅಂತರ್ಜಲ ಮಟ್ಟ ಹೆಚ್ಚಳವಾಗುತ್ತದೆ ಎಂದು ಸಂಸದ ಅಣ್ಣಾಸಾಹೇಬ ಜೊಲ್ಲೆ ಹೇಳಿದರು.

ತಾಲ್ಲೂಕಿನ ತೋರಣಹಳ್ಳಿ ಗ್ರಾಮದಲ್ಲಿ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ- ಜಲಾನಯನ ಅಭಿವೃದ್ಧಿ ಘಟಕವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.

ಕೃಷಿ ಸಿಂಚಾಯಿ ಯೋಜನೆಗೆ ₹13.62 ಕೋಟಿ ಮಂಜೂರಾಗಿದೆ. ಈ ಯೋಜನೆಯನ್ನು ಲೋಕಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ವಿಸ್ತರಿಸಲು ಪ್ರಯತ್ನ ಮಾಡಲಾಗುತ್ತದೆ ಎಂದರು.

ಕಿಸಾನ್ ಸಮ್ಮಾನ್ ಯೋಜನೆಯಿಂದ ದೇಶದ 25 ಕೋಟಿ ರೈತರಿಗೆ ಅನುಕೂಲವಾಗಿದೆ. ಕೇಂದ್ರ ಸರ್ಕಾರದ ಯೋಜನೆಗಳನ್ನು ಪ್ರತಿಯೊಬ್ಬರಿಗೆ ಮುಟ್ಟಿಸುವ ಕೆಲಸವನ್ನು ಸರ್ಕಾರ ಮಾಡುತ್ತದೆ ಎಂದರು.

ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ ಮಾತನಾಡಿ, ಸಮಗ್ರ ಜಲಾನಯನ ಮೂಲಕ ನಾಲ್ಕು ಗ್ರಾಮ ಪಂಚಾಯಿತಿ ವ್ಯಾಪ್ತಿಯ 6100 ಹೆಕ್ಟೇರ್ ಪ್ರದೇಶದಲ್ಲಿ ಬದು ನಿರ್ಮಾನ ಮಾಡಲಾಗುತ್ತದೆ. ಹರಿಯುವ ನೀರನ್ನು ತಡೆಯಬೇಕು. ನೀರು ಇಂಗುವ ಹಾಗೇ ಮಾಡಿದರೆ ಮಣ್ಣು ಫಲವತ್ತವಾಗುತ್ತದೆ ಎಂದರು.

ಮಣ್ಣು ರೈತನ ಕಣ್ಣು. ಮಣ್ಣು ಸಂರಕ್ಷಣೆ ಮಾಡಿದರೆ ರೈತನಿಗೆ ಅನುಕೂಲ. ಮಳೆ ನೀರು ಹರಿದು ಹೋಗದಂತೆ ತಡೆದು ನಿಲ್ಲಿಸುವುದೇ ಸಮಗ್ರ ಜಲಾನಯನ ಯೋಜನೆ ಉದ್ದೇಶ ಎಂದರು.

ಹೆಸ್ಕಾಂ ನಿರ್ದೇಶಕ ಮಹೇಶ ಭಾತೆ ಮಾತನಾಡಿ, ಸಂಸದ ಅಣ್ಣಾಸಾಹೇಬ ಜೊಲ್ಲೆಯವರ ವಿಶೇಷ ಪ್ರಯತ್ನದಿಂದ ಪ್ರಧಾನಮಂತ್ರಿ ಸಿಂಚಾಯಿ ಯೋಜನೆ ನಮ್ಮ ಜಿಲ್ಲೆಗೆ ಬೇಗ ಸಿಕ್ಕಿದೆ. ರೈತರು ಆಸಕ್ತಿಯಿಂದ ಯೋಜನೆಯ ಲಾಭ ಪಡೆಯಬೇಕು ಎಂದರು.

ಕೃಷಿ ಇಲಾಖೆ ಉಪನಿರ್ದೇಶಕ ಎಲ್.ಐ.ರೂಡಗಿ, ಹೆಸ್ಕಾಂ ನಿರ್ದೇಶಕ ಮಹೇಶ ಭಾತೆ ನ್ಯಾಯವಾದಿ ಅಶೋಕ ಹರಗಾಪೂರೆ, ಬಿಜೆಪಿ ಕೃಷಿ ಮೋರ್ಚಾ ರಾಜ್ಯ ಘಟಕದ ಉಪಾಧ್ಯಕ್ಷ ದುಂಡಪ್ಪ ಬೆಂಡವಾಡೆ, ರಾಮನಗೌಡ ಪಾಟೀಲ, ಸಹಾಯಕ ಕೃಷಿ ನಿರ್ದೇಶಕ ಮಂಜೂನಾಥ ಜನಮಟ್ಟಿ, ರಾಮಗೌಡ ಸಣ್ಣಲಚ್ಚಪ್ಪಗೋಳ, ವಿಜಯ ಕೋಠಿವಾಲೆ, ಬಸವರಾಜ ಮಾಳಗೆ, ಎಪಿಎಂಸಿ ಉಪಾಧ್ಯಕ್ಷ ರಾಯಗೌಡ ಕೆಳಗಿನಮನಿ, ಕೃಷ್ಣಪ್ಪ ಜೋಗಿ,ಗ್ರಾಮ ಪಂಚಾಯಿತಿ ಅಧ್ಯಕ್ಷ ಸುರೇಶ ಘರಬುಡೆ ಮುಂತಾದವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT