‘ತ್ರಿಭಾಷಾ ನೀತಿಯಿಂದ ಲಾಭವಿಲ್ಲ’
‘ತಮಿಳುನಾಡಿನಲ್ಲಿ ತ್ರಿಭಾಷಾ ನೀತಿ ತಿರಸ್ಕರಿಸಿ ತಮಿಳು ಹಾಗೂ ಇಂಗ್ಲಿಷ್ ಒಳಗೊಂಡ ದ್ವಿಭಾಷಾ ನೀತಿ ಜಾರಿಗೆ ತರಲಾಗಿದೆ. ಪ್ರಸ್ತುತ ಕಾಲಘಟ್ಟದಲ್ಲಿ ಜಾಗತಿಕ ವ್ಯವಹಾರ ಉನ್ನತ ಶಿಕ್ಷಣ ಮತ್ತು ವೃತ್ತಿ ನಿರ್ವಹಣೆಗೆ ಇಂಗ್ಲಿಷ್ ಕಲಿಕೆ ಅಗತ್ಯವಾಗಿದೆ. ಆದರೆ ಹಿಂದಿ ಕಡ್ಡಾಯವಾಗಿ ಓದುವುದರಿಂದ ರಾಜ್ಯದ ಮಕ್ಕಳಿಗೆ ಉಪಯೋಗವಿಲ್ಲ. ತ್ರಿಭಾಷಾ ನೀತಿಯಿಂದ ಕರ್ನಾಟಕಕ್ಕೆ ಲಾಭವಿಲ್ಲ’ ಎಂದು ಕಾರ್ಯಕರ್ತರು ತಿಳಿಸಿದರು.