ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸವದತ್ತಿಯಲ್ಲಿ ಸರ್ಕಾರಿ ಸಾರಿಗೆ ನೌಕರ ಆತ್ಮಹತ್ಯೆ

Last Updated 9 ಏಪ್ರಿಲ್ 2021, 18:18 IST
ಅಕ್ಷರ ಗಾತ್ರ

ಸವದತ್ತಿ (ಬೆಳಗಾವಿ ಜಿಲ್ಲೆ): ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಎನ್‌ಡಬ್ಲ್ಯುಕೆಆರ್‌ಟಿಸಿ)ಯ ಚಾಲಕ ಕಂ. ನಿರ್ವಾಹಕ
ರಾಗಿದ್ದ ಶಿವಕುಮಾರ ಕಲ್ಲಪ್ಪ ನೀಲಸಾಗರ (40) ಅವರುತಾಲ್ಲೂಕಿನ ಉಗರಗೋಳ ಗ್ರಾಮದ ತಮ್ಮ ಮನೆಯಲ್ಲಿ ಗುರುವಾರ ತಡ
ರಾತ್ರಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸವದತ್ತಿ ಘಟಕದಲ್ಲಿ 12 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದರು. ಅವರಿಗೆ ತಂದೆ, ತಾಯಿ, ಪತ್ನಿ, ಪುತ್ರಿ ಹಾಗೂ ಇಬ್ಬರು ಪುತ್ರರು ಇದ್ದಾರೆ.

‘ಖಾಸಗಿಯವರಿಂದ (ಕೈ ಸಾಲ) ₹ 4 ಲಕ್ಷ ಹಾಗೂ ಕೆನರಾ ಬ್ಯಾಂಕ್‌ನಿಂದ ₹ 3 ಲಕ್ಷ ಸಾಲ ಮಾಡಿದ್ದರು. ಬೆಳೆ ಸರಿಯಾಗಿ ಬಾರದೆ ಇದ್ದಿದ್ದರಿಂದ, ಸಾಲ ತೀರಿಸಲಾಗದೆ ‌ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಸಾವಿನಲ್ಲಿ ಸಂಶಯವಿಲ್ಲ’ ಎಂದು ಪತ್ನಿ ಲಕ್ಷ್ಮಿ ಸವದತ್ತಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಸಾರಿಗೆ ನೌಕರರ ಸಂಘದವರು ಮನೆಗೆ ಬಂದ ಬಳಿಕ ಮತ್ತೊಂದು ದೂರು ನೀಡಿದ್ದಾರೆ.

‘ಪತಿ ಸಾವಿನ ದುಃಖದಲ್ಲಿದ್ದ ನಾನು ಮೊದಲಿಗೆ ಸರಿಯಾಗಿ ಹೇಳಿಕೆ ಕೊಡಲಾಗಿರಲಿಲ್ಲ. ಅನ್ಯಾಯ ಆಗಿರುವುದನ್ನು ಪುನರ್‌ ಹೇಳಿಕೆ ಮೂಲಕ ತಿಳಿಸುತ್ತಿದ್ದೇನೆ. ಎರಡು ತಿಂಗಳಿಂದಲೂ ಸಂಬಳ ಆಗಿಲ್ಲ. ಈ ತಿಂಗಳೂ ಸಂಬಳ ಆಗುವುದಿಲ್ಲ ಎಂದು ಪತಿ ಗೋಳಾಡುತ್ತಿದ್ದರು. 2 ದಿನಗಳಿಂದ 6ನೇ ವೇತನ ಆಯೋಗದ ವಿಷಯವನ್ನು ಮಾನಸಿಕವಾಗಿ ಹಚ್ಚಿಕೊಂಡಿದ್ದರು. ಅವರು ದುಡಿದರಷ್ಟೆ ಜೀವನ ನಡೆಯುತ್ತಿತ್ತು. ಅವರ ಹೆಸರಿನಲ್ಲಿ ಹೊಲ ಅಥವಾ ಮನೆ ಇಲ್ಲ. ಆತ್ಮಹತ್ಯೆಗೆ ಬೆಳೆ ಹಾಗೂ ಮನೆ ಸಾಲ ಕಾರಣವಲ್ಲ. ಸರ್ಕಾರವೇ ಕಾರಣವಾಗಿದೆ ಮತ್ತು ನೇರ ಹೊಣೆಯಾಗಿದೆ’ ಎಂದು ಮರು ಹೇಳಿಕೆ ನೀಡಿದ್ದಾರೆ.

ನೌಕರರ ಸಂಘದವರು ಸ್ಥಳೀಯರು ಮತ್ತು ಪೊಲೀಸ್ ಸಿಬ್ಬಂದಿ ಎದುರು ಬರೆದ ಪುನರ್‌ ಹೇಳಿಕೆಗೆ ಪತ್ನಿ ಸಹಿ ಹಾಕಿದರು. ಅದನ್ನು ಪೊಲೀಸರಿಗೆ ನೀಡಲಾಯಿತು.

*
ಆ ನೌಕರನ ಪತ್ನಿ ದೂರು ಕೊಟ್ಟ ನಂತರ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಪ್ರಕರಣ ದಾಖಲಾಗಿದೆ. ನೌಕರರ ಸಂಘದವರು ಮತ್ತೊಂದು ಮನವಿ ಕೊಟ್ಟಿದ್ದಾರೆ. 2ನೇ ಬಾರಿ ಕೊಟ್ಟಿರುವುದನ್ನು ಮನವಿ ಎಂದಷ್ಟೇ ಪರಿಗಣಿಸಲಾಗುತ್ತದೆ.
-ಲಕ್ಷ್ಮಣ ನಿಂಬರಗಿ, ಎಸ್ಪಿ, ಬೆಳಗಾವಿ

**
ಪ್ರಾಣಾಪಾಯದಿಂದ ಪಾರು
ಗದಗ:
ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದ ಸಾರಿಗೆ ಸಂಸ್ಥೆ ನೌಕರ ವಸಂತ ರಾಮದುರ್ಗ ಪ್ರಾಣಾಪಾಯದಿಂದ ಪಾರಾಗಿ
ದ್ದಾರೆ ಎಂದು ಗದಗ ಜಿಲ್ಲಾ ವೈದ್ಯಕೀಯ ವಿಜ್ಞಾನ ಸಂಸ್ಥೆ ನಿರ್ದೇಶಕ ಡಾ. ಭೂಸರೆಡ್ಡಿ ತಿಳಿಸಿದ್ದಾರೆ.

‘ವಸಂತ ಚೇತರಿಸಿಕೊಳ್ಳುತ್ತಿದ್ದು, ಅವರನ್ನು ಶನಿವಾರ ಆಸ್ಪತ್ರೆಯಿಂದ ಮನೆಗೆ ಕಳುಹಿಸಲಾಗುವುದು’ ಎಂದರು.

**
ಮೂವರು ತರಬೇತಿ ಸಿಬ್ಬಂದಿ ವಜಾ

ಹುಬ್ಬಳ್ಳಿ: ಕರ್ತವ್ಯಕ್ಕೆ ಗೈರು ಹಾಜರಾದ ಹುಬ್ಬಳ್ಳಿ ಗ್ರಾಮಾಂತರ ಸಾರಿಗೆ ವಿಭಾಗೀಯ ವ್ಯಾಪ್ತಿಯ ಮೂವರು ತರಬೇತಿ ಚಾಲಕರನ್ನು ಶುಕ್ರವಾರ ವಜಾ ಮಾಡಲಾಗಿದೆ.

‘ಹುಬ್ಬಳ್ಳಿ ಗ್ರಾಮಾಂತರ ಎರಡನೇ ಡಿಪೊದ ಎಂ.ಬಿ.ಬಿಸಲದಿನ್ನಿ, ನವಲಗುಂದ ಡಿಪೊದ ಎಸ್.ಎಫ್. ಆದಮ್ಮನವರ ಮತ್ತು ಕಲಘಟಗಿ
ಡಿಪೊದ ಜಗಜೀವರಾಮ ಎಂಬುವವರನ್ನು ವಜಾ ಮಾಡಲಾಗಿದೆ’ ಎಂದು ಹುಬ್ಬಳ್ಳಿ ಗ್ರಾಮಾಂತರ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT