ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೂಡಲಗಿ | ಕುರುಹಿನಶೆಟ್ಟಿ ಸೊಸೈಟಿ  ₹4.93 ಕೋಟಿ ಲಾಭ: ಮುಗಳಖೋಡ

Published : 24 ಆಗಸ್ಟ್ 2024, 13:56 IST
Last Updated : 24 ಆಗಸ್ಟ್ 2024, 13:56 IST
ಫಾಲೋ ಮಾಡಿ
Comments

ಮೂಡಲಗಿ: ‘ಮೂಡಲಗಿ ಕುರುಹಿನಶೆಟ್ಟಿ ಅರ್ಬನ್‌ ಕೋ– ಆಪ್‌ ಕ್ರೆಡಿಟ್‌ ಸೊಸೈಟಿಯು 2023–24ನೇ ಆರ್ಥಿಕ ವರ್ಷದ ಕೊನೆಯಲ್ಲಿ ₹4.93 ಕೋಟಿ ಲಾಭ ಗಳಿಸಿ ಪ್ರಗತಿಯಲ್ಲಿ ಸಾಗಿದೆ’ ಎಂದು ಸೊಸೈಟಿಯ ಅಧ್ಯಕ್ಷ ಬಸಪ್ಪ ಚಿ. ಮುಗಳಖೋಡ ಹೇಳಿದರು.

ಇಲ್ಲಿಯ ಕುರುಹಿನಶೆಟ್ಟಿ ಅರ್ಬನ್‌ ಕೋ– ಆಪ್‌ ಕ್ರೆಡಿಟ್‌ ಸೊಸೈಟಿಯ 29ನೇ ವಾರ್ಷಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ಸೊಸೈಟಿಯು ಸದ್ಯ ₹3.90 ಲಕ್ಷ ಶೇರು ಬಂಡವಾಳ, ₹230. 85 ಕೋಟಿ ಠೇವುಗಳು, ₹269.40 ಕೋಟಿ ದುಡಿಯುವ ಬಂಡವಾಳವನ್ನು ಹೊಂದಿದೆ’ ಎಂದರು.

‘ಸೊಸೈಟಿಯು ವಿವಿಧ ಕ್ಷೇತ್ರಗಳ ಜನರಿಗೆ ಒಟ್ಟು ₹162.41 ಕೋಟಿ ಸಾಲ ನೀಡಿದೆ. ಸೊಸೈಟಿಯು 14 ಶಾಖೆಗಳನ್ನು ಹೊಂದಿದ್ದು ತುಕ್ಕಾನಟ್ಟಿ, ರಾಮದುರ್ಗ ಮತ್ತು ತೇರದಾಳ ಶಾಖೆಗಳು ಸ್ವಂತ ಕಟ್ಟಡಗಳನ್ನು ಹೊಂದಿವೆ. ಪ್ರತಿ ವರ್ಷವೂ ಅಡಿಟ್‌ದಲ್ಲಿ ‘ಅ’ ಶ್ರೇಣಿಯನ್ನು ಪಡೆದುಕೊಂಡು ಗ್ರಾಹಕರ ವಿಶ್ವಾಸವನ್ನು ಕಾಯ್ದುಕೊಂಡು ಬಂದಿದೆ’ ಎಂದರು.

ಲೆಕ್ಕ ಪರಿಶೋಧಕ ಸೈದಪ್ಪ ಗದಾಡಿ ಹಾಗೂ ರಾಮದುರ್ಗ ಶಾಖಾ ಸಲಹಾ ಸಮಿತಿ ಸದಸ್ಯ ಶಂಕ್ರಯ್ಯ ಹಿರೇಮಠ ಮಾತನಾಡಿದರು. ಸೊಸೈಟಿಯ ಪ್ರಧಾನ ಕಾರ್ಯದರ್ಶಿ ರಮೇಶ ವಂಟಗೂಡಿ ಪ್ರಾಸ್ತಾವಿಕ ಮಾತನಾಡಿದರು.

ವಿವಿಧ ಇಲಾಖೆಗಳಲ್ಲಿ ನಿವೃತ್ತರಾದವರಿಗೆ ಸನ್ಮಾನಿಸಿದರು ಮತ್ತು ಪ್ರತಿಭಾವಂತ ವಿದ್ಯಾರ್ಥಿಗೆ ಪ್ರೋತ್ಸಾಹ ಧನ ನೀಡಿ ಗೌರವಿಸಿದರು.

ಸೊಸೈಟಿ ಉಪಾಧ್ಯಕ್ಷ ಲಕ್ಕಪ್ಪ ಪೂಜೇರಿ, ನಿರ್ದೇಶಕರಾದ ಸುಭಾಷ ಬೆಳಕೂಡ, ಇಸ್ಮಾಯಿಲ ಕಳ್ಳಿಮನಿ, ಗೊಡಚಪ್ಪ ಮುರಗೋಡ, ಬಸವರಾಜ ಬೆಳಕೂಡ, ವಿಶಾಲ ಶೀಲವಂತ, ಉಮಾ ಬೆಳಕೂಡ, ಶಾಂತವ್ವ ಬೊರಗಲ್, ಮಾಹಬೂಬಿ ಕಳ್ಳಿಮನಿ, ಮಾಲಾ ಬೆಳಕೂಡ, ಶ್ಯಾಲನ್ ಕೊಡತೆ ಹಾಗೂ ವಿವಿಧ ಶಾಖಾ ಸಲಹಾ ಸಮಿತಿಯ ಎಲ್ಲ ಪದಾಧಿಕಾರಿಗಳು, ಸಿಬ್ಬಂದಿ ಇದ್ದರು.

ಚಂದ್ರಕಾಂತ ಕೊಡತೆ ನಿರೂಪಿಸಿದರು, ಪ್ರಮೋದ ಯಲಬುರ್ಗಿಮಠ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT