ಬುಧವಾರ, ಜೂನ್ 29, 2022
26 °C

ಹುಕ್ಕೇರಿ: ವಿಜೃಂಭಣೆಯ ಲಕ್ಷ್ಮೀದೇವಿ ಜಾತ್ರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಕ್ಕೇರಿ: ತಾಲ್ಲೂಕಿನ ಬೆಲ್ಲದ ಬಾಗೇವಾಡಿಯಲ್ಲಿ ಶುಕ್ರವಾರ ಮಹಾಲಕ್ಷ್ಮೀ (ಮಲೆವ್ವ)ದೇವಿ ಮತ್ತು ದುರ್ಗಾದೇವಿ ಜಾತ್ರೆ ವಿಜೃಂಭಣೆಯಿಂದ ಜರುಗಿತು.

ಗ್ರಾಮದ ಜಡಿಸಿದ್ಧೇಶ್ವರ ಆನಂದಾಶ್ರಮದಿಂದ ಪ್ರಮುಖ ಬೀದಿಗಳ ಮೂಲಕ ಮಹಾಲಕ್ಷ್ಮೀದೇವಿ ಮಂದಿರದವರೆಗೆ ಮೆರವಣಿಗೆಯಲ್ಲಿ ಬಂದರು. ನಂತರ ದೇವಿಗೆ ಉಡಿ ತುಂಬುವುದು ಮತ್ತು ಮಹಿಳೆಯರಿಗೆ ಉಡಿ ತುಂಬುವ (ಬೊಟ್ಟು ಕೊಡುವ) ಕಾರ್ಯಕ್ರಮ ಜರುಗಿತು. ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ್ ಕತ್ತಿ ದೇವಿಯ ದರ್ಶನ ಪಡೆದರು.

ಸಚಿವರ ಭೇಟಿ: ಶುಕ್ರವಾರ ಮುಂಜಾನೆ ಅರಣ್ಯ, ಆಹಾರ ಖಾತೆ ಸಚಿವ ಉಮೇಶ್ ಕತ್ತಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದರು. ಜಾತ್ರೆಗಳು ಸಮಾಜದ ಸಾಂಸ್ಕೃತಿಕ ಪ್ರತಿಬಿಂಬಗಳು. ಜಾತ್ರೆಗಳು ಜನರ ಮನಸ್ಸು ಒಗ್ಗೂಡಿಸುವ ಮಾರ್ಗವಾಗಿದ್ದರಿಂದ ಹಿರಿಯರು ಆಚರಿಸುತ್ತ ಬಂದಿದ್ದಾರೆ. ಜನರು ಭಕ್ತಿಭಾವದಿಂದ ಜಾತ್ರೆ ಆಚರಿಸಬೇಕು ಎಂದರು. ಮುಖಂಡರಾದ ದಿಲೀಪ ವಾಳಿಕಿಂಡಿ, ಶಿವಾಜಿ ಸಂಜೀವಗೋಳ, ಬಸವರಾಜ ಹೂಲಿ, ಲಕ್ಷ್ಮಣ ಹೂಲಿ, ಸಂಜು ಮಾಡಲಗಿ, ಕುಮಾರ ಕಳಸಪ್ಪಗೋಳ, ವಿಠ್ಠಲ ಮಾಡಲಗಿ ಇದ್ದರು. ಇಡೀ ದಿನ ಮಹಿಳೆಯರು ದೇವಿಗೆ ನೈವೇದ್ಯ ಅರ್ಪಿಸಿ ಉಡಿ ತುಂಬಿದರು.

ಶನಿವಾರ ಮುಂಜಾನೆ ಸಾರ್ವಜನಿಕರಿಂದ ದೇವಿಗೆ ನೈವೇದ್ಯ ಹಿಡಿಯುವ ಮತ್ತು ಉಡಿ ತುಂಬುವ ಕಾರ್ಯಕ್ರಮ ಜರುಗಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು