ಅಥಣಿ: ‘ಲಕ್ಷ್ಮಣ ಸವದಿ ಮತ್ತು ಅವರ ಪುತ್ರ ಚಿದಾನಂದ ಅವರು ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ನಿಂಗಪ್ಪ ಕರೆಣ್ಣವರ ಸುಳ್ಳು ಹೇಳುತ್ತಿದ್ದಾರೆ. ಸಂಚು ರೂಪಿಸಿದವರ ವಿರುದ್ಧ ಕ್ರಮವಾಗಬೇಕು’ ಎಂದು ಆಪಾದಿಸಿ, ಇಲ್ಲಿ ಸವದಿ ಬೆಂಬಲಿಗರು ಸೋಮವಾರ ಬೃಹತ್ ಪ್ರತಿಭಟನೆ ನಡೆಸಿದರು.

ಸವದಿ ನಿವಾಸದಿಂದ ಆರಂಭಗೊಂಡ ಪ್ರತಿಭಟನೆ ಅಂಬೇಡ್ಕರ್ ವೃತ್ತದ ಮಾರ್ಗವಾಗಿ ಸಾಗಿ, ಶಿವಯೋಗಿ ವೃತ್ತ ತಲುಪಿತು.

‘ಸವದಿ ವಿರುದ್ಧ ರಾಜಕೀಯವಾಗಿ ಪಿತೂರಿ ಮಾಡುತ್ತಿರುವವರ ವಿರುದ್ದ ಕ್ರಮವಾಗಲಿ’ ಎಂದು ಬೆಂಬಲಿಗರು ಘೋಷಣೆ ಕೂಗಿದರು. ನಂತರ ಡಿವೈಎಸ್ಪಿ ಪ್ರಶಾಂತ ಮುನ್ನೋಳ್ಳಿ ಅವರಿಗೆ ಮನವಿ ಸಲ್ಲಿಸಿದರು.

ಮುಖಂಡ ಶಿವಕುಮಾರ ಸವದಿ, ‘ಲಕ್ಷ್ಮಣ ಸವದಿ ಅವರ ರಾಜಕೀಯ ವರ್ಚಸ್ಸು ಕುಗ್ಗಿಸಲು ವಿರೋಧಿಗಳು ಮಾಡಿದ ವ್ಯವಸ್ಥಿತ ಸಂಚು ಇದಾಗಿದೆ. ಅಥಣಿ ತಾಲ್ಲೂಕಿನಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಸಹಿಸದೆ ವಿರೋಧಿಗಳು ಸುಳ್ಳು ಆರೋಪ ಹೊರಿಸುತ್ತಿರುವುದು ಸರಿಯಲ್ಲ’ ಎಂದು ದೂರಿದರು.

‘ಈ ಕ್ಷೇತ್ರದಲ್ಲಿ ಸವದಿ ವಿರುದ್ದ, ಈ ಹಿಂದೆ ಅನೇಕ ಬಾರಿ ಸುಳ್ಳು ಆರೋಪ ಮಾಡಿದವರಿಗೆ ಜನರು ತಕ್ಕ ಉತ್ತರ ನೀಡಿದ್ದಾರೆ. ಶಿವಯೋಗಿಗಳ ನಾಡಿನಲ್ಲಿ ದಬ್ಬಾಳಿಕೆ, ಷಡ್ಯಂತ್ರಕ್ಕೆ ಅವಕಾಶವಿಲ್ಲ’ ಎಂದರು.

ಮುಖಂಡ ಶಿವು ಗುಡ್ಡಾಪುರ, ‘ಲಕ್ಷ್ಮಣ ಸವದಿ ವಿರುದ್ದ ಕಾಣದ ಕೈಗಳು ಕೆಲಸ ಮಾಡುತ್ತಿವೆ. ಇಂಥ ಆರೋಪಗಳನ್ನು ಅಥಣಿ ಕ್ಷೇತ್ರದ ಜನರು ಸಹಿಸುವುದಿಲ್ಲ’ ಎಂದು ಹೇಳಿದರು.

ಕೃಷ್ಣಾ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಪರಪ್ಪ ಸವದಿ, ದತ್ತಾ ವಾಸ್ಟರ, ಪುರಸಭೆ ಸದಸ್ಯರಾದ ರಾಜು ಗುಡೋಡಗಿ, ಸಂತೋಷ ಸಾವಡಕರ, ಮುಖಂಡರಾದ ಎಂ.ಜಿ.ಹಂಜಿ, ವಿಜಯಕುಮಾರ ಬುರ್ಲಿ, ಸುರೇಶ ಮಾಯಣ್ಣವರ, ಮಲ್ಲೇಶ ಸವದಿ, ಶಿವಾನಂದ ಸವದಿ, ಶ್ರೀಶೈಲ ಶೆಲ್ಲಪ್ಪಗೋಳ, ಅಮೋಘ ಖೊಬ್ರಿ, ಎಸ್.ಆರ್.ಗೂಳಪ್ಪನವರ, ಮಲ್ಲೇಶ ಸವದಿ, ಡಿ.ಬಿ.ಠಕ್ಕಣ್ಣವರ, ಸುಶೀಲಕುಮಾರ ಪತ್ತಾರ, ಸಿದ್ರಾಯ ಯಲ್ಲಡಗಿ, ರಾಜು ನಾಡಗೌಡ, ಸಿ.ಎಸ್.ನ್ಯಾಮಗೌಡ, ಕಲ್ಲಪ್ಪ ವನಜೋಳ, ಪ್ರಸನ್ನ ಸಗರಿ, ಬಿಪಿನ್ ತೇಜವಾಣಿ, ವಿಶ್ವನಾಥ ತೆಲಸಂಗ ಇತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.