ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಣಕು ನ್ಯಾಯಾಲಯ ಸ್ಪರ್ಧೆ ನಾಳೆಯಿಂದ

Last Updated 11 ಮಾರ್ಚ್ 2020, 19:36 IST
ಅಕ್ಷರ ಗಾತ್ರ

ಬೆಳಗಾವಿ: ‘ಇಲ್ಲಿನ ಕೆಎಲ್‌ಎಸ್‌ ಸಂಸ್ಥೆಯ ರಾಜಾ ಲಖಮಗೌಡಾ ಕಾನೂನು ಕಾಲೇಜಿನಲ್ಲಿ ಮಾರ್ಚ್ 13ರಿಂದ 15ರವರೆಗೆ 10ನೇ ಎಂ.ಕೆ. ನಂಬಿಯಾರ್ ಸ್ಮಾರಕ ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ ಆಯೋಜಿಸಲಾಗಿದೆ’ ಎಂದು ಪ್ರಾಂಶುಪಾಲ ಡಾ.ಎ.ಎಚ್. ಹವಾಲ್ದಾರ ತಿಳಿಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಾಲೇಜಿನ ಹಳೆಯ ವಿದ್ಯಾರ್ಥಿ ಹಾಗೂ ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ ಅವರು ತಂದೆ ಎಂ.ಕೆ. ನಂಬಿಯಾರ್ ಹೆಸರಿನಲ್ಲಿ ಸ್ಥಾಪಿಸಿರುವ ನಿಧಿಯಿಂದ ಪ್ರತಿ ವರ್ಷವೂ ಸ್ಪರ್ಧೆ ನಡೆಸಲಾಗುತ್ತಿದೆ. ರಾಜ್ಯದ 17, ಮಹಾರಾಷ್ಟ್ರದ 4, ತಮಿಳುನಾಡು 3, ಉತ್ತರಪ್ರದೇಶ 2, ತೆಲಂಗಾಣ, ಪಶ್ಚಿಮ ಬಂಗಾಳ, ಒಡಿಸಾ, ಬಿಹಾರ, ಗೋವಾ, ಆಂಧ್ರ ಹಾಗೂ ಮಧ್ಯಪ್ರದೇಶದ ತಲಾ ಒಂದು ಸೇರಿ 33 ತಂಡಗಳು ಪ್ರಶಸ್ತಿಗಾಗಿ ಸೆಣಸಾಡಲಿವೆ’ ಎಂದು ಮಾಹಿತಿ ನೀಡಿದರು.

‘40 ಮಂದಿ ವಕೀಲರು ಹಾಗೂ ಶಿಕ್ಷಣ ತಜ್ಞರು ನ್ಯಾಯಾಧೀಶರಾಗಿ ಭಾಗವಹಿಸಲಿದ್ದಾರೆ. ವಿಜೇತರಿಗೆ ₹ 30ಸಾವಿರ, ಉಪ ವಿಜೇತರಿಗೆ ₹20ಸಾವಿರ, ಇಬ್ಬರು ಉತ್ತಮ ಸ್ಪೀಕರ್‌ಗಳಿಗೆ (ಮಹಿಳೆ ಹಾಗೂ ಪುರುಷ) ತಲಾ ₹ 10ಸಾವಿರ, ಉತ್ತಮ ಲೇಖನಕ್ಕೆ ₹ 10ಸಾವಿರ ನಗದು ಬಹುಮಾನಗಳನ್ನು ನೀಡಲಾಗುವುದು’ ಎಂದು ಹೇಳಿದರು.

‘ಉದ್ಘಾಟನಾ ಸಮಾರಂಭ ಮಾರ್ಚ್ 13ರಂದು ಸಂಜೆ 5.30ಕ್ಕೆ ನಡೆಯಲಿದ್ದು, ಹೈಕೋರ್ಟ್‌ ನ್ಯಾಯಮೂರ್ತಿ ಬಿ.ಎಂ. ಶ್ಯಾಮಪ್ರಸಾದ ಮುಖ್ಯಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಪ್ರಧಾನ ಜಿಲ್ಲಾ ಹಾಗೂ ಸೆಷನ್ಸ್‌ ನ್ಯಾಯಾಧೀಶ ಆರ್‌.ಜೆ. ಸತೀಶ್‌ಸಿಂಗ್‌, ಕೆಎಲ್‌ಎಸ್ ಕಾರ್ಯಾಧ್ಯಕ್ಷ ಬಿ.ಎಸ್. ಸಾವಕಾರ ಹಾಗೂ ಅಧ್ಯಕ್ಷ ಅನಂತ ಮಂಡಗಿ ಪಾಲ್ಗೊಳ್ಳಲಿದ್ದಾರೆ. ಸಮಾರೋಪ ಸಮಾರಂಭ ಮಾರ್ಚ್‌ 15ರಂದು ಸಂಜೆ 5ಕ್ಕೆ ನಡೆಯಲಿದ್ದು, ಹೈಕೋರ್ಟ್‌ ನ್ಯಾಯಮೂರ್ತಿ ಬಿ.ಎ. ಪಾಟೀಲ ಪಾಲ್ಗೊಳ್ಳಲಿದ್ದಾರೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT