ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕೋಡಿ | ಬೈಕ್ ರೇಸ್‌: ಪಾರಮ್ಯ ಮೆರೆದ ಮಹಾರಾಷ್ಟ್ರ

ಚಂದ್ರಶೇಖರ ಎಸ್‌. ಚಿನಕೇಕರ
Published 12 ಮಾರ್ಚ್ 2024, 5:18 IST
Last Updated 12 ಮಾರ್ಚ್ 2024, 5:18 IST
ಅಕ್ಷರ ಗಾತ್ರ

ಚಿಕ್ಕೋಡಿ (ಬೆಳಗಾವಿ ಜಿಲ್ಲೆ): ತಾಲ್ಲೂಕಿನ ಮುಗಳಿ ಗ್ರಾಮದಲ್ಲಿ ಬಸವೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಜಗಾನನ ರೇಸಿಂಗ್‌ ಸಂಘಟನೆ ಸೋಮವಾರ ಆಯೋಜಿಸಿದ್ದ ರಾಷ್ಟ್ರ ಮಟ್ಟದ ಡರ್ಟ್ ಟ್ರ್ಯಾಕ್ ಬೈಕ್ ರೇಸ್‌ನಲ್ಲಿ ಮಹಾರಾಷ್ಟ್ರ ಬೈಕರ್‌ಗಳು ಪಾರಮ್ಯ ಮೆರೆದರು.

ಫಲಿತಾಂಶ: ‘2 ಸ್ಟ್ರೋಕ್ ಕ್ಲಾಸ್ ವಿಭಾಗ: ಮಹಾರಾಷ್ಟ್ರದ ಇಚಲಕರಂಜಿಯ ಗಣೇಶ ಅಡಕೆ (ಪ್ರಥಮ), ಪುಣೆಯ ಪಿಂಕೇಶ ಟಕ್ಕರ್‌ (ದ್ವಿತೀಯ) ಹಾಗೂ ಸಾಂಗ್ಲಿಯ ವಾಸಿಂ ಮಗದುಮ್ (ತೃತೀಯ) ಸ್ಥಾನ ಪಡೆದುಕೊಂಡರು.

ಬುಲೆಟ್ ಕ್ಲಾಸ್ ವಿಭಾಗ: ಪುಣೆಯ ಪಿಂಕೇಶ ಟಕ್ಕರ್ (ಪ್ರಥಮ), ಇಚಲಕರಂಜಿಯ ಸಂಜಯ ಕೋಕಟೆ (ದ್ವಿತೀಯ), ಸಾಂಗ್ಲಿಯ ಅಸ್ಪಾಕ್ ಮುಲ್ಲಾನಿ (ತೃತೀಯ).

ವೆಟರ್ನ್ ಕ್ಲಾಸ್ ವಿಭಾಗ: ಇಚಲಕರಂಜಿಯ ವಿಜಯ ಪಾಟೀಲ (ಪ್ರಥಮ), ಪುಣೆಯ ಸುನೀಲ ಮೋಹಿತೆ (ದ್ವಿತೀಯ), ಪುಣೆಯ ಶ್ಯಾಮಲಾಲ್‌ ಪರದೇಶಿ (ತೃತೀಯ).

4 ಸ್ಟ್ರೋಕ್ ಕ್ಲಾಸ್ ವಿಭಾಗ: ಸಾಂಗ್ಲಿಯ ಅಸ್ಪಾಕ್ ಮುಲ್ಲಾ (ಪ್ರಥಮ), ಕೊಲ್ಹಾಪುರದ ಭೂಷಣ ಭೋಸಲೆ (ದ್ವಿತೀಯ), ಪುಣೆಯ ಪಿಂಕೇಶ ಟಕ್ಕರ (ತೃತೀಯ).

ಇಂಪಲ್ಸ್ ವಿಭಾಗ: ಸಾಂಗ್ಲಿಯ ಅತೀಬ್ ಮುಜಾವಾರ (ಪ್ರಥಮ), ಸಾಂಗ್ಲಿಯ ಅಸ್ಪಾಕ್ ಮುಲ್ಲಾನಿ (ದ್ವಿತೀಯ), ಕೊಲ್ಹಾಪುರದ ಪುಷ್ಕರ ಘೋರ್ಪಡೆ (ತೃತೀಯ).

ಓಪನ್ ಕ್ಲಾಸ್ ವಿಭಾಗ: ಕೊಲ್ಹಾಪುರದ ಪುಷ್ಕರ ಘೋರ್ಪಡೆ (ಪ್ರಥಮ), ಧಾರವಾಡದ ಎಂ.ಜಿ. ಅಜೀಜ್ (ದ್ವಿತೀಯ), ಸಾಂಗ್ಲಿಯ ಅಸ್ಪಾಕ್ ಮುಲ್ಲಾನಿ (ತೃತೀಯ), ಪುಣೆಯ ಪಿಂಕೇಶ ಟಕ್ಕರ್ (ನಾಲ್ಕನೇ ಸ್ಥಾನ).

ನಾಲ್ಕು ಎಕರೆ ಪ್ರದೇಶದಲ್ಲಿ ತಯಾರಿಸಿದ ಟ್ರ್ಯಾಕ್‌ನಲ್ಲಿ ಬೈಕ್ ರೈಡರ್‌ಗಳು ರೋಮಾಂಚನಗೊಳ್ಳುವಂತೆ ಸ್ಪರ್ಧೆ ಒಡ್ಡಿದರು. ಉರಿಬಿಸಿಲಿನನ್ನೂ ಅಪಾರ ಸಂಖ್ಯೆಯಲ್ಲಿ ಸೇರಿದ ಜನ ಸ್ಪರ್ಧೆಯನ್ನು ಕಣ್ತುಂಬಿಕೊಂಡರು. ಮಣ್ಣಿನ ದಿನ್ನೆಯ ಮೇಲೆ ಏರಿದ ಬೈಕ್‌ ಉಲ್ಕೆಯಂತೆ ನೆಲಕ್ಕೆ ಅಪ್ಪಳಿಸುವುದನ್ನು ಕಂಡು ಜನ ಸಿಳ್ಳೆ– ಚ‍ಪ್ಪಾಳೆ ಮೂಲಕ ಅಭಿನಂದಿಸಿದರು.

ನಿರಂತರ ಆರು ಗಂಟೆ ‘ರುಮ್‌ರುಮ್‌...’ ಸದ್ದು ಮಾಡಿದ ಬೈಕ್‌ಗಳು ಗ್ರಾಮಸ್ಥರನ್ನು ಬೆರಗು ಮೂಡಿಸಿದವು. ಬೆಳಗಾವಿ, ಧಾರವಾಡ, ಪುಣೆ, ಮುಂಬೈ, ಪಣಜಿ, ಹೈದರಾಬಾದ್ ಸೇರಿ ವಿವಿಧೆಡೆಯಿಂದ ಸ್ಪರ್ಧಾಳುಗಳು ಪಾಲ್ಗೊಂಡರು.

ಚಿಕ್ಕೋಡಿ ತಾಲ್ಲೂಕಿನ ಮುಗಳಿ ಗ್ರಾಮದಲ್ಲಿ ಸೋಮವಾರ  ಬಸವೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ನಡೆದ ರಾಷ್ಟ್ರ ಮಟ್ಟದ ಡರ್ಟ್ ಟ್ರ್ಯಾಕ್ ಬೈಕ್ ರೇಸ್‌ನಲ್ಲಿ ಸ್ಪರ್ಧಿಯೊಬ್ಬರು ಬೈಕ್‌ ಹಾರಿಸಿದ್ದು ಹೀಗೆ

– ಪ್ರಜಾವಾಣಿ ಚಿತ್ರ: ಚಂದ್ರಶೇಖರ ಎಸ್‌. ಚಿನಕೇಕರ

ಚಿಕ್ಕೋಡಿ ತಾಲ್ಲೂಕಿನ ಮುಗಳಿ ಗ್ರಾಮದಲ್ಲಿ ಸೋಮವಾರ  ಬಸವೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ನಡೆದ ರಾಷ್ಟ್ರ ಮಟ್ಟದ ಡರ್ಟ್ ಟ್ರ್ಯಾಕ್ ಬೈಕ್ ರೇಸ್‌ನಲ್ಲಿ ರೋಮಾಂಚಕ ಕ್ಷಣ

ಚಿಕ್ಕೋಡಿ ತಾಲ್ಲೂಕಿನ ಮುಗಳಿ ಗ್ರಾಮದಲ್ಲಿ ಸೋಮವಾರ  ಬಸವೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ನಡೆದ ರಾಷ್ಟ್ರ ಮಟ್ಟದ ಡರ್ಟ್ ಟ್ರ್ಯಾಕ್ ಬೈಕ್ ರೇಸ್‌ನಲ್ಲಿ ರೋಮಾಂಚಕ ಕ್ಷಣ

– ಪ್ರಜಾವಾಣಿ ಚಿತ್ರ: ಚಂದ್ರಶೇಖರ ಎಸ್‌. ಚಿನಕೇಕರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT