ಅಥಣಿ: ‘ಬಿಜೆಪಿ ತತ್ವ, ಸಿದ್ಧಾಂತದೊಂದಿಗೆ ಒಪ್ಪಂದ ಮಾಡಿಕೊಂಡು ಬಂದಿದ್ದೇನೆ ಹೊರತು; ಯಾರು ಶಾಸಕರಾಗಬೇಕು, ಯಾರು ವಿಧಾನ ಪರಿಷತ್ ಸದಸ್ಯರಾಗಬೇಕು ಎನ್ನುವ ಕುರಿತು ಯಾರೊಂದಿಗೂ ಒಪ್ಪಂದ ಮಾಡಿಕೊಂಡಿಲ್ಲ’ ಎಂದು ಕೊಳೆಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ, ಶಾಸಕ ಮಹೇಶ ಕುಮಠಳ್ಳಿ ಹೇಳಿದರು.

ಇಲ್ಲಿನ ಶಿವಯೋಗಿ ನಗರದಲ್ಲಿ ₹3.30 ಕೋಟಿ, ಸಂಕೋನಹಟ್ಟಿಯಲ್ಲಿ ₹1.65 ಕೊಟಿ ವೆಚ್ಚದ ಜಲಜೀವನ ಮಿಷನ್ ಕಾಮಗಾರಿ, ₹75 ಲಕ್ಷ ವೆಚ್ಚದ ಮಲ ಹೂಳುವ ಸಂಸ್ಕರಣಾ ಘಟಕ, ₹1.05 ಕೋಟಿ ವೆಚ್ಚದ ವಡ್ರಟ್ಟಿ– ಶಿನ್ನಾಳ ರಸ್ತೆ ಕಾಮಗಾರಿ, ತಂಗಡಿ ಗ್ರಾಮದ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ₹24 ಲಕ್ಷ ವೆಚ್ಚದ ಕೊಠಡಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

‘ಅಥಣಿ ಮತಕ್ಷೇತ್ರದಿಂದ ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ನಾನು ಮತ್ತು ಲಕ್ಷ್ಮಣ ಸವದಿ ಆಕಾಂಕ್ಷಿಗಳಾಗಿದ್ದೇವೆ. ನಮ್ಮಿಬ್ಬರಲ್ಲಿ ಯಾರು ಸ್ಪರ್ಧೆ ಮಾಡಬೇಕು ಎನ್ನುವುದನ್ನು ಬಿಜೆಪಿ ಹೈ ಕಮಾಂಡ ನಿರ್ಧರಿಸುತ್ತದೆ. ನಾವಿಬ್ಬರೂ ಪಕ್ಷದ ಗೆಲುವಿಗಾಗಿ ಪ್ರಯತ್ನ ಮಾಡುತ್ತೇವೆ. ಇದರ ಹೊರತಾಗಿ ನಮ್ಮಿಬ್ಬರಲ್ಲಿ ಯಾವುದೇ ಒಪ್ಪಂದ ಆಗಿಲ್ಲ’ ಎಂದರು.

ಶಿವಾನಂದ ದಿವಾನಮಳ, ಸದಾಶಿವ ಕೊಂಪಿ, ಮಲಗೌಡ ಪಾಟೀಲ, ಅಲಗೌಡ ಪಾಟೀಲ, ನಿಂಗಪ್ಪ ಪೂಜಾರಿ, ಮಹಾವೀರ ಪಡನಾಢ, ಅಶೋಕ ಕೌಜಲಗಿ, ಸಾವಿತ್ರಿ ಗುಮಚಿ, ದೇವಪ್ಪ ಪಡನಾಡ ಹಲವರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.