ಮಂಗಳವಾರ, ಆಗಸ್ಟ್ 20, 2019
25 °C

ಬಿಜೆಪಿ ನಾಯಕರೊಂದಿಗೆ ಕಾಣಿಸಿಕೊಂಡ ಕುಮಠಳ್ಳಿ!

Published:
Updated:
Prajavani

ಅಥಣಿ: ಅನರ್ಹ ಶಾಸಕ ಮಹೇಶ ಕುಮಠಳ್ಳಿ ಬಿಜೆಪಿ ನಾಯಕರೊಂದಿಗೆ ಬುಧವಾರ ಕಾಣಿಸಿಕೊಂಡಿರುವುದು ಹಲವು ಚರ್ಚೆಗಳಿಗೆ ಗ್ರಾಸವಾಗಿದೆ.

ಕೃಷ್ಣಾ ನದಿ ಪ್ರವಾಹದಿಂದಾಗಿ ನಿರಾಶ್ರಿತರಾಗಿರುವವರಿಗೆ ರಡ್ಡೇರಹಟ್ಟಿಯಲ್ಲಿ ತೆರೆದಿರುವ ಗಂಜಿ ಕೇಂದ್ರದಲ್ಲಿ ಕುಂದುಕೊರತೆ ಆಲಿಸಲು ಕಾಂಗ್ರೆಸ್‌ ಮುಖಂಡರು ಹೋಗಿದ್ದರು. ಅದೇ ಸಮಯಕ್ಕೆ ಬಿಜೆಪಿ ಮುಖಂಡ ಲಕ್ಷ್ಮಣ ಸವದಿ ತಮ್ಮ ಪುತ್ರ ಚಿದಾನಂದ ಸವದಿ ಜೊತೆ ಬಂದಿದ್ದರು. ಬಳಿಕ ಕುಮಠಳ್ಳಿ ಕೂಡ ಬಂದರು. ಆಗ, ಕಾಂಗ್ರೆಸ್‌ ಮುಖಂಡರು ಅಲ್ಲಿಂದ ತೆರಳಿದರು.

ಇತ್ತ, ಬಿಜೆಪಿ ಮುಖಂಡರು ಸಂತ್ರಸ್ತರಿಗೆ ಹಣ್ಣು, ಬಿಸ್ಕೆಟ್‌ ಪಾಕೆಟ್, ಔಷಧ ಹಂಚಿದರು. ಆಗ, ಕುಮಠಳ್ಳಿ ಜೊತೆಯಲ್ಲಿದ್ದರು.

Post Comments (+)