ಸೋಮವಾರ, 11 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮ್ಯಾರಥಾನ್‌: ವೆಂಕಟೇಶ, ನಕೋಶಾ ಪ್ರಥಮ

Published 24 ಅಕ್ಟೋಬರ್ 2023, 12:19 IST
Last Updated 24 ಅಕ್ಟೋಬರ್ 2023, 12:19 IST
ಅಕ್ಷರ ಗಾತ್ರ

ಚನ್ನಮ್ಮನ ಕಿತ್ತೂರು: ಇಲ್ಲಿ ಕಿತ್ತೂರು ಉತ್ಸವ ಅಂಗವಾಗಿ ಮಂಗಳವಾರ ನಡೆದ 10 ಕಿ.ಮೀ ಮ್ಯಾರಥಾನ್‌ ಸ್ಪರ್ಧೆಯ ಪುರುಷರ ವಿಭಾಗದಲ್ಲಿ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ಸಮೀರವಾಡಿಯ ವೆಂಕಟೇಶ ರಾಠೋಡ(32 ನಿ., 37 ಸೆ.) ಪ್ರಥಮ ಸ್ಥಾನ ಗಳಿಸಿದರು. ಧಾರವಾಡದ ಸಚಿನ ದೇವಪ್ಪನವರ(33 ನಿ., 9 ಸೆ.) ದ್ವಿತೀಯ ಮತ್ತು ಬೆಳಗಾವಿಯ ಬಬನ್ ಶಿಂಧೆ (34 ನಿ.) ತೃತೀಯ ಸ್ಥಾನ ಗಳಿಸಿದರು.

ಮಹಿಳೆಯರ ವಿಭಾಗದ 10 ಕಿ.ಮೀ ಮ್ಯಾರಥಾನ್‍ನಲ್ಲಿ ಬೆಳಗಾವಿಯ ನಕೋಶಾ ಮಂಗನಾಕರ (42 ನಿ.,15 ಸೆ.) ಪ್ರಥಮ, ಬೈಲಹೊಂಗಲ ತಾಲ್ಲೂಕಿನ ಮೇಕಲಮರ್ಡಿಯ ಶಿಲ್ಪಾ ಹೊಸಮನಿ (44 ನಿ., 53 ಸೆ.) ದ್ವಿತೀಯ ಮತ್ತು ಬೆಳಗಾವಿಯ ಶುಭಾಂಗಿ ಕಾಕತಿಕರ (45 ನಿ., 15 ಸೆ.) ತೃತೀಯ ಸ್ಥಾನ ಗಳಿಸಿದರು.

ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿರುವ ರಾಣಿ ಚನ್ನಮ್ಮ ವೃತ್ತದಿಂದ ಆರಂಭಗೊಂಡ ಮ್ಯಾರಥಾನ್ ಅರಳಿಕಟ್ಟೆ, ನಿಚ್ಚಣಕಿ, ಅವರಾದಿ, ಮಲ್ಲಾಪುರ ಮಾರ್ಗವಾಗಿ ಸಾಗಿ ಕೋಟೆ ಆವರಣದಲ್ಲಿ ಮುಕ್ತಾಯವಾಯಿತು.

ಮೂಡಲಗಿ ಸಿಪಿಐ  ಶ್ರೀಶೈಲ ಬ್ಯಾಕೋಡ ಸ್ಪರ್ಧೆಗೆ ಚಾಲನೆ ನೀಡಿದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಹಿರಿಯ ತರಬೇತುದಾರ ಸಂಜೀವಕುಮಾರ ನಾಯಕ, ಜಿ.ಎನ್. ಪಾಟೀಲ, ಬಸವರಾಜ ಜಕ್ಕನ್ನವರ, ಬಿ.ಎಸ್. ಪಾಟೀಲ, ಸಿ. ರಾಮರಾವ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT