ಶುಕ್ರವಾರ, 12 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಲಾ ಅಂಗಡಿ ಏಕೆ ಬೀಗರ ಪರ ನಿಂತಿದ್ದಾರೆ: ಲಕ್ಷ್ಮಿ ಹೆಬ್ಬಾಳಕರ

Published 31 ಮಾರ್ಚ್ 2024, 14:05 IST
Last Updated 31 ಮಾರ್ಚ್ 2024, 14:05 IST
ಅಕ್ಷರ ಗಾತ್ರ

ಬೆಳಗಾವಿ: ‘ಕುಟುಂಬಕ್ಕಿಂತ ಪಕ್ಷ ಮೊದಲು ಎನ್ನುವ ಸಂಸದೆ ಮಂಗಲಾ ಅಂಗಡಿ, ಏಕೆ ಬೀಗರ ಪರ ನಿಂತಿದ್ದಾರೆ‌’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಪ್ರಶ್ನಿಸಿದರು.

ಇಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬಿಜೆಪಿಯಲ್ಲಿ ಇಷ್ಟೊಂದು ಆಕಾಂಕ್ಷಿಗಳಿದ್ದರು. ಮಂಗಲಾ ಅವರು ಬೇರೆಯವರನ್ನು ಬೆಂಬಲಿಸಬಹುದಿತ್ತು. ಆದರೆ, ಜನರ ದಿಕ್ಕು ತಪ್ಪಿಸಲು ಪಕ್ಷ ಮೊದಲು ಎನ್ನುತ್ತಿದ್ದಾರೆ. ಇದೆಲ್ಲ ನಾಟಕ’ ಎಂದು ವ್ಯಂಗ್ಯವಾಡಿದರು.

ಲೋಕಸಭಾ ‌ಚುನಾವಣೆಯಲ್ಲಿ ಎಂಇಎಸ್ ಸ್ಪರ್ಧಿಸುತ್ತಿರುವ ಕುರಿತು ಪ್ರತಿಕ್ರಿಯಿಸಿದ ಹೆಬ್ಬಾಳಕರ, ‘ಎಂಇಎಸ್ ‌ಪಕ್ಷವಲ್ಲ. ಅದೊಂದು ಹೋರಾಟ ಸಮಿತಿ. ಅವರ ಸ್ಪರ್ಧೆ ಬಗ್ಗೆ ಚಿಂತನೆ ಮಾಡುವ ಪರಿಸ್ಥಿತಿ ನಮಗಿಲ್ಲ. ಪ್ರಿಯಾಂಕಾ ಜಾರಕಿಹೊಳಿ ಮತ್ತು ಮೃಣಾಲ್ ಜಾರಕಿಹೊಳಿ ಗೆಲ್ಲಿಸುವುದಷ್ಟೇ ನಮ್ಮ ಗುರಿ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT