ಬುಧವಾರ, ನವೆಂಬರ್ 25, 2020
22 °C

ಮೊಬೈಲ್ ದಾಸರಾಗಬೇಡಿ, ಕ್ರೀಡೆಯಲ್ಲಿ ತೊಡಗಿ: ಚನ್ನರಾಜ ಹಟ್ಟಿಹೊಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ಯುವಕರು ಮೊಬೈಲ್, ಕಂಪ್ಯೂಟರ್, ಸಾಮಾಜಿಕ ಜಾಲತಾಣಗಳಿಗೆ ಅಂಟಿಕೊಳ್ಳದೆ, ಕ್ರೀಡೆಯಲ್ಲೂ ತೊಡಗುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬೇಕು’ ಎಂದು ಕಾಂಗ್ರೆಸ್ ಮುಖಂಡ, ಹರ್ಷ ಶುಗರ್ಸ್ ವ್ಯವಸ್ಥಾಪಕ ನಿರ್ದೇಶಕ ಚನ್ನರಾಜ ಹಟ್ಟಿಹೊಳಿ ಸಲಹೆ ನೀಡಿದರು.

ತಾಲ್ಲೂಕಿನ ಮೊದಗಾ ಗ್ರಾಮದಲ್ಲಿ ಶನಿವಾರ ಆಯೋಜಿಸಿದ್ದ ‘ಮೋದಗಾ ಪ್ರೀಮಿಯರ್ ಲೀಗ್’ ಕ್ರಿಕೆಟ್ ಟೂರ್ನಿ ಉದ್ಘಾಟಿಸಿ ಅವರು ಮಾತನಾಡಿದರು.

‘ದೇಹ ದಂಡಿಸುವ ಅಥವಾ ವ್ಯಾಯಾಮ ನೀಡುವಂತಹ ಯಾವುದೇ ಕ್ರೀಡೆಗಳನ್ನು ಮಕ್ಕಳು, ಯುವಕರು ಇಂದಿನ ದಿನಗಳಲ್ಲಿ ಹೆಚ್ಚಾಗಿ ಆಡುತ್ತಿಲ್ಲ. ಸದೃಢವಾದ ದೇಹಕ್ಕಾಗಿ ಕ್ರಿಕೆಟ್, ಕಬಡ್ಡಿ, ವಾಲಿಬಾಲ್, ಫುಟ್ಬಾಲ್‌ ಮುಂತಾದ ಆಟಗಳನ್ನು ಆಡಬೇಕು. ಯುವಕರು ಸಾಮಾಜಿಕ ಹಾಗೂ ರಾಜಕೀಯವಾಗಿ ಜಾಗ್ರತರಾಗಬೇಕು. ನಮ್ಮ ಗ್ರಾಮ, ಸಮಾಜಕ್ಕೆ ಏನು ಬೇಕು ಎನ್ನುವುದನ್ನು ಗಟ್ಟಿಯಾಗಿ ಮಂಡಿಸುವ ಮನೋಭಾವ ಬೆಳೆಸಿಕೊಳ್ಳಬೇಕು’ ಎಂದರು.

ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಗಂಗಣ್ಣ ಕಲ್ಲೂರ, ಮುಖಂಡರಾದ ಕೇಸರಖಾನ್ ಮುಲ್ಲಾ, ಯಲ್ಲಪ್ಪ ಮುಗಳಿ, ಬಾಬು ಕಾಳೆ, ಪ್ರಕಾಶ  ದಾನೋಜಿ, ಕಲ್ಲಪ್ಪ ಕಮ್ಮಾರ, ಬಸವರಾಜ ಕಲ್ಲೂರ, ಟೂರ್ನಿ ಆಯೋಜಕರು ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು