ಬೈಲಹೊಂಗಲ: ತಾಲ್ಲೂಕಿನ ಭಾಂವಿಹಾಳ, ಮುರಕಿಭಾಂವಿ, ಮಧನಭಾಂವಿ, ಬೈಲವಾಡ, ಅನಿಗೊಳ, ದೊಡವಾಡ ಹಾಗೂ ಇನ್ನೂಳಿದ ಗ್ರಾಮಗಳಲ್ಲಿ ಬೆಳೆದ ಮುಂಗಾರು ಬೆಳೆಗಳ ಕ್ಷೇತ್ರಗಳಿಗೆ ಕೆಎಲ್ಇ ಸಂಸ್ಥೆಯ ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರ ಮತ್ತಿಕೊಪ್ಪ ವಿಜ್ಞಾನಿಗಳಾದ ಎಸ್.ಕೆ.ಹಿರೇಮಠ, ಉಪ ಕೃಷಿ ನಿರ್ದೇಶಕ ಸಲೀಮ ಸಂಗತ್ರಾಸ, ಸಹಾಯಕ ಕೃಷಿ ನಿರ್ದೇಶಕ ಬಸವರಾಜ ದಳವಾಯಿ, ಸಿ.ಆಯ್.ಹೂಗಾರ ಭೇಟಿ ನೀಡಿ ಪೀಡೆ ಸರ್ವೇಕ್ಷಣಾ ಸಮೀಕ್ಷೆ ಮಾಡಿದರು.

ವಿವಿಧ ಬೆಳೆಗಳಲ್ಲಿ ಕಂಡು ಬಂದ ರೋಗಭಾದೆಗಳ ಸಮಗ್ರ ನಿರ್ವಹಣೆ ಕುರಿತು ರೈತರಿಗೆ ಅಗತ್ಯ ಸಲಹೆ ನೀಡಿದರು.

ಸೋಯಾ ಅವರೆಯಲ್ಲಿ ಕಾಯಕೊರಕ, ಕಾಂಡಕೊರಕ, ಇತರೆ ಕೀಡೆಗಳ ಭಾದೆಯು ಹೆಚ್ಚಿನ ಪ್ರಮಾಣದಲ್ಲಿ ಕಂಡು ಬಂದಿದ್ದು, ನಿಯಂತ್ರಣಕ್ಕಾಗಿ ಬ್ರೋಪ್ಲ್ಯಾನಿಲೈಡ 20 ಎಸ್.ಸಿ. 50 ಎಂ.ಎಲ್. ಪ್ರತಿ ಎಕರೆಗೆ ಹಾಗೂ ಇದರ ಜೊತೆಗೆ 13.45, 0.52.34 ಗೊಬ್ಬರವನ್ನು 100 ಗ್ರಾಂ ಪ್ರತಿ 15 ಲೀಟರ್ ನೀರಿಗೆ ಬೆರಸಿ ಸಿಂಪರಣೆ ಮಾಡಬೇಕು ಎಂದರು.

ಬ್ರೋಪ್ಲ್ಯಾನಿಲೈಡ್ 300 ಎಸ್.ಎಲ್.ನ್ನು 17 ಎಂ.ಎಲ್. ಪ್ರತಿ ಎಕರೆಗೆ ಸುಮಾರು 180 ರಿಂದ 200 ಲೀಟರ್ ನೀರಿಗೆ ಬೆರಸಿ ಸಿಂಪರಣೆ ಮಾಡಬೇಕು. ಹೆಸರು ಬೆಳೆಯಲ್ಲಿ ಹಳದಿ ನಂಜಾನು ರೋಗ ಕಂಡು ಬಂದಿದ್ದು, ನಿಯಂತ್ರಣಕ್ಕಾಗಿ ಬೆಳೆಗೆ ಪ್ರತಿ ಲೀಟರ್ ನೀರಿಗೆ 1 ಮಿ.ಲೀ. ಆಕ್ಸಿಡೆಮಿಟಾನ್ ಮಿಥೈಲ್ 25 ಇ.ಸಿ., ಥಯಾಮೆಥಾಕ್ಸಾಮ್ 0.25 ಗ್ರಾಂ, ಮೆಗ್ನೇಷಿಯಂ ಸಲ್ಫೇಟ್ 5 ಗ್ರಾಂ. ಪ್ರತಿ ಲೀಟರ್ ನೀರಿಗೆ ಬೆರೆಸಿ ಹತ್ತು ದಿನಗಳ ಅಂತರದಲ್ಲಿ ಎರಡು ಬಾರಿ ಸಿಂಪರಣೆ ಮಾಡಬೇಕು ಎಂದು ತಿಳಿಸಿದರು.

ಬೆಳ್ಳುಳ್ಳಿ ಬೆಳೆಯಲ್ಲಿ ಪರ್ಪ ಬ್ಲಾಚ್ ರೋಗ ಕಂಡು ಬಂದಿದ್ದು ನಿಯಂತ್ರಣಕ್ಕಾಗಿ ಡೈಪೆನಿಕೋನಜೈಲ್ 1ಎಮ್ ಎಲ್/ಲೀ + ಪಿಪ್ರೋನಿಲ್ 0.5, ಎಮ್.ಎಲ್/ಲೀ + ಅಂಟು ದ್ರಾವಣ + ಲಘುಪೋಷಕಾಂಶ ಮಿಶ್ರಣ 5 ಎಂ.ಎಲ್/ಲೀ ನೀರಿಗೆ ಬೆರೆಸಿ ಸಿಂಪರಣೆ ಮಾಡುವಂತೆ ತಿಳಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.