ಮೂಡಲಗಿ: ತಾಲ್ಲೂಕಿನ ಅವರಾದಿ ಗ್ರಾಮದಲ್ಲಿ ಸೋಮವಾರ ಮದುವೆ ಮಂಟಪದಲ್ಲಿ ಮದುವೆ ಜೋಡಿಯ ಅಕ್ಷರಾರೋಪಣದ ನಂತರ ‘ಆರ್ಸಿಬಿ ಗೆದ್ದು ಬಾ’ ‘ಕಪ್ ಆರ್ಸಿಬಿಯದ್ದೇ’ ‘ಈ ಬಾರಿ ಕಪ್ ಕರ್ನಾಟಕದ್ದೇ’ ಎಂದು ಅಭಿಮಾನಿಗಳು ಘೋಷಣೆಗಳನ್ನು ಹಾಕಿ ಗಮನ ಸೆಳೆದರು.

ಅವರಾದಿ ಗ್ರಾಮದಲ್ಲಿ ಕಾಲತಿಪ್ಪಿ ಪರಿವಾರ ಬಸವರಾಜ ಮತ್ತು ನೇತ್ರಾ ಇವರ ಮದುವೆಯಲ್ಲಿ ಆರ್ಸಿಬಿ ಅಭಿಮಾನಿಗಳು ಗೆಲುವಿಗೆ ಶುಭ ಹಾರೈಸಿದರು. ಮದುಮಕ್ಕಳು ಕೈಯಲ್ಲಿ ಕನ್ನಡ ಧ್ವಜ ಹಿಡಿದು ಅಭಿಮಾನಿಗಳೊಂದಿಗೆ ಘೋಷಣೆ ಹಾಕಿದರು.

ಕಳೆದ 18 ವರ್ಷಗಳಿಂದ ಗೆಲುವನ್ನೇ ಕಾಣದ ಆರ್ಸಿಬಿ ಮತ್ತೊಮ್ಮೆ ಅಂತಿ ಹಣಾಹಣಿಗೆ ಮಂಗಳವಾರ ಅಹಮಾದಬಾದಲ್ಲಿ ಸಜ್ಜಾಗಿದೆ. ಎಲ್ಲೆಡೆ ಗೆಲುವಿನ ಪ್ರಾರ್ಥನೆಗಳು ಜರುಗುತ್ತಿದ್ದು, ಅವರಾದಿಯಲ್ಲಿ ಆರ್ಸಿಬಿ ಗೆಲುವಿಗೆ ಮದುವೆ ಮಂಟಪವನ್ನು ಬಳಸಿಕೊಂಡಿದ್ದು ವಿಶೇಷವಾಗಿದೆ.

ಆರ್ಸಿಬಿ ಅಭಿಮಾನಿ ಬಳಗವಾಗಿರುವ ಪ್ರಕಾಶ ಕಾಳಶೆಟ್ಟಿ, ಮಾನಿಂಗ ಬಡಿಗೇರ, ಬಸವರಾಜ ವಿರೇಶನವರ, ಶಿವು ಮೇಟಿ, ವಿಠಲ ದಂಡಪ್ಪನ್ನವರ, ಮಲ್ಲಯ್ಯ ಮಠಪತಿ, ಸುನಿಲ ಪಾಟೀಲ, ಆನಂದ ಮಹಾಲಿಂಗಪುರ ಮತ್ತಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.