ಸವದತ್ತಿ: ‘ಸೆಪ್ಟೆಂಬರ್ 13ರಂದು ರಾಷ್ಟ್ರೀಯ ಲೋಕ ಅದಾಲತ್ ನಡೆಯಲಿದೆ’ ಎಂದು ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಸಿದ್ಧರಾಮ ಹೇಳಿದರು.

ಇಲ್ಲಿನ ನ್ಯಾಯಾಲಯ ಸಂಕೀರ್ಣದಲ್ಲಿ ಬುಧವಾರ ಪ್ರತಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಲೋಕ ಅದಾಲತ್, ಮಧ್ಯಸ್ಥಿಕೆ ಹಾಗೂ ಕಾಯಂ ಜನತಾ ನ್ಯಾಯಾಲಯ ವ್ಯವಸ್ಥೆ ಮೂಲಕ ವ್ಯಾಜ್ಯ ಪೂರ್ವ ಹಾಗೂ ಬಾಕಿ ಇರುವ ಪ್ರಕರಣಗಳನ್ನು ಸಂಧಾನದ ಮೂಲಕ ತ್ವರಿತವಾಗಿ ಇತ್ಯರ್ಥ ಮಾಡಿಕೊಳ್ಳಬಹುದು’ ಎಂದರು.

‘ವ್ಯಾಜ್ಯ ಪೂರ್ವ ಹಾಗೂ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳಾದ ಚೆಕ್ ಅಮಾನ್ಯ, ಬ್ಯಾಂಕ್ ವಸೂಲಾತಿ, ಉದ್ಯೋಗ, ವಿದ್ಯುತ್, ನೀರಿನ ಶುಲ್ಕ, ರಾಜಿ ಆಗಬಲ್ಲ ಅಪರಾಧ, ವೈವಾಹಿಕ, ಸಿವಿಲ್, ರಿಯಲ್ ಎಸ್ಟೇಟ್ ಹಾಗೂ ಜಿಲ್ಲಾ ಗ್ರಾಹಕರ ಪ್ರಕರಣಗಳನ್ನು ಅದಾಲತ್ನಲ್ಲಿ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳಬಹುದು’ ಎಂದು ತಿಳಿಸಿದರು.

‘ಅದಾಲತ್ನಂದ ನ್ಯಾಯಾಲಯದ ಮೇಲಿನ ಹೊರೆ ಕಡಿಮೆಯಾಗುತ್ತದೆ. ನ್ಯಾಯಾಲಯದ ಕುರಿತು ಜನರ ಮನೋಭಾವನೆ ಬದಲಾಗಲೂ ಅವಕಾಶವಿದೆ. ಇದರಿಂದ ಜನರಿಗೆ ಆಗುವ ಲಾಭಗಳ ಕುರಿತು ಜಾಗೃತಿ ಮೂಡಿಸಲಾಗುತ್ತದೆ’ ಎಂದರು.

ಪ್ರಧಾನ ಸಿವಿಲ್ ಹಾಗೂ ಜೆಎಂಎಫ್ ನ್ಯಾಯಾಧೀಶ ಸಿದ್ರಾಮ ರೆಡ್ಡಿ ಮಾತನಾಡಿ, ‘ಯಾರಿಗೂ ಅನ್ಯಾಯ, ಬಾಂಧವ್ಯ ಹಾಳಾಗದ ರೀತಿಯಲ್ಲಿ ಪ್ರಕರಣ ತೀರ್ಮಾನಗೊಳಿಸಲು ಅದಾಲತ್ ಶ್ರಮಿಸಲಿದೆ. ನ್ಯಾಯಾಲಯದಲ್ಲಿ ದಾಖಲಾಗದ ಪ್ರಕರಣಗಳನ್ನೂ ಸಂಧಾನದ ಮೂಲಕ ಬಗೆಹರಿಸಲು ಅವಕಾಶ ನೀಡಲಾಗಿದೆ. ಸಂಧಾನವಾದಲ್ಲಿ ಪಾವತಿಸಿದ ಶುಲ್ಕ ಮರುಪಾವತಿಸಲಾಗುವುದು’ ಎಂದು ಹೇಳಿದರು.

ವಕೀಲರ ಸಂಘದ ಉಪಾಧ್ಯಕ್ಷ ಎಂ.ಎಸ್. ಹುಬ್ಬಳ್ಳಿ, ಕಾರ್ಯದರ್ಶಿ ಎಸ್.ಎಸ್. ಕಾಳಪ್ಪನವರ, ಸಹ ಕಾರ್ಯದರ್ಶಿ ಆರ್.ಬಿ. ಹುಂಬಿ, ಎಸ್.ಎಚ್. ಜಾಲಿಕೊಪ್ಪ, ಎಲ್.ಟಿ. ಹೊಸಮನಿ, ಬಿ.ಕೆ. ಕಡಕೊಳ ಇದ್ದರು.

‘ಖರ್ಚು ಕಡಿಮೆ; ಸರಳ ವಿಚಾರಣೆ’

‘ಜಿಲ್ಲಾ ಕಾಯಂ ಜನತಾ ನ್ಯಾಯಾಲಯದಿಂದ ಪ್ರಕರಣವೊಂದರ ಎರಡು ಪಕ್ಷಗಳ ಸಂಧಾನಕ್ಕೆ ಜಿಲ್ಲಾ ಕಾನೂನು ಸೇವಾ ಸಮಿತಿ ಅಧ್ಯಕ್ಷ ಹಾಗೂ ಇಬ್ಬರು ಸದಸ್ಯರು ಮಾರ್ಗದರ್ಶನ ನೀಡುತ್ತಾರೆ. ರಾಜಿ ಯಶಸ್ವಿಯಾದಲ್ಲಿ ಷರತ್ತುಗಳ ಅನ್ವಯ ತೀರ್ಪು ನೀಡಲಾಗುತ್ತದೆ. ವಿಫಲವಾದರೆ ಎರಡೂ ಪಕ್ಷಗಳ ಹೇಳಿಕೆ ಸಾಕ್ಷ್ಯ ದಾಖಲಾತಿ ಆಧಾರದಲ್ಲಿ ಸರ್ವಾನುಮತದ ತೀರ್ಪು ನೀಡಲಾಗುತ್ತದೆ’ ಎಂದು ನ್ಯಾಯಾಧೀಶ ಸಿದ್ಧರಾಮ ಹೇಳಿದರು. ‘ಇಲ್ಲಿ ನ್ಯಾಯಾಲಯದ ಶುಲ್ಕ ಪಾವತಿಸಬೇಕಿಲ್ಲ. ಇದು ಅತ್ಯಂತ ಕಡಿಮೆ ಖರ್ಚು ಹಾಗೂ ಸರಳ ವಿಚಾರಣಾ ಪ್ರಕ್ರಿಯೆ ಇರುವ ಕಾರಣ ಪ್ರಕರಣಗಳ ಇತ್ಯರ್ಥ ತ್ವರಿತವಾಗಿ ಆಗಲಿದೆ. ನ್ಯಾಯಾಲಯದಲ್ಲಿ ಬಾಕಿ ಉಳಿದ ಎಲ್ಲ ರೀತಿಯ ಪ್ರಕರಣಗಳ ಇತ್ಯರ್ಥಕ್ಕೆ 90 ದಿನಗಳ ಮಧ್ಯಸ್ಥಿಕೆ ಅಭಿಯಾನ ಆರಂಭಿಸಲಾಗಿದೆ. ಹಿರಿಯ ವಕೀಲರ ತಂಡದ ಮೂಲಕ ರಾಜಿ ಮಾಡಿಕೊಳ್ಳಬಹುದಾಗಿದೆ’ ಎಂದದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.