ಬೆಳಗಾವಿ: ವೈದ್ಯಕೀಯ ಕೋರ್ಸ್ ಪ್ರವೇಶಕ್ಕೆ ನಡೆದ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್)ಯಲ್ಲಿ ಇಲ್ಲಿನ ಜಕ್ಕೇರಿ ಹೊಂಡದ ಕೆಎಲ್ಇ ಸ್ವತಂತ್ರ ಪಿಯು ಕಾಲೇಜಿನ ವಿದ್ಯಾರ್ಥಿಗಳು ಅತ್ಯುನ್ನತ ಸಾಧನೆ ತೋರಿದ್ದಾರೆ.

ವಿದ್ಯಾರ್ಥಿನಿ ಜೋಯಾ ತೇಬ್ಲಾ 720 ಅಂಕಗಳಿಗೆ 680 ಅಂಕಗಳನ್ನು ಪಡೆದು ರಾಷ್ಟ್ರಮಟ್ಟದಲ್ಲಿ 666ನೇ ಸ್ಥಾನ ಪಡೆದಿದ್ದಾರೆ. ಇದೇ ಕಾಲೇಜಿನ ಏಳು ಮಂದಿ 500ಕ್ಕೂ ಹೆಚ್ಚಿನ ಅಂಕಗಳನ್ನು ಗಳಿಸಿದ್ದಾರೆ. ವಜ್ರಗೌಡ ಪಾಟೀಲ 588, ಆದಿತ್ಯ ಪೋರವಾಲ 581, ಭರತ ಹನುಮನಗೌಡ ಎಚ್. 563, ಮೊಹಮದ್ ಆಕಿಫ್ ಮುಲ್ಲಾ 560, ಸಮರ್ಥ ಶೆಟ್ಟಿ 531, ಶಬ್ಬೀರ ಅಹಮದ ಇನಾಮದಾರ 516 ಅಂಕಗಳನ್ನು ಪಡೆದಿದ್ದಾರೆ.

ಅವರನ್ನು ಕೆಎಲ್ಇ ಸಂಸ್ಥೆ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ, ಆಡಳಿತ ಮಂಡಳಿವರು, ಪ್ರಾಚಾರ್ಯರು ಹಾಗೂ ಉಪನ್ಯಾಸಕರು ಅಭಿನಂದಿಸಿದ್ದಾರೆ ಎಂದು ಪ್ರಾಚಾರ್ಯ ಡಾ.ಎಂ.ಎಸ್. ಪಾಟೀಲ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.