ಬೆಳಗಾವಿ: ‘ಬೆಳಗಾವಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ವಿದ್ಯಾರ್ಥಿ ಡಾ.ಶರಣಪ್ಪ ಶೀನಪ್ಪನವರ ಅವರು ಸ್ನಾತಕೋತ್ತರ ನೀಟ್‌ನಲ್ಲಿ 9ನೇ ರ್‍ಯಾಂಕ್ ಗಳಿಸಿದ್ದಾರೆ’ ಎಂದು ಬಿಮ್ಸ್ ನಿರ್ದೇಶಕ ಡಾ.ಅಶೋಕ ಕುಮಾರ ಶೆಟ್ಟಿ ತಿಳಿಸಿದ್ದಾರೆ.
ಗದಗ ಜಿಲ್ಲೆಯ ಡಾ.ಶರಣಪ್ಪ ಬಿಮ್ಸ್‌ನಲ್ಲಿ ಎಂಬಿಬಿಎಸ್ ಪೂರ್ಣಗೊಳಿಸಿದ್ದಾರೆ. ಅವರ ತಂದೆ ತುಳಸಪ್ಪ ಶಿಕ್ಷಕರಾಗಿದ್ದು, ತಾಯಿ ಶಶಿಕಲಾ ಗೃಹಿಣಿ.
‘ನಿತ್ಯ 10 ಗಂಟೆ ಓದುವುದು ರೂಢಿ. ಪ್ರತಿ ತಿಂಗಳು ಪ್ರಾಯೋಗಿಕ ಪರೀಕ್ಷೆಯಲ್ಲಿ ನೂರರ ಆಸುಪಾಸು ರ್‍ಯಾಂಕ್ ಬರುತಿತ್ತು. ಅದೇ ಪ್ರೇರಣೆಯಿಂದ ಹೆಚ್ಚು ಶ್ರಮಪಟ್ಟೆ. 9ನೇ ರ್‍ಯಾಂಕ್ ಪಡೆದೆ’ ಎಂದು ಡಾ.ಶರಣಪ್ಪ ಹೇಳಿದರು.
‘ಆರು ತಿಂಗಳಿಂದ ಮೊಬೈಲ್, ಟಿ.ವಿ, ಸಾಮಾಜಿಕ ಮಾಧ್ಯಮಗಳು ಸೇರಿ ಎಲ್ಲದರಿಂದಲೂ ದೂರ ಇದ್ದೆ. ಉತ್ತಮ ರ್‍ಯಾಂಕ್ ಪಡೆಯಲು ಇದೂ ಕಾರಣ’ ಎಂದರು.