ಗುರುವಾರ, 18 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನಿಪ್ಪಾಣಿ : ಕಾಳಮ್ಮವಾಡಿ ಜಲಾಶಯದಲ್ಲಿ ಮುಳುಗಿ ಇಬ್ಬರು ಯುವಕರ ಸಾವು

ಮಹಾರಾಷ್ಟ್ರದ ಕಾಳಮ್ಮವಾಡಿ ಜಲಾಶಯ
Published 1 ಜುಲೈ 2024, 15:52 IST
Last Updated 1 ಜುಲೈ 2024, 15:52 IST
ಅಕ್ಷರ ಗಾತ್ರ

ನಿಪ್ಪಾಣಿ (ಬೆಳಗಾವಿ ಜಿಲ್ಲೆ): ಮಹಾರಾಷ್ಟ್ರದ ಕಾಳಮ್ಮವಾಡಿ ಜಲಾಶಯ ನೋಡಲು ಪ್ರವಾಸಕ್ಕೆ ತೆರಳಿದ್ದ ನಿಪ್ಪಾಣಿಯ ಆಂದೋಲನ ನಗರದ ಗಣೇಶ ಚಂದ್ರಕಾಂತ ಕದಮ್‌ (18) ಮತ್ತು ಪ್ರತೀಕ ಪಾಟೀಲ (22) ನೀರು ಪಾಲಾಗಿದ್ದಾರೆ.

‘ಸಹಪಾಠಿಗಳು ತಂಡ ಮಾಡಿಕೊಂಡು ಕೊಲ್ಹಾಪುರ ಜಿಲ್ಲೆಯ ಕಾಳಮ್ಮವಾಡಿ ಜಲಾಶಯ ನೋಡಲು ತೆರಳಿದ್ದರು. ನೀರಿಗಿಳಿದ ಗಣೇಶ, ಈಜಲು ಬಾರದೇ ನೀರಿನ ಸೆಳವಿಗೆ ಸಿಲುಕಿದರು. ಅವರ ರಕ್ಷಣೆಗೆ ವಾಹನ ಚಾಲಕ ಪ್ರತೀಕ ಕೂಡ ನೀರಿಗಿಳಿದರು. ಉಳಿದವರು ದಡದಿಂದಲೇ ಕೂಗಾಡಿದರು. ತುಂಬಾ ಹೊತ್ತಿನವರೆಗೆ ಕಾದರೂ ನೀರಿಗಿಳಿದವರು ಮೇಲೆ ಬರಲೇ ಇಲ್ಲ’ ಎಂದು ಮೂಲಗಳು ತಿಳಿಸಿವೆ.

ರಾಧಾನಗರಿ ಠಾಣೆಯ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಶೋಧ ನಡೆಸಿದರೂ ಇಬ್ಬರೂ ಪತ್ತೆಯಾಗಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT