ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

21 ರಸ್ತೆಗಳಲ್ಲಿ ವಾಹನ ನಿಲುಗಡೆಗೆ ನಿಷೇಧ

ನಿಲುಗಡೆ ಮಾಡಿದರೆ ₹ 1,000 ದಂಡ;
Last Updated 6 ಜುಲೈ 2019, 16:14 IST
ಅಕ್ಷರ ಗಾತ್ರ

ಬೆಳಗಾವಿ: ನಗರದ ಕೇಂದ್ರ ಭಾಗದಲ್ಲಿರುವ 21 ರಸ್ತೆಗಳಲ್ಲಿ ವಾಹನಗಳ ನಿಲುಗಡೆ ನಿಷೇಧಿಸಿ ನಗರ ಪೊಲೀಸ್‌ ಆಯುಕ್ತ ಬಿ.ಎಸ್‌. ಲೋಕೇಶಕುಮಾರ್‌ ಆದೇಶ ಹೊರಡಿಸಿದ್ದಾರೆ.

ಚನ್ನಮ್ಮಾ ವೃತ್ತ ದಿಂದ ಕೃಷ್ಣದೇವರಾಯ ವೃತ್ತದವರೆಗಿನ ಡಾ.ಬಿ.ಆರ್.ಅಂಬೇಡ್ಕರ ರಸ್ತೆ, ಕೃಷ್ಣದೇವರಾಯ ವೃತ್ತದಿಂದ ಕೆಎಲ್‌ಇ ಛತ್ರಿ ವರೆಗಿನ ಕೆಎಲ್‌ಇ ಆಸ್ಪತ್ರೆ ರಸ್ತೆ, ಕೃಷ್ಣದೇವರಾಯ ವೃತ್ತದಿಂದ ಸಂಗೊಳ್ಳಿ ರಾಯಣ್ಣ ವೃತ್ತದವರೆಗಿನ ಹಳೆ ಪಿಬಿ ರಸ್ತೆ, ಚನ್ನಮ್ಮಾ ವೃತ್ತದಿಂದ ಸಂಗೊಳ್ಳಿ ರಾಯಣ್ಣ ವೃತ್ತದವರೆಗಿನ ಸಂಗೊಳ್ಳಿ ರಾಯಣ್ಣ ರಸ್ತೆ, ಸಂಗೊಳ್ಳಿ ರಾಯಣ್ಣ ವೃತ್ತದಿಂದ ಕಿಲ್ಲಾ ಕೆರೆ ಅಶೋಕ
ವೃತ್ತ, ಕಿಲ್ಲಾ ಕೆರೆ ಅಶೋಕ ವೃತ್ತದಿಂದ ಕನಕದಾಸ ವೃತ್ತದವರೆಗೆ, ಕಿಲ್ಲಾ ಕೆರೆ ಅಶೋಕ ವೃತ್ತದಿಂದ ಹೊಸ ಗಾಂಧಿ ನಗರ ವೃತ್ತದವರೆಗೆ, ಸರ್ಕಿಟ್ ಹೌಸ್‌ದಿಂದ ಮುಜಾವರ ಖೂಟವರೆಗೆ ನಿಷೇಧಿಸಲಾಗಿದೆ.

ಕೇಂದ್ರ ಬಸ್ ನಿಲ್ದಾಣದಿಂದ ವಿ.ಆರ್.ಎಲ್. ಲಾಜಿಸ್ಟಿಕ್ ವರೆಗಿನ ಹಳೆ ಪಿಬಿ ರಸ್ತೆ, ಧರ್ಮನಾಥ ಭವನದಿಂದ ಪೊಲೀಸ್ ಭವನವರೆಗಿನ
ನ್ಯಾಯಮಾರ್ಗ ರಸ್ತೆ, ರಾಮದೇವ ಹೊಟೇಲ್ ಕ್ರಾಸ್‌ದಿಂದ ಧರ್ಮನಾಥ ಭವನವರೆಗಿನ ರಸ್ತೆ, ಚನ್ನಮ್ಮ ಸರ್ಕಲ್ ಗಣೇಶ ಮಂದಿರ ಹಿಂದಿನಿಂದ ಪವನ್‌ ಹೊಟೇಲ್ ವರೆಗಿನ ಕಾಲೇಜ್ ರಸ್ತೆ, ಯಂಡೇಖೂಟದಿಂದ ಆರ್‌ಎಲ್‌ಎಸ್ ಕಾಲೇಜ್‌ವರೆಗಿನ ಕಾಲೇಜ್ ರಸ್ತೆ, ಯಂಡೇಖೂಟದಿಂದ ಬೋಗಾರವೇಸ್ ವರೆಗಿನ ಕಾಲೇಜ್ ರಸ್ತೆ, ಮಿಲನ್‌ ಹೊಟೇಲ್‌ನಿಂದ ಹರ್ಷಾ ಎಲೆಕ್ಟ್ರಾನಿಕ್ಸ್‌ವರೆಗಿನ ಕ್ಲಬ್ ರಸ್ತೆ,
ಗೊಂಧಳಿ ಗಲ್ಲಿ ಕ್ರಾಸ್‌ದಿಂದ ಐಡಿಬಿಐ ಬ್ಯಾಂಕ್‌ವರೆಗಿನ ಸಮಾದೇವಿ ಗಲ್ಲಿ ರಸ್ತೆ, ಬೋಗಾರವೇಸ್ ವೃತ್ತದಿಂದ ರಾಮಲಿಂಗಖಿಂಡಗಲ್ಲಿ ಕ್ರಾಸ್‌ವರೆಗಿನ ಕಿರ್ಲೋಸ್ಕರ ರಸ್ತೆ, ರೇಣುಕಾ ಹೊಟೇಲ್‌ ಕ್ರಾಸ್‌ದಿಂದ ಪ್ರಕಾಶ ಥಿಯೇಟರ್‌ವರೆಗಿನ ಎಸ್‌ಪಿ ರಸ್ತೆ. ಬ್ಯಾಂಕ್‌ ಆಫ್ ಇಂಡಿಯಾದಿಂದ ಶಿವಾಜಿ ಗಾರ್ಡನ್‌ ಗೇಟ್‌ವರೆಗಿನ ಎಸ್‌ಪಿಎಮ್ ರಸ್ತೆ ಹಾಗೂ ಆರ್‌ಪಿಡಿ ವೃತ್ತದಿಂದ ಭಾಗ್ಯ ನಗರ ಕ್ರಾಸ್‌ವರೆಗಿನ ಖಾನಾಪೂರ ರಸ್ತೆವರೆಗೆ ಎಲ್ಲ ಮಾದರಿಯ ವಾಹನಗಳ ನಿಲುಗಡೆಗೆ ನಿಷೇಧಿಸಲಾಗಿದೆ.

ದ್ವಿಚಕ್ರಗಳಿಗೆ ಮಾತ್ರ ಅವಕಾಶ:

ಸಮಾದೇವಿ ಗಲ್ಲಿಯಿಂದ [ಸಮಾದೇವಿ ಮಂದಿರ ಎದುರಿಗಿನ ರಸ್ತೆಯಿಂದ] ನಾರ್ವೇಕರ ಗಲ್ಲಿ. ರಿಸಲ್ದಾರ್‌ ಗಲ್ಲಿ ಮುಖಾಂತರ ಶನಿವಾರ ಖೂಟ ಸೇರುವ ಮಾರ್ಗದಲ್ಲಿ ದ್ವಿಚಕ್ರ ವಾಹನಗಳಿಗೆ ಮಾತ್ರ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ. ಇನ್ನಿತರ ವಾಹನಗಳ ನಿಲುಗಡೆಯನ್ನು ನಿಷೇಧಿಸಲಾಗಿದೆ.

₹ 1,000 ದಂಡ:

‘ನಿಷೇಧಿತ ಪ್ರದೇಶದಲ್ಲಿ ವಾಹನ ನಿಲುಗಡೆ ಮಾಡಿದರೆ ₹ 1,000 ದಂಡ ವಿಧಿಸಲಾಗುವುದು’ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT