ಹುಕ್ಕೇರಿ: ‘ರಾಷ್ಟ್ರೀಯ ಸೇವಾ ಯೋಜನೆಯು ಕಾಲೇಜು ಮಟ್ಟದ ವಿದ್ಯಾರ್ಥಿಗಳಲ್ಲಿ ಪ್ರತಿಯೊಂದು ಹಂತದಲ್ಲೂ ಬದಲಾವಣೆ ತರುತ್ತದೆ. ಸ್ವಯಂ ಸೇವಕರು ಶ್ರಮದ ಮಹತ್ವ ಅರಿತು ಗೌರವ ನೀಡುವುದನ್ನು ಕಲಿಯಬೇಕು’ ಎಂದು ಡಾ.ಅಮರ ಸಿದ್ಧೇಶ್ವರ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಹಿಡಕಲ್ ಡ್ಯಾಂನ ಬಸವೇಶ್ವರ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯವು ಪಡೆದ ದತ್ತು ಗ್ರಾಮ ಕುಂದರಗಿ ಗ್ರಾಮದ ಅಡವಿ ಸಿದ್ಧೇಶ್ವರ ಮಠದ ಆವರಣದಲ್ಲಿ ಏರ್ಪಡಿಸಿದ್ದ ಏಳು ದಿನಗಳ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ವ್ಯವಸ್ಥಾಪಕ ಶಿವಲಿಂಗಪ್ಪ ದೊಡವಾಡಮಠ ಮಾತನಾಡಿ, ಸಹಕಾರ, ಸಮನ್ವಯತೆ, ಶಿಸ್ತು ಕಲಿತು ಜವಾಬ್ದಾರಿಯುತ ನಾಗರಿಕರಾಗಲು ಸಲಹೆ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಪ್ರಾಚಾರ್ಯ ಎಂ.ಎಂ. ಅಂಗಡಿ ಅವರು ಏಳು ದಿನಗಳ ಕಾಲ ನಡೆಯುವ ವಾರ್ಷಿಕ ವಿಶೇಷ ಶಿಬಿರ ಕುರಿತು ವಿವರಿಸಿದರು.

ಎನ್ಎಸ್ಎಸ್ ಕಾರ್ಯಕ್ರಮ ಅಧಿಕಾರಿ ಬಿ.ಎಸ್. ತಳವಾರ, ಪ್ರೊ.ಎಂ.ಕೆ. ಹಮ್ಮಣ್ಣವರ, ಎಸ್.ಟಿ. ವಡ್ಡರ, ಎಸ್.ಕೆ. ಜಕ್ಕಾನಟ್ಟಿ. ಎ.ಎಚ್. ಸುಂಬಳಿ, ಎಸ್.ಡಿ. ಬಾಳಪ್ಪಗೋಳ, ವಿದ್ಯಾರ್ಥಿನಿ ವಿಜಯಲಕ್ಷ್ಮಿ ಚೌಗಲಾ ಪ್ರಾರ್ಥಿಸಿದರು. ಸ್ವಾತಿ ಚೌಗಲಾ, ಸುಪ್ರೀತಾ ಗಡ್ಕರಿ, ರಂಜಿತಾ ಕುರುಬಗಟ್ಟಿ, ಲಕ್ಷ್ಮಿ ಶಿಂಗೆ, ಸುಶ್ಮೀತಾ ಕಮತಿ, ಉಪನ್ಯಾಸಕ ಎಸ್.ಕೆ. ಸಣ್ಣಕ್ಕಿ ಇದ್ದರು. ಬಿ.ಎ. ಹಾಗೂ ಬಿ.ಕಾಂ ಅಂತಿಮ ವರ್ಷದ ವಿದ್ಯಾರ್ಥಿನಿಯರು ಎನ್ಎಸ್ಎಸ್ ಗೀತೆ ಹಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.