ಬೆಳಗಾವಿ: ಇಲ್ಲಿನ ಎಂಪಿಎಂಸಿಯಲ್ಲಿ ಹಮ್ಮಿಕೊಂಡಿರುವ ಒಂದೇ ಅಭಿವೃದ್ಧಿ ಕಾಮಗಾರಿಗೆ ಇಬ್ಬರು ಶಾಸಕರು ಕೆಲವೇ ಗಂಟೆಗಳ ಅಂತರದಲ್ಲಿ ಚಾಲನೆ ನೀಡಿದ್ದಾರೆ.

ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಬೆಳಿಗ್ಗೆ ಮತ್ತು ದಕ್ಷಿಣ ಕ್ಷೇತ್ರದ ಶಾಸಕ ಅನಿಲ ಬೆನಕೆ ಸಂಜೆ ಮುಖಂಡರೊಂದಿಗೆ ಪಾಲ್ಗೊಂಡು, ಕಾಮಗಾರಿಗೆ ಪೂಜೆ ನೆರವೇರಿಸಿದ್ದಾರೆ. ₹ 4 ಕೋಟಿ ವೆಚ್ಚದಲ್ಲಿ ಕೈಗೊಂಡಿರುವ ಮುಖ್ಯ ಮಾರುಕಟ್ಟೆ ಪ್ರಾಂಗಣದಲ್ಲಿ ಸಗಟು ತರಕಾರಿ ಮಾರುಕಟ್ಟೆ, ‘ಡಿ’ ಬ್ಲಾಕ್‌ನಲ್ಲಿ 35 ಅಂಗಡಿಗಳ ನಿರ್ಮಾಣ ಹಾಗೂ ಇವುಗಳಿಗೆ ಹೊಂದಿಕೊಂಡಂತೆ ಚರಂಡಿ, ಕಾಂಕ್ರೀಟ್ ರಸ್ತೆ ನಿರ್ಮಿಸುವುದು, ಸಗಟು ತರಕಾರಿ ಮಾರುಕಟ್ಟೆ ಬ್ಲಾಕ್ ‘ಎ’ನಲ್ಲಿನ ನೆಲಮಾಳಿಗೆಯಲ್ಲಿ 18 ಮಳಿಗೆಗಳನ್ನು ನಿರ್ಮಿಸುವುದು, ಜೊತೆಗೆ ರೈತ ಭವನ ಕಟ್ಟಡ ಹಾಗೂ ಅತಿಥಿಗೃಹದ ನವೀಕರಣ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.

ಶಾಸಕರೊಂದಿಗೆ ಎಪಿಎಂಸಿ ಅಧ್ಯಕ್ಷ ಯುವರಾಜ ಕದಮ್, ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷ ಅರುಣ ಕಟಾಂಬಳೆ, ಎಪಿಎಂಸಿ ಸದಸ್ಯರಾದ ಸುಧೀರ ಗಡ್ಡೆ, ಸಂಜು ಮಾದರ, ಆನಂದ ಪಾಟೀಲ, ಮನೋಜ ಮತ್ತಿಕೊಪ್ಪ, ಆರ್.ಕೆ. ಪಾಟೀಲ, ಲಗಮಣ್ಣ ನಾಯ್ಕ, ಪಡಿಗೌಡ ಪಾಟೀಲ, ಮಹೇಶ ಗೋವೆಕರ, ಮಹೇಶ ಗುಬ್ಬಿ, ನಿಂಗಪ್ಪ ಬಸ್ಸಾಪೂರ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.