ಬೆಳಗಾವಿ: ಕರ್ನಾಟಕ ಲಿಂಗಾಯತ ಶಿಕ್ಷಣ ಸಂಸ್ಥೆಯ (ಕೆಎಲ್ಇ) ಸುವರ್ಣ ಯುಗದ ಹರಿಕಾರ, ಸಂಸ್ಥೆಯ ‘ಅಷ್ಟಮ ಋಷಿ’, ಉತ್ತರ ಕರ್ನಾಟಕದ ಶಿಕ್ಷಣ ಕ್ಷೇತದ ‘ಪ್ರಭಾಕರ’ ಎಂದೆಲ್ಲ ಕರೆಯಿಸಿಕೊಂಡವರು ಪ್ರಭಾಕರ ಕೋರೆ. ಆ ಎಲ್ಲ ಬಿರುದಾವಳಿಗಳಿಗೂ ಅವರದು ಹೇಳಿಮಾಡಿಸಿದ ವ್ಯಕ್ತಿತ್ವ. ಇಡೀ ಬದುಕನ್ನು ಸಮಾಜ ಸೇವೆ, ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳಿಗೆ ಮೀಸಲಿಟ್ಟ ಅವರಿಗೆ ಈಗ ‘ಪದ್ಮಶ್ರೀ’ ಒಲಿದುಬಂದಿದೆ.

ಪ್ರಭಾಕರ ಕೋರೆ ಅವರಿಗೆ ಈಗ 78ರ ಹರೆಯ. ಅವರು ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷರಾಗಿ ನಾಲ್ಕು ದಶಕ ಕಳೆದಿವೆ. ಅಂದರೆ ಬದುಕಿನ ಶೇ 70ರಷ್ಟು ಭಾಗವನ್ನು ಅವರು ಸಂಸ್ಥೆಗಾಗಿಯೇ ಸವೆಸಿದ್ದಾರೆ. ಸಂಸ್ಥೆಯ ನಿರ್ದೇಶಕರಾಗಿ ಆಯ್ಕೆಯಾದ ಮೊದಲ ವರ್ಷವೇ ಕಾರ್ಯಾಧ್ಯಕ್ಷರೂ ಆಗಿದ್ದು ಅವರಲ್ಲಿನ ಕರ್ತೃತ್ವ ಶಕ್ತಿಯ ಪ್ರತೀಕ.

ಕಾರ್ಯಾಧ್ಯಕ್ಷರಾದಾಗ ಅವರಿಗೆ ಕೇವಲ 38 ವರ್ಷ. ನಾಲ್ಕು ದಶಕಗಳಲ್ಲಿ 50 ಅಂಗ ಸಂಸ್ಥೆಗಳನ್ನು ಸ್ಥಾಪಿಸಿದರು. ಶಿಕ್ಷಣದ ಜತೆಗೆ ಆರೋಗ್ಯ, ಕೃಷಿ, ಸಾಹಿತ್ಯ, ಸಹಕಾರ ಕ್ಷೇತ್ರಗಳಲ್ಲೂ ಅವರದು ದೊಡ್ಡ ಸಾಧನೆ. ವಿಶ್ವಮಟ್ಟದಲ್ಲಿ ಅವರಿಗೆ ಇರುವ ದೊಡ್ಡ ಸಂಪರ್ಕಗಳು, ದೂರದೃಷ್ಟಿ ಮತ್ತು ಭವಿಷ್ಯದ ಬಗ್ಗೆ ಇದ್ದ ಮುನ್ನೋಟವೇ ಅವರನ್ನು ಈ ಸ್ಥಾನಕ್ಕೇರಿಸಿದೆ ಎಂಬದು ಅವರ ಆಪ್ತರ ಅಭಿಮತ.

ಶತಮಾನದ ಹಿಂದೆ ಕೆಎಲ್ಇ ಸಂಸ್ಥೆಯನ್ನು ಏಳು ಜನ ಶಿಕ್ಷಕರು ಹುಟ್ಟುಹಾಕಿದರು. ಅವರೆಲ್ಲ ಉನ್ನತ ಶಿಕ್ಷಣ ಪಡೆದವರು. ಬ್ರಿಟಿಷ್ ಸರ್ಕಾರದಲ್ಲಿ ದೊಡ್ಡ ಹುದ್ದೆ ಪಡೆದು, ರಾಜರಂತೆ ಬದುಕಬಹುದಿತ್ತು. ಆದರೆ, ಉತ್ತರ ಕರ್ನಾಟಕ ಭಾಗದ ಜನ ಶಿಕ್ಷಣದಿಂದ ವಂಚಿತರಾಗಿದ್ದಾರೆ, ಅವರಿಗೆ ಸಾಮಾಜಿಕ ಪ್ರಜ್ಞೆ, ಸ್ವಾತಂತ್ರ್ಯ ಹಂಬಲ ಬರಬೇಕೆಂದರೆ ಶಿಕ್ಷಣದ ಮೂಲಕವೇ ಸಾಧ್ಯ ಎಂದು ನಿರ್ಧರಿಸಿದರು. ಎಲ್ಲರೂ ಒಂದಾಗಿ ಶಿಕ್ಷಣ ಸಂಸ್ಥೆ ಆರಂಭಿಸಿದರು.

ಹಾಗಾಗಿ, ಅವರನ್ನು ‘ಕೆಎಲ್ಇ ಸಂಸ್ಥೆಯ ಸಪ್ತರ್ಷಿಗಳು’ ಎಂದು ಕರೆಯುತ್ತಾರೆ. 42 ವರ್ಷಗಳ ಹಿಂದೆ ಇದೇ ಸಂಸ್ಥೆಯ ನೊಗ ಹೊತ್ತ ಪ್ರಭಾಕರ ಕೋರೆ ವಿಶ್ವವ್ಯಾಪಿಯಾಗಿ ಬೆಳೆಸಿದರು. ಅಂಕಲಿ ಎಂಬ ಸಣ್ಣ ಹಳ್ಳಿಯಲ್ಲಿ ಹುಟ್ಟಿದ ಹುಡಗ ಜಗತ್ತೇ ನೋಡುವಂತೆ ಬೆಳೆದಿದ್ದು ಪವಾಡವೇ ಸರಿ. ಕೋರೆ ಅವರು ಧೀಮಂತ ವ್ಯಕ್ತಿಯಾಗಿ ಬೆಳೆಯಲು ಮುಖ್ಯ ಕಾರಣ ಅವರಲ್ಲಿನ ಸಕಾರಾತ್ಮಕ ಆಲೋಚನೆಗಳು. ಅಸಾಧ್ಯ ಎಂಬ ಪದವನ್ನೇ ಅಳಿಸಿ ಹಾಕುವ ಮಟ್ಟಿಗೆ ಅವರು ಸಕಾರಾತ್ಮಕ ಯೋಚನೆ ಮಾಡುತ್ತಾರೆ.

78ರ ಹರೆಯದಲ್ಲೂ ಅದಮ್ಯ ಉತ್ಸಾಹ, ಅನನ್ಯ ಕ್ರಿಯಾಶೀಲತೆ, ದಣಿವರಿಯದ ದುಡಿಮೆ, ಹೊಸದನ್ನು ಮಾಡುವ ಯೋಜನೆ, ದೊಡ್ಡದನ್ನು ಸಾಧಿಸುವ ಹುಮ್ಮಸ್ಸು, ದೂರದರ್ಶಿತ್ವ ಅವರ ವ್ಯಕ್ತಿತ್ವದ ಅಸ್ಮಿತೆಗಳು. ರಾಜಕಾರಣಿಯಾಗಿ, ಮುತ್ಸದ್ದಿಯಾಗಿ, ಸಹಕಾರಿ ಧುರೀಣರಾಗಿ, ಶಿಕ್ಷಣ ತಜ್ಞರಾಗಿ, ನಾಡು–ನುಡಿಗಳ ಅಭಿಮಾನಿಯಾಗಿ ಅವರು ಬಹು ವ್ಯಕ್ತಿತ್ವದ ಸಮುದ್ರವೇ ಆಗಿದ್ದಾರೆ.

ಸಾಧನೆಯ ಸಂಕ್ಷಿಪ್ತ ನೋಟ:

1947ರ ಆಗಸ್ಟ್ 1ರಂದು ಜನಿಸಿದ ಪ್ರಭಾಕರ ಕೋರೆ, ಬಿ.ಕಾಂ ಪದವೀಧರರು. ಶಿಕ್ಷಣ, ಕೃಷಿ, ಸಹಕಾರ, ರಾಜಕೀಯ ವಲಯ, ಚಲನಚಿತ್ರ ಉದ್ಯಮ ಮತ್ತು ಸಾಮಾಜಿಕ ಕೆಲಸಗಳಲ್ಲಿ ತೊಡಗಿಸಿ ಕೊಂಡಿದ್ದಾರೆ. ಮೂರು ಅವಧಿಗೆ(1990-1996, 2008-2014, 2014-2020) ರಾಜ್ಯಸಭಾ ಸದಸ್ಯರಾಗಿ, 2001ರಿಂದ 2007ರವರೆಗೆ ವಿಧಾನ ಪರಿಷತ್ ಸದಸ್ಯರಾಗಿ ಕರ್ತವ್ಯ ನಿರ್ವಹಣೆ. 1984ರಲ್ಲಿ ಕೆಎಲ್ಇ ಸಂಸ್ಥೆ ಕಾರ್ಯಾಧ್ಯಕ್ಷರಾಗಿ ಅಧಿಕಾರ ಹಿಡಿದಾಗ ಇದ್ದ ಅಂಗಸಂಸ್ಥೆಗಳ ಸಂಖ್ಯೆ 38 ರಿಂದ 317ಕ್ಕೆ ಏರಿಕೆ.

ಕಳೆದ 42 ವರ್ಷಗಳಿಂದ ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷರಾಗಿ ದಾಖಲೆ ಆಡಳಿತ ನಡೆಸಿದ ಪ್ರಭಾಕರ ಕೋರೆ. ಅವರ ಅವಧಿಯಲ್ಲಿ ಸಂಸ್ಥೆಯ ‘ಸುವರ್ಣ ಯುಗ’ ಎಂದೇ ಸದಸ್ಯರು ಪರಿಗಣಿಸುತ್ತಾರೆ. ಉತ್ತರ ಕರ್ನಾಟಕದ ಮಕ್ಕಳ ಶಿಕ್ಷಣಕ್ಕಾಗಿ ಸಪ್ತರ್ಷಿಗಳು ಸ್ಥಾಪಿಸಿದ ಸಂಸ್ಥೆಯ ಶತಮಾನೋತ್ಸವ ದಾಟಿದೆ. 1.25 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು, 16 ಸಾವಿರಕ್ಕೂ ಹೆಚ್ಚು ಸಿಬ್ಬಂದಿ, ಬೃಹತ್ ಆಸ್ಪತ್ರೆಗಳನ್ನು ಹೊಂದಿದ ಸಂಸ್ಥೆಯ ಬಜೆಟ್ ₹3 ಸಾವಿರ ಕೋಟಿ ದಾಟಿದೆ.

ಕರ್ನಾಟಕ, ಮಹಾರಾಷ್ಟ್ರ, ದೆಹಲಿ ಸೇರಿದಂತೆ, ವಿದೇಶಗಳಲ್ಲೂ ಶಾಲೆ– ಕಾಲೇಜು ಆರಂಭಿಸಿದ್ದಾರೆ. ಅತ್ಯಾಧುನಿಕ ಸೌಲಭ್ಯ ಹೊಂದಿದ ಒಟ್ಟು 5,000 ಬೆಡ್ನ ಆಸ್ಪತ್ರೆಗಳನ್ನು ಅವರು ಕಟ್ಟಿಸಿದ್ದಾರೆ.

2006 ಮತ್ತು 2009ರಲ್ಲಿ ಕೆಎಲ್ಇ ಸಂಸ್ಥೆಯ ಜೆಎನ್ಎಂಸಿ ಆವರಣದಲ್ಲಿ ಎರಡು ಬಾರಿ ಕರ್ನಾಟಕ ವಿಧಾನಮಂಡಲ ಅಧಿವೇಶನ ಆಯೋಜಿಸಿದ್ದಾರೆ. 2011ರಲ್ಲಿ ಬೆಳಗಾವಿಯಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಬೆಳಗಾವಿಯಲ್ಲಿ ಸುವರ್ಣ ವಿಧಾನಸೌಧ ನಿರ್ಮಾಣದಲ್ಲಿ ಮಹತ್ವದ ಪಾತ್ರ ನಿರ್ವಹಣೆ.

ಪ್ರಶಸ್ತಿ, ಬಿರುದು, ಪುರಸ್ಕಾರಗಳು:

ಶೈಕ್ಷಣಿಕ ಸೇವೆ ಪರಿಗಣಿಸಿ ಅಮೆರಿಕದ ಥಾಮಸ್ ಜಾಫರ್ಸನ್ ಯೂನಿವರ್ಸಿಟಿ ಗೌರವ ಡಾಕ್ಟರೇಟ್ ನೀಡಿದೆ. ಪ್ರಭಾಕರ ಕೋರೆ ಈ ಗೌರವ ಪಡೆದ ಮೊದಲ ಕನ್ನಡಿಗ. ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದ ಹಲವು ಪ್ರಶಸ್ತಿಗಳೂ ಅವರನ್ನು ಅರಸಿ ಬಂದಿವೆ.

2008ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ಹಾಗೂ 2013ರಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯಗಳು ಅವರ ಶೈಕ್ಷಣಿಕ ಸೇವೆಯನ್ನು ಪರಿಗಣಿಸಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದವು. ನ್ಯೂಯಾರ್ಕ್ನ ವೀರಶೈವ ಸಮಾಜ ಜೀವಮಾನ ಸಾಧನೆಗಾಗಿ ಪ್ರಶಸ್ತಿ ನೀಡಿತು. 2015ರಲ್ಲಿ ಮಲೇಶಿಯಾದ ಯು.ಎಸ್.ಎಂ. ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿತು. 2013ರಲ್ಲಿ ಭಾರತದ ಕೈಗಾರಿಕಾ ದಿಗ್ಗಜ ರತನ್ ಟಾಟಾ ಅವರು ಹುಬ್ಬಳ್ಳಿಯಲ್ಲಿ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಿದರು. ಕರ್ನಾಟಕ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿದೆ.

‘ಉಸಿರು ಇರುವವರೆಗೂ ಜನಸೇವೆ’:

‘ಹಿಂದಿನಿಂದಲೂ ಉತ್ತರ ಕರ್ನಾಟಕದಲ್ಲಿ ಶಿಕ್ಷಣದ ಕೊರತೆ ಇತ್ತು. ಮುಂಬೈ ಪ್ರಾಂತ್ಯ ಶಿಕ್ಷಣದಿಂದ ವಂಚಿತವಾಗಿತ್ತು. ಹಾಗಾಗಿ ಗಡಿಭಾಗದ ಹಳ್ಳಿ–ಹಳ್ಳಿಗಳ ಜನರಿಗೆ ಶಿಕ್ಷಣ ಒದಗಿಸಲು ಕೆಲಸ ಮಾಡಿದೆ. ಗಡಿಭಾಗದಲ್ಲಿ ಕನ್ನಡ ಕಟ್ಟಿ ಬೆಳೆಸುವ ಕೆಲಸ ಮಾಡಿದೆ. ನಿಪ್ಪಾಣಿಯಲ್ಲಿ ಮೊದಲ ಕನ್ನಡ ಶಾಲೆ ತೆರೆದೆ. ಇದನ್ನು ಗುರುತಿಸಿ ಕೇಂದ್ರವು ಪದ್ಮಶ್ರೀ ಪ್ರಶಸ್ತಿ ನೀಡಿರುವುದು ಸಂತಸ ತಂದಿದೆ’ ಎಂದು ಪ್ರಭಾಕರ ಕೋರೆ ಖುಷಿಪಟ್ಟರು.

‘ಪ್ರಜಾವಾಣಿ’ ಜತೆಗೆ ಸಂತಸ ಹಂಚಿಕೊಂಡ ಅವರು, ‘ಯಾವುದೇ ಪ್ರಶಸ್ತಿಗಾಗಿ ನಾನು ಕೆಲಸ ಮಾಡಿದವನಲ್ಲ. ನನ್ನ ಉಸಿರು ಇರುವತನಕ ಸಾಮಾಜಿಕ ಸೇವೆ ಮುಂದುವರಿಸುತ್ತೇನೆ’ ಎಂಬ ಹಂಬಲವನ್ನೂ ಹೊರಹಾಕಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.