ಮಂಗಳವಾರ, ಜೂನ್ 28, 2022
21 °C

ಚೌಗಲೆ ಚಿತ್ರಕಲಾ ಪ್ರದರ್ಶನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಇಲ್ಲಿನ ಚಿತ್ರಕಲಾವಿದ ಹಾಗೂ ನಾಟಕಕಾರ ಡಾ.ಡಿ.ಎಸ್. ಚೌಗಲೆ ಅವರ ಚಿತ್ರಕಲಾಕೃತಿಗಳ ‘ದಿ ನೇಚರ್ ವಿದಿನ್’ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನವು ಮೇ 23ರಿಂದ 31ರವರೆಗೆ ಬೆಳಿಗ್ಗೆ 10.30ರಿಂದ ಸಂಜೆ 7ರವರೆಗೆ ಬೆಂಗಳೂರಿನ ಕುಮಾರಕೃಪಾ ರಸ್ತೆಯ ಕರ್ನಾಟಕ ಚಿತ್ರಕಲಾ ಪರಿಷತ್ತಿನ ಗ್ಯಾಲರಿ ನಂ.1ರಲ್ಲಿ ನಡೆಯಲಿದೆ.

ಮೇ 23ರಂದು ಸಂಜೆ 5ಕ್ಕೆ ಚಲನಚಿತ್ರ ನಟಿ ಪವಿತ್ರಾ ಲೋಕೇಶ್ ಉದ್ಘಾಟಿಸಲಿದ್ದಾರೆ. ಮುಖ್ಯಅತಿಥಿಯಾಗಿ ಕೆಎಂಎಫ್‌ ವ್ಯವಸ್ಥಾಪಕ ನಿರ್ದೇಶಕ ಬಿ.ಸಿ. ಸತೀಶ್‌ ಪಾಲ್ಗೊಳ್ಳಲಿದ್ದಾರೆ. ಪ್ರದರ್ಶನವನ್ನು ಕೆಎಂಎಫ್‌ ಪ್ರಾಯೋಜಿಸಿದೆ ಎಂದು ಚೌಗಲೆ ತಿಳಿಸಿದ್ದಾರೆ.

ಮಾರಾಟ ಮೇಳ 21ರಿಂದ

ಬೆಳಗಾವಿ: ಇಲ್ಲಿನ ‘ಕ್ರಿಯೇಟಿವ್ ಸೋಲ್ಸ್’ ವತಿಯಿಂದ ಮೇ 21 ಹಾಗೂ 22ರಂದು ‘ಸಮ್ಮರ್‌ ಪಾಪ್‌ಅಪ್’ ವಿವಿಧ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ನಗರದ ಕ್ಲಬ್ ರಸ್ತೆಯಲ್ಲಿರುವ ಈಫಾ ಹೋಟೆಲ್‌ನಲ್ಲಿ ಬೆಳಿಗ್ಗೆ 11ರಿಂದ ರಾತ್ರಿ 8ರವರೆಗೆ ಹಮ್ಮಿಕೊಳ್ಳಲಾಗಿದೆ.

ನವದೆಹಲಿ, ವಾರಣಾಸಿ, ಆಗ್ರಾ, ಇಂದೋರ್, ಮುಂಬೈ, ಕೊಲ್ಹಾಪುರ, ಗೋವಾ, ಬೆಂಗಳೂರು ಮತ್ತು ಬೆಳಗಾವಿಯಿಂದ ಆಯ್ದ ಪ್ರದರ್ಶನಕಾರರು ಭಾಗವಹಿಸಲಿದ್ದಾರೆ. ಡಿಸೈನರ್ ಸೂಟ್‌ಗಳು, ಸೆಮಿ-ಸ್ಟಿಚ್ಡ್ ಮತ್ತು ಅನ್‌ಸ್ಟಿಚ್ಡ್ ಸೂಟ್‌ಗಳು, ಶರರಾಸ್, ಕಫ್ತಾನ್ಸ್, ಇಂಡೋ-ವೆಸ್ಟರ್ನ್ ವೇರ್, ಫ್ಯೂಷನ್ ವೇರ್, ಕುರ್ತಾಗಳ ವಿಶೇಷ ಸಂಗ್ರಹಗಳು ಲಭ್ಯವಿರಲಿವೆ. ವಿವಿಧ ಆಭರಣಗಳು ಕೂಡ ದೊರೆಯಲಿವೆ. ಆಸಕ್ತರು ಹೆಚ್ಚಿನ ಮಾಹಿತಿಗೆ ಮೊ.ಸಂಖ್ಯೆ: 9480787820 ಡಾ.ಅನುಪಮಾ ಜೋಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.